ಬಿಡದಿ ಮಠದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದ ನಿತ್ಯಾನಂದ ಸ್ವಾಮಿ ಬಗ್ಗೆ ಎಲ್ಲರಿಗೂ ಗೊತ್ತು. ತನ್ನನ್ನು ತಾನು ಸ್ವಯಂಘೋಷಿತ ದೇವರು ಎಂದೇ ಕರೆದುಕೊಳ್ಳುವ ವಿವಾದಿತ ವ್ಯಕ್ತಿ ನಿತ್ಯಾನಂದ. ಸದಾ ಸುದ್ದಿಯಲ್ಲಿರುವ ನಿತ್ಯಾನಂದ ಇದೀಗ ತನ್ನ ಕೈಲಾಸ ದೇಶದಲ್ಲಿ ಉದ್ಯೋಗಾವಕಾಶ ಇದೆ ಎಂದು ಕರೆ ನೀಡಿದ್ದಾರೆ. ನಿತ್ಯಾನಂದ ಉದ್ಯೋಗಾಕಾಂಕ್ಷಿಗಳಿಗೆ ಈ ಕರೆ ನೀಡಿದ್ದು ಸದ್ಯ ವೈರಲ್ ಆಗಿದೆ.
ನಿತ್ಯಾನಂದ ಸ್ವಾಮಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ತನಗೆ ಅನಾರೋಗ್ಯ ಆದ ಕಾರಣ ಸರಿಯಾದ ವ್ಯವಸ್ಥೆ ಮಾಡಿಕೊಡಿ ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದಿದ್ದ ಎಂದು ಹೇಳಲಾಗಿತ್ತು ಶ್ರೀಲಂಕಾದ ದ್ವೀಪ ಒಂದರಲ್ಲಿ ಕೈಲಾಸಂ ಎನ್ನುವ ತನ್ನದೇ ಸ್ವಂತ ಪ್ರತ್ಯೇಕ ದೇಶವನ್ನು ನಿರ್ಮಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಮಾಹಿತಿಯು ಇತ್ತು.
ಆದರೆ ನಿಜವಾಗಿ ನಿತ್ಯಾನಂದ ಸ್ವಾಮಿಯ ಕೈಲಾಸ ಎಲ್ಲಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಏನು ನಿತ್ಯಾನಂದ ಸ್ವಾಮಿ ಇತ್ತೀಚಿಗೆ ದೇಶದಲ್ಲಿ ಇರುವ ಎಲ್ಲಾ ಗರ್ಭಿಣಿ ಸ್ತ್ರೀಯರು ಕೈಲಾಸಂ ಗೆ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಬರಬೇಕು ಇಲ್ಲಿ ನಿಮಗೆ ಹುಟ್ಟುವ ಮಕ್ಕಳಿಗೆ ವಿಶೇಷವಾದ ಶಕ್ತಿಯನ್ನು ದಯಪಾಲಿಸುತ್ತೇನೆ.
ಎಂದು ಹೇಳಿಕೆ ನೀಡಿದರು ಇದು ಕೂಡ ತುಂಬಾನೇ ವೈರಲ್ ಆಗಿತ್ತು. ಇದೀಗ ನಿತ್ಯಾನಂದ ಮಾಡಿದ ಮತ್ತೊಂದು ಅನೌನ್ಸ್ಮೆಂಟ್ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದೇನು ಗೊತ್ತಾ? ಕಾಸಿದ್ರೆ ಕೈಲಾಸ ಎನ್ನುವ ಮಾತಿದೆ ಆದರೆ ನಿತ್ಯಾನಂದ ಕಾಸು ಇಲ್ಲದಿದ್ದರೂ ಸರಿ ಕೈಲಾಸದಲ್ಲಿ ಕೈತುಂಬ ಕೆಲಸ ನೀಡುತ್ತೇನೆ ಎಂದು ಹೇಳಿದ್ದಾರೆ ಸಿಕ್ಕಾಪಟ್ಟೆ ಉದ್ಯೋಗಾವಕಾಶಗಳಿವೆಯಂತೆ.
ಇಲ್ಲಿ ಬೇರೆ ಬೇರೆ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ. ಇನ್ನು ಉದ್ಯೋಗ ಸೇರುವವರಿಗೆ ಆಕರ್ಷಕ ವೇತನ ವಸತಿ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದಾಗಿಯೂ ಕೈಲಾಸದಿಂದ ಬಂದಿರುವ ಪ್ರಕಟಣೆಯಲ್ಲಿ ನಮೂದಿಸಲಾಗಿದೆ.
ಇನ್ನು ಕೈಲಾಸ ವಿವಿಧ ಶಾಖೆಗಳನ್ನು ಹೊಂದಿದ್ದು ಅಲ್ಲಿಯೂ ಉತ್ತಮ ಸಂಬಳದೊಂದಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ ನಿತ್ಯಾನಂದ. ಒಂದು ವರ್ಷ ಕೈಲಾಸ ಭಾರತೀಯ ಶಾಖೆಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಕೈಲಾಸದ ಇತರ ಶಾಖೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ ವಿದೇಶಕ್ಕೆ ಹೋಗಬಹುದು ಜೊತೆಗೆ ಆಕರ್ಷಕ ಸಂಬಳವೂ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನೀತ್ಯಾನಂದರ ದೇಶದಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ ಗೊತ್ತಾ? ಸಾಗರೊತ್ತರ ದೇವಾಲಯಗಳು, ಭಾರತದಲ್ಲಿನ ಕೈಲಾಸ ದೇವಾಲಯಗಳು, ಕೈಲಾಸ ವಿದೇಶಿ ರಾಯಭಾರಿ ಕಚೇರಿ, ಕೊಳಾಯಿ ಮತ್ತು ಎಲೆಕ್ಟ್ರಿಕ್ ಘಟ,ಕ ಕೈಲಾಸ ಐಟಿ ಇಲಾಖೆ, ಗ್ರಂಥಾಲಯ ಹೀಗೆ ಮೊದಲಾದ ಸ್ಥಳಗಳಲ್ಲಿ ಉದ್ಯೋಗ ಖಾಲಿ ಇದೆ.
ಅರ್ಹ ಅಭ್ಯರ್ಥಿಗಳು ಭಾರತೀಯ ವಿವಿಧ ಶಾಖೆಗಳಲ್ಲಿ ಒಂದು ವರ್ಷ ತರಬೇತಿ ಪಡೆದು ನಂತರ ಕಾರ್ಯ ನಿರ್ವಹಿಸಬಹುದು. ತರಬೇತಿಯ ಸಮಯದಲ್ಲಿಯೂ ಉಚಿತ ಊಟ ವಸತಿ ವೈದ್ಯಕೀಯ ವ್ಯವಸ್ಥೆ ಹಾಗೂ ಸಂಬಳವನ್ನು ಕೂಡ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಕೈಲಾಸದಿಂದ ಪ್ರಕಟಣೆ ಹೊರಡಿಸಿದೆ.