ಸೆಲೆಬ್ರಿಟಿಗಳು ಆಗಾಗ್ಗೆ ಏನಾದರೂ ಒಂದು ವಿಚಾರದಿಂದ ಸುದ್ದಿ ಆಗುತ್ತಲೇ ಇರುತ್ತಾರೆ. ಹೆಚ್ಚಾಗಿ ನಟಿ ಮಣಿಯರು ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ವಿಶೇಷ ರೀತಿಯ ಕಾಸ್ಟ್ಯೂಮ್ ಗಳಿಂದ ಸುದ್ದಿಯಾದರೆ ಇನ್ನು ಕೆಲವೊಮ್ಮೆ ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಾರೆ. ಇನ್ನು ಕೆಲವೊಮ್ಮೆ ಅಫೇರ್ ಗಳ ವಿಷಯವಾಗಿ ಹಾಟ್ ಟಾಪಿಕ್ ಆಗುತ್ತಾರೆ. ಅದೇ ರೀತಿ ಕೆಲವೊಮ್ಮೆ ಕೆಲವೊಂದು ವಿವಾದಾತ್ಮಕ ಹೇಳಿಕೆ ಮೂಲಕ ಭಾರೀ ಸುದ್ದಿಯಾಗುತ್ತಾರೆ. ಇದೀಗ ಅದೇ ರೀತಿ ಸುದ್ದಿ ಯಲ್ಲಿ ಇರುವ ನಟಿ ಪ್ರಿಯಾ ಆನಂದ್.
ಹೌದು, ನಟಿ ಪ್ರಿಯಾ ಆನಂದ್ ಅವರು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯಿದ್ದ ಇವರು 2008 ರಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಆ ನಂತರ 2009 ರಲ್ಲಿ ತೆರೆಕಂಡ ತಮಿಳು ಚಿತ್ರ `ವಾಮನಂ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಡೈರಿ ಮಿಲ್ಕ್ ,ಪ್ರಿನ್ಸ್ ಜ್ಯುವೆಲರಿ ಮುಂತಾದ ಜಾಹೀತಾರುಗಳಲ್ಲಿ ಕೂಡ ನಟಿಸಿದ್ದಾರೆ.
ಇವರು ಕನ್ನಡದಲ್ಲಿ ದಿವಂಗತ ಪುನೀತ್ ರಾಜ್‍ಕುಮಾರ್ ಜೊತೆ ರಾಜಕುಮಾರ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ರಂಗಕ್ಕೆ ಕಾಲಿಟ್ಟಿದ್ದರು. ಆ ನಂತರ ಪುನೀತ್ ರಾಜ್‍ಕುಮಾರ್ ಅವರ ಜೊತೆ ಜೇಮ್ಸ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಅದೇ ರೀತಿ ಹಿಂದಿಯಲ್ಲಿ `ರಂಗ್ರೇಜ್’, `ಪಕ್ರಿ’, `ಇಂಗ್ಲೀಷ್ ವಿಂಗ್ಲೀಷ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಕ್ಯೂಟ್ ನಟಿ ಪ್ರಿಯಾ ಆನಂದ್ ಇದೀಗ ಒಂದು ಹೇಳಿಕೆ ಕೊಟ್ಟು ಎಲ್ಲರನ್ನು ದಿಗ್ಭ್ರಾಂತ ಗೊಳಿಸಿದ್ದಾರೆ.
ಹೌದು, ಪ್ರಿಯಾ ಆನಂದ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಒಂದು ಸಂದರ್ಶನದಲ್ಲಿ ತಾನು ಯಾರನ್ನು ಮದುವೆ ಆಗಲು ಬಯಸಿದ್ದೇನೆ ಅನ್ನುವುದನ್ನು ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ. ಹೌದು, ನಾನೇ ದೇವರೆಂದು ಘೋಷಿಸಿಕೊಂಡಿರುವ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗುವುದಾಗಿ ನಾಯಕಿ ಪ್ರಿಯಾ ಆನಂದ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ನಿತ್ಯಾನಂದ ಸ್ವಾಮಿ ಅಂದರೆ ನನಗೆ ಇಷ್ಟ, ಅವರಿಗೆ ಎಲ್ಲರನ್ನು ಹೇಗೆ ಸಂತೋಷವಾಗಿ ಇಡಬೇಕು ಅನ್ನುವುದು ಗೊತ್ತು.
ಅವರಲ್ಲಿ ಏನೋ ಒಂದು ವಿಶೇಷತೆ ಇದೆ, ಹಾಗಾಗಿಯೇ ದೊಡ್ಡ ಸಾಧನೆ ಮಾಡಿದ್ದಾರೆ. ಇನ್ನು ನನ್ನ ಹೆಸರು ಪ್ರಿಯಾ ಆನಂದ್, ಹಾಗಾಗಿ ನಿತ್ಯಾನಂದ ಸ್ವಾಮಿಯನ್ನು ಮದುವೆ ಆದರೆ ನನ್ನ ಹೆಸರನ್ನು ಬದಲಾಯಿಸಬೇಕಾಗಿಲ್ಲ ಎಂದು ನಗುತ್ತಾ ಹೇಳಿದ್ದಾರೆ. ಪ್ರಿಯಾ ಆನಂದ್ ಅವರು ಹೆಚ್ಚಾಗಿ ಹಾಸ್ಯ ಮಾಡುತ್ತಿರುತ್ತಾರೆ, ಹಾಗಾಗಿ ಇದು ಕೂಡ ಇವರು ಹಾಸ್ಯಕ್ಕೆ ಹೇಳಿರಬಹುದು. ಆದರೆ ಆ ಹೇಳಿಕೆ ಮಾತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ಇನ್ನು ಪ್ರಿಯಾ ಆನಂದ್ ಅವರ ಹೇಳಿಕೆ ಒಂದು ವೇಳೆ ನಿತ್ಯಾನಂದ ಸ್ವಾಮಿಗಳ ಹತ್ತಿರ ತಲುಪಿದರೆ ನಿತ್ಯಾನಂದ ಸ್ವಾಮಿಗಳು ಏನು ಹೇಳಬಹುದು ಅನ್ನುವ ಕುತೂಹಲ ಅನೇಕರದ್ದು. ಇನ್ನು, ವಿವಾದಿತ ಸ್ವಾಮೀಜಿ ನಿತ್ಯಾನಂದ ಅವರು ಹಲವಾರು ವಿವಾದಗಳೊಂದಿಗೆ ಭಾರತವನ್ನು ತೊರೆದು, ಈಕ್ವೆಡಾರ್ ಬಳಿ ಒಂದು ಸಣ್ಣ ದ್ವೀಪವನ್ನು ಖರೀದಿಸಿ ಅದಕ್ಕೆ ‘ಕೈಲಾಸ’ ಎಂದು ಹೆಸರಿಸಿ ಅಲ್ಲಿ ನೆಲೆಸಿದ್ದಾರೆ.
ಈ ನಡುವೆ ಸ್ವಯಂ ಘೋಷಿತ ನಿತ್ಯಾನಂದ ಸ್ವಾಮಿಗಳ ಆರೋಗ್ಯ ಸರಿಯಲ್ಲ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹರಡುತ್ತಿದೆ. ಆದರೆ ಇದು ನಿಜವೋ ಸುಳ್ಳು ಸುದ್ದಿಯೋ ಎಂದು ತಿಳಿದು ಬಂದಿಲ್ಲ. ಪ್ರಿಯಾ ಆನಂದ್ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.