ನಾಲ್ಕೇ ತಿಂಗಳಲ್ಲಿ ಎರಡು ಮಕ್ಕಳು ಮಾಡಿಕೊಂಡಿದ್ದ ನಯನತಾರಾ ಮತ್ತು ವಿಘ್ನೇಶ್ ಕಡೆಯಿಂದ ಮತ್ತೆ ಬಂತು ಸಿಹಿ ಸುದ್ದಿ! ಸುದ್ದಿ ಕೇಳಿ ಬೆಚ್ಚಿಬಿದ್ದ ಜನತೆ ನೋಡಿ!!

ಸುದ್ದಿ

ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ ಅದರಲ್ಲೂ ಸಿನಿಮಾ ಸ್ಟಾರ್ ಗಳು ಬೆಳಕಿನ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ತಾರೆಯರ ಫೋಟೋಶೂಟ್ ಗಳನ್ನೂ ನೀವು ನೋಡಿರಬಹುದು. ದೀಪಗಳ ಜೊತೆ ತರಾವರಿ ಫೋಟೋಗಳನ್ನು ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಇತ್ತೀಚಿಗೆ ಮದುವೆಯಾಗಿರುವ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನ ತಾರಾ ಹಾಗೂ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ತಮಗೆ ಅವಳಿ ಮಕ್ಕಳ ಜನನವಾಗಿರುವ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ಕೇಳಿ ನಯನ ತಾರಾ ಅಭಿಮಾನಿಗಳು ಆಶ್ಚರ್ಯಗೊಂಡಿದ್ದರು.

ಯಾಕಂದ್ರೆ ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ಮಗುವಾಗುವ ವಿಚಾರವನ್ನು ಬಹಿರಂಗ ಪಡಿಸಿದ್ದರು ನಯನ ತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ. ಅಷ್ಟೇ ಅಲ್ಲ ಕೊನೆಗೆ ತಾವು ಬಾಡಿಗೆ ತಾಯಿ (ಸರೋಗೆಟ್ ಮದರ್) ಯಿಂದ ಅವಳಿ ಮಕ್ಕಳನ್ನು ಪಡೆದಿರುವುದಾಗಿ ಈ ಜೋಡಿ ಬಹಿರಂಗಪಡಿಸಿತ್ತು. ಕೆಲವು ವರ್ಷಗಳಿಂದ ಜೊತೆಯಾಗಿ ಜೀವನ ನಡೆಸುತ್ತಿದ್ದ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ದಾಂಪತ್ಯ ಜೀವನವನ್ನು ಇತ್ತೀಚಿಗಷ್ಟೇ ಶುರು ಮಾಡಿದ್ದಾರೆ.

ಇನ್ನು ಮದುವೆಯಾಗಿ ವಿದೇಶಗಳಿಗೂ ಪ್ರಯಾಣ ಮಾಡಿದ ಈ ಜೋಡಿ ಕೆಲವು ಟ್ರೋಲ್ಗಳಿಗೂ ಕೂಡ ಗುರಿಯಾಗಿದೆ. ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ನಯನತಾರಾ ಮದುವೆಯಾದ ನಂತರ ಓಡಾಡಿದ್ದು ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಸರೋಗೇಟ್ ಮದರ್ ಅಥವಾ ಬಾಡಿಗೆ ತಾಯಿ ಆಗಿರುವುದಕ್ಕೆ ತಮಿಳುನಾಡಿನ ಸರ್ಕಾರ ಕೂಡ ಇವರನ್ನ ಪ್ರಶ್ನಿಸಿದೆ.

ಸರಿಯಾದ ಕ್ರಮಗಳನ್ನು ಅನುಸರಿಸಿ ಬಾಡಿಗೆ ತಾಯಿಯಾಗಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕೆಂದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರನ್ನು ತಮಿಳುನಾಡು ಸರ್ಕಾರ ಈಗಾಗಲೇ ಕೇಳಿತ್ತು. ಇದೀಗ ತಮ್ಮ ಅವಳಿ ಮಕ್ಕಳ ಜೊತೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದು ತಮ್ಮ ಜೀವನದ ಅತ್ಯಮೂಲ್ಯ ದೀಪಾವಳಿ ಹಬ್ಬ ಎಂದು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ನಯನ ತಾರಾ ಹಾಗೂ ವಿಗ್ನೇಶ್ ಶಿವನ್ ಅಭಿಮಾನಿಗಳಿಗೂ ಕೂಡ ದೀಪಾವಳಿ ವಿಶಸ್ ತಿಳಿಸಿದ್ದಾರೆ. ನಯನಾ ತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರು ತಮ್ಮ ಕೈನಲ್ಲಿ ಅವಳಿ ಮಕ್ಕಳನ್ನು ಎತ್ತಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿ ಆಚರಿಸುತ್ತಾ ಅಭಿಮಾನಿಗಳಿಗೆ ಶುಭಾಶಯ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ಅಭಿಮಾನಿಗಳು ಕೂಡ ನಯನ ತಾರಾ ಜೋಡಿಗೆ ವಿಶ್ ಮಾಡಿದ್ದು, ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತಿರಾ? ಏನೆಂದು ಹೆಸರು ಇಡುತ್ತೀರಿ ಎಂದು ಈಗಲೇ ಕೇಳಿ ಕಮೆಂಟ್ ಮಾಡಿದ್ದಾರೆ. ಇನ್ನು ಮದುವೆಯಾದ ನಂತರವೂ ಸಿನಿಮಾದಲ್ಲಿ ನಟಿ ನಯನ ತಾರಾ ಅಭಿನಯಿಸಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವೂ ಹೌದು. ಒಟ್ಟಿನಲ್ಲಿ ಸದ್ಯ ನಟಿ ನಯನ ತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ತಮ್ಮ ಅವಳಿ ಮಕ್ಕಳ ಜೊತೆಗೆ ಖುಷಿಯಲ್ಲಿ ಸಮಯಕಳೆಯುತ್ತಿದ್ದಾರೆ.

Leave a Reply

Your email address will not be published. Required fields are marked *