PhotoGrid Site 1660468995227

ನಾಯಿಗೆ ಮುತ್ತಿಟ್ಟು ಮುದ್ದಾಡಿದ ನಟ ದುನಿಯಾ ವಿಜಯ್ ಪತ್ನಿ ಕೀರ್ತಿ! ವಿಡಿಯೋ ನೋಡಿ ನಿಮ್ಮ ಪ್ರಾಣಿ ಪ್ರೀತಿಗೆ ಸಲಾಂ ಎಂದ ಅಭಿಮಾನಿಗಳು ನೋಡಿ!!

ಸುದ್ದಿ

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬ್ಲಾಕ್ ಕೋಬ್ರಾ ಎಂದೇ ಖ್ಯಾತರಾಗಿರುವ ನಟ ದುನಿಯಾ ವಿಜಯ್. ವಿಜಯ್ ಅವರ ಹೆಸರಿನ ಹಿಂದೆ ದುನಿಯಾ ಸೇರಿಕೊಂಡಿದ್ದು ಕೂಡ ಅವರ ಹಿಟ್ ಸಿನಿಮಾದಿಂದಲೇ. ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ನಂತರ ನಾಯಕ ನಟನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟ ದುನಿಯಾ ವಿಜಯ್ ಇದೀಗ ಒಬ್ಬ ನಿರ್ದೇಶಕನಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಸಲಗ ಹಾಗೂ ಭೀಮ ಚಿತ್ರಗಳನ್ನು ತಾವೇ ನಿರ್ದೇಶಿಸಿ, ನಟಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ದುನಿಯಾ ವಿಜಯ್. ಸಾಕಷ್ಟು ಸಾಮಾಜಿಕ ಕಾರ್ಯಗಳನ್ನೂ ಮಾಡುವ ದುನಿಯಾ ವಿಜಯ್ ಅವರ ಜೀವನದ ಸ್ಪೆಷಲ್ ಗಿಫ್ಟ್ ಅಂದ್ರೆ ಅವರ ಪತ್ನಿ ಕೀರ್ತಿ ಪಟಾಡಿ. ನಟ ದುನಿಯಾ ವಿಜಯ್ ಅವರು ಸಿನಿಮಾ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಜವಾಬ್ದಾರಿಯಿಂದ ಹಾಗೂ ಮನೆಯವರೊಂದಿಗೆ ಪ್ರೀತಿಯಿಂದ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಪತ್ನಿ ಕೀರ್ತಿ ವಿಜಯ್. ಹೌದು, ದುನಿಯಾ ವಿಜಯ್ ಅವರ ಎರಡನೆಯ ಪತ್ನಿ ಕೀರ್ತಿ ವಿಜಯ್.

ಇವರ ಮೊದಲ ಹೆಸರು ಕೀರ್ತಿ ಪಟಾಡಿ. ಎಂ ಬಿ ಎ ಪದವಿಧರೆಯಾದ ಕೀರ್ತಿ ಒಬ್ಬ ಮಾಡೆಲ್ ಹಾಗೂ ನಟಿ. ಫ್ರಾನ್ಸ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ಕೀರ್ತಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ನಟನೆಗೂ ಅವಕಾಶಗಳು ಹುಡುಕಿಕೊಂಡು ಬಂದವು. ಚಿಕ್ಕ ವಯಸ್ಸಿನಿಂದಲೂ ನಟನೆಯ ಬಗ್ಗೆ ಕೀರ್ತಿಯವರಿಗೆ ಆಸಕ್ತಿ ಇತ್ತು. ಇನ್ನು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದಾರೆ ಕೀರ್ತಿ.

ಕೀರ್ತಿ ಅವರು ಮಾಡೆಲ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದ್ರು. ಸೌತ್ ಇಂಡಿಯಾ ಕ್ವೀನ್ 2016 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಕೀರ್ತಿ. ಇನ್ನು ಈ ಹಿಂದೆ ಪ್ರಸಾರವಾಗುತ್ತಿದ್ದ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿಯೂ ಕೀರ್ತಿ ಗೌಡ ಕಾಣಿಸಿಕೊಂಡಿದ್ದರು. ಅಲಲ್ಡೇ ಹಲವು ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಕೀರ್ತಿ ಪಟಾಡಿ ಅಭಿನಯಿಸಿದ ಮೊದಲ ಚಿತ್ರ ರಾಹುಲ್ ಅಭಿನಯದ ಸಂತೋಷ್ ನಿರ್ದೇಶನದ ನನ್ನುಸಿರೇ.

ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಕಷ್ಟಪಟ್ಟು ಅವರನ್ನು ಒಪ್ಪಿಸಿ ನಟನಾರಂಗ ಪ್ರವೇಶಿಸುತ್ತಾರೆ ಕೀರ್ತಿ. ಆನಂತರ ಜಾಲಿ ಡೇಸ್, ಪ್ರೀತಿ ನೀ ಶಾಶ್ವತಾನ, ಸುದೀಪ್ ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಈ ಎಲ್ಲ ಸಿನಿಮಾಗಳಲ್ಲಿ ಎರಡನೆಯ ನಾಯಕಿ ಪಾತ್ರದಲ್ಲಿ ಕೀರ್ತಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಕೀರ್ತಿ ಅವರು 2014 – 15ರಲ್ಲಿ ದುನಿಯಾ ವಿಜಯ್ ಅವರೊಂದಿಗೆ ವಿವಾಹವಾದರು ಇವರಿಬ್ಬರದ್ದು ಲವ್ ಮ್ಯಾರೇಜ್.

ಮದುವೆಯ ನಂತರ ಅಭಿನಯದಿಂದ ದೂರ ಉಳಿದ ಕೀರ್ತಿ ಪಟಾಡಿ ದಿನಿಯಾ ವಿಜಯ್ ಅವರ ಎಲ್ಲಾ ಸಿನಿಮಾಗಳಿಗೂ ಸಪೋರ್ಟ್ ಮಾಡುತ್ತಾ ಮನೆಯನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ದುನಿಯಾ ವಿಜಯ್ ಅವರ ಮಕ್ಕಳನ್ನು ಕೂಡ ಎರಡನೇ ಪತ್ನಿಯಾಗಿ ಬಂದರೂ ಕೀರ್ತಿ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇನ್ನು ಸೈಲೆಂಟ್ ಆಗಿ ಪತಿಗೆ ಸಪೋರ್ಟ್ ಮಾಡುತ್ತಾ.

ದುನಿಯಾ ವಿಜಯ್ ಅವರ ಯಶಸ್ಸಿಗೆ ಕಾರಣವಾದ ಕೀರ್ತಿ ಅವರಿಗೆ ನಾಯಿಗಳಂದ್ರೆ ಬಹಳ ಇಷ್ಟವಂತೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕೀರ್ತಿ ವಿಜಯ್ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇತ್ತೀಚಿಗೆ ಎರಡು ಮುದ್ದಾದ ಶ್ವಾನಗಳ ಜೊತೆ ಆಟವಾಡುತ್ತಿರುವ, ಶ್ವಾನವನ್ನು ಮುದ್ದಿಸುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಿಂದ ಶ್ವಾನಪ್ರಿಯರಿಗೆ ಕೀರ್ತಿ ವಿಜಯ್ ಇನ್ನಷ್ಟು ಹತ್ತಿರವಾಗುವುದರಲ್ಲಿ ನೋ ಡೌಟ್.

 

View this post on Instagram

 

A post shared by keerthi vijay (@keerthivijayofficial)

Leave a Reply

Your email address will not be published. Required fields are marked *