ನಾನು ಮದುವೆ ಆದ್ರೆ ಈ ಅಜ್ಜನನ್ನೇ ಆಗೋದು ಎಂದು ಹಠ ಹಿಡಿದ ಯುವತಿ! ಅಸಲಿ ಕಾರಣ ತಿಳಿದು ತಬ್ಬಿಬ್ಬಾದ ಜನತೆ!!

ಸುದ್ದಿ

ಪ್ರೀತಿ ಒಂದು ಮಾಯೆ ಅಂತಾರೆ ಸಾಕಷ್ಟು ಬಾರಿ ಅದು ನಿಜ ಎನಿಸುತ್ತೆ ಯಾಕೆಂದರೆ ಪ್ರೀತಿಸುವಾಗ ಅವರು ನಮಗೆ ಸರಿ ಹೊಂದುತ್ತಾರೆ ಎಂಬುದನ್ನ ನೋಡದೆ ಹುಡುಗ ಅಥವಾ ಹುಡುಗಿ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಗೆ ಬಿದ್ದವರು ನಮಗೆ ಯಾರು ಹಿತ ನುಡಿಯುತ್ತಾರೋ ಅವರೆಲ್ಲರನ್ನ ವಿರೋಧಿಸುತ್ತಾರೆ. ಪ್ರೀತಿ ಮಾಡಿದವರು ಮದುವೆಯಾಗಲು ಹೊರಟಾಗ ಮನೆಯವರ ವಿರೋಧವಿದ್ದರೆ ಅದಕ್ಕೆ ಕ್ಯಾರೆ ಎನ್ನುವುದಿಲ್ಲ.

ಬದಲಿಗೆ ತಾವೇ ಬೇರೆ ಎಲ್ಲಾದರೂ ಓಡಿ ಹೋಗಿ ಮದುವೆಯಾಗಿ ಬಿಡುತ್ತಾರೆ. ಆದರೆ ಹೀಗೆ ಮದುವೆಯಾಗಿರುವ ಎಲ್ಲಾ ಜೋಡಿಗಳು ಸುಖವಾಗಿರುತ್ತವೆಯೇ ಅನ್ನುವ ಪ್ರಶ್ನೆಗೆ ಮಾತ್ರ ಇವರಿಗೆ ಉತ್ತರವೇ ಸಿಕ್ಕಿಲ್ಲ. ಇನ್ನು ಪ್ರೀತಿಸುವುದಕ್ಕೆ ಯಾವುದೇ ಜಾತಿ ಮತ ವಯಸ್ಸು ಭೇದವೇ ಇಲ್ಲ ಹೀಗೆ ವಯಸ್ಸಿನ ಭೇದವಿಲ್ಲದೆ ಪ್ರೀತಿಸಿ ಮದುವೆಯಾದ ಒಂದು ಜೋಡಿಯ ಕಥೆಯನ್ನು ನಾವು ಇಲ್ಲಿ ಹೇಳುತ್ತೇವೆ.

ಇದು ಪಾಕಿಸ್ತಾನದಲ್ಲಿ ನಡೆದ ಘಟನೆ ಮುಸ್ಕಾನ್ ಎನ್ನುವ ಹದಿನೆಂಟರ ಯುವತಿ 55 ವರ್ಷ ವಯಸ್ಸಿನ ಫಾರೂಕ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿರುವ ಕಥೆ ಇದು. ಈ ಲವ್ ಬರ್ಡ್ಸ್ ಬಗ್ಗೆ ಪಾಕಿಸ್ತಾನದ ಪತ್ರಿಕೆಗಳು ಸಾಕಷ್ಟು ವರದಿ ಮಾಡಿವೆ. ಶಾರುಖ್ ಹಾಗೂ ಮುಸ್ಕಾನ್ ಅವರನ್ನು ಒಂದಾಗಿ ಸಿದ್ದು ಸಂಗೀತ. ಹೌದು ಮುಸ್ಕಾನ್ ಅತ್ಯುತ್ತಮ ಹಾಡುಗಾರ್ತಿ. ಸಂಗೀತ ಅಂದರೆ ಬಹಳ ಇಷ್ಟ ಅಕ್ಕ ಪಕ್ಕದ ಮನೆಯವರು ಆದರೆ ಯಾವತ್ತೂ ಒಬ್ಬರನ್ನು ಒಬ್ಬರು ನೋಡಿ ಮಾತನಾಡಿಸಿದ್ದು ಇಲ್ಲ. ಆದರೆ ಮುಸ್ಕಾನ್ ಅವರ ಸಂಗೀತ ಫಾರೂಕ್ ಅವರನ್ನ ಬಹುವಾಗಿ ಸೆಳೆಯುತ್ತದೆ.

ಮುಸ್ಕಾನ್ ಮನೆಯಲ್ಲಿ ಹಾಡು ಹೇಳುತ್ತಿದ್ದರೆ ಫಾರೂಕ್ ಅವರ ಮನೆಗೆ ಹೋಗಿ ಮುಸ್ಕಾನ್ ಅವರ ಹಾಡಿಗೆ ಪ್ರಶಂಸೆ ವ್ಯಕ್ತಪಡಿಸಿ ಬರುವುದಕ್ಕೆ ಶುರು ಮಾಡಿದರು. ಸನ್ನಿ ಡಿಯೋಲ್ ಅಭಿನಯದ ಬಾದಲ್ ಸಿನಿಮಾದ ‘ನಾ ಮಿಲೋ ಹಮ್ ಸೇ ಜ್ಯಾದಾ’ ಈ ಫೇಮಸ್ ಹಾಡನ್ನು ನೀವು ಕೂಡ ಕೇಳಿರಬಹುದು ಅದನ್ನ ಕೇಳಿ ಫಾರೂಕ್ ಮನಸೋತರು. ಮತ್ತೆ ಮತ್ತೆ ಮಸ್ಕಾನ್ ಬಾಯಲ್ಲಿ ಈ ಹಾಡನ್ನು ಕೇಳಲು ಇಷ್ಟಪಡುತ್ತಿದ್ದರು.

ಫಾರೂಕ್ ಒಂದು ದಿನ ಮುಸ್ಕಾನ್ ಹಾಡನ್ನು ಹೇಳುತ್ತಿರುವುದನ್ನ ಕೇಳಿ ಅವರ ಮನೆಗೆ ಹೋಗಿ ಲವ್ ಪ್ರಪೋಸಲ್ ಮುಂದಿಡುತ್ತಾರೆ. ಇದಕ್ಕೆ ಮುಸ್ಕಾನ್ ಸಹ ಸಮ್ಮತಿ ಸೂಚಿಸುತ್ತಾಳೆ. ಇವರಿಬ್ಬರ ನಡುವೆ ವಯಸ್ಸಿನ ಅಂತರ ಸಿಕ್ಕಾಪಟ್ಟೆ ಇದೆ ಹಾಗಾಗಿ ಮನೆಯವರ ಎದುರು ಈ ವಿಷಯ ಹೇಳಿದಾಗ ಅವರು ಒಪ್ಪುವುದಿಲ್ಲ. ಆದರೆ ಸಂಗೀತವನ್ನು ಪ್ರೀತಿಸುವ ಈ ಪ್ರೇಮಿಗಳು ತಾವೇಬರು ಬಿಟ್ಟಿರಲಾಗದಷ್ಟು ಪ್ರೀತಿಸುತ್ತಾರೆ.

ಕೊನೆಗೆ ಮನೆಯವರಿಂದ ದೂರವಾಗಿ ತಾವೇ ಮದುವೆಯಾಗಿ ಇದೀಗ ಸಂಸಾರ ನಡೆಸುತ್ತಿದ್ದಾರೆ. ಹೌದು ಕೊನೆಗೂ ಈ ಪ್ರೇಮ ಪಕ್ಷಿಗಳನ್ನು ಸಂಗೀತವೇ ಒಂದಾಗಿಸಿದೆ. ಇನ್ನು ಇವರಿಬಬ್ರ ಲವ್ ಸ್ಟೋರಿ ಬಗ್ಗೆ ಈಗಾಗಲೇ ಪಾಕಿಸ್ತಾನ ಮೀಡಿಯಾಗಳಲ್ಲಿ ಸಂದರ್ಶನಗಳೂ ನಡೆದಿವೆ. ಮುಸ್ಕಾನ್ ಹಾಗೂ ಫಾರೂಕ್ ತಮ್ಮ ಪ್ರೀತಿ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಈ ಸಂದರ್ಶನಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

Leave a Reply

Your email address will not be published. Required fields are marked *