ಜನ ಪ್ರೀತಿ ಕುರುಡು ಅಂತಾರೆ. ಆದರೆ ಪ್ರೀತಿಸುವವರೇ ಕುರುಡು. ಯಾಕಂದ್ರೆ ಯಾರ ಜೊತೆ ಸಂಬಂಧ ಬೆಳೆಸಿದರೆ ಉತ್ತಮ ಅನ್ನೋದನ್ನ ನೋಡದೆ ಮನಸ್ಸಿಗೆ ಅನಿಸಿತು ಎನ್ನುವ ಕಾರಣಕ್ಕೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ ಆದರೆ ಅದರಿಂದ ಅನುಭವಿಸುವ ಸಂಕಷ್ಟ ಮಾತ್ರ ಅಷ್ಟಿಷ್ಟಲ್ಲ. ಕೆಲವೊಮ್ಮೆ ಪ್ರೀತಿ ಅಂದುಕೊಂಡಿದ್ದು ಕೇವಲ ಆಕರ್ಷಣೆ ಆಗಿರುತ್ತೆ. ಆದರೆ ಇದನ್ನ ಗುರುತಿಸದೇ ಜನ ತಪ್ಪು ಹಾದಿ ಹಿಡಿಯುತ್ತಾರೆ.
ಅದರಲ್ಲಿಯೂ ಹದಿಹರೆಯದ ಹುಡುಗಿಯರು ಮನೆಯವರ ವಿರೋಧವಾಗಿ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗುತ್ತಾರೆ. ಆದರೆ ತನಗಿಂತ ವಯಸ್ಸು ದುಪ್ಪಟ್ಟು ಆಗಿರುವವರ ಜೊತೆ ಪ್ರೀತಿ ಬೆಳೆಸುವುದು ಮಾತ್ರ ನಿಜಕ್ಕೂ ಚಿಂತೆಗೀಡು ಮಾಡುವ ವಿಷಯ. ಹೌದು, ಕೆಲವು ಯುವತಿಯರಿಗೆ ಯಾರು ಪ್ರೇರಣೆಯು ಗೊತ್ತಿಲ್ಲ ಹಿಂದಿನ ಸಿನಿಮಾ ಅಥವಾ ಟಿವಿ ಸೀರಿಯಲ್ ಗಳು ಕೂಡ ಇದಕ್ಕೆ ಪ್ರೇರಣೆ ಆಗಿರಬಹುದು.
ಅತ್ಯಂತ ಕಡಿಮೆ ವಯಸ್ಸಿನ ಹುಡುಗಿಯರು ತನ್ನ ತಂದೆಯು ಅಥವಾ ತಾತನ ವಯಸ್ಸಿನ ಗಂಡಸರನ್ನ ಪ್ರೀತಿಸುವುದು ಕಾಮನ್ ಆಗಿಬಿಟ್ಟಿದೆ. ಜೊತೆ ಜೊತೆಯಲಿ ಅಥವಾ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಿದ್ರೆ ನಿಮಗೆ ಇದು ಸತ್ಯ ಎನಿಸಬಹುದು. ಹೀಗೆ ಇನ್ನೊಬ್ಬ ಹುಡುಗಿ 60ರ ವಯಸ್ಸಿನ ಗಂಡಸಿನ ಪ್ರೀತಿಯ ಬಲೆಯಲ್ಲಿ ಬಿದ್ದು ಮನೆಯವರಿಗೆ ಶಾಕ್ ನೀಡಿದ್ದಾಳೆ. ಅದೊಂದು ಪುಟ್ಟ ಸಂಸಾರ ಗಂಡ ಹೆಂಡತಿ ಹಾಗೂ ಹದಿಹರಿಯದ ಮಗಳು.
ಆ ಮನೆಗೆ 60 ವರ್ಷದ ಒಬ್ಬ ಗಂಡಸು ಬಹಳ ಕ್ಲೋಸ್ ಆಗಿ ಇರುತ್ತಾರೆ. ಬಹಳ ಹಿಂದೆ ಹೆಂಡತಿ ತೀರಿಕೊಂಡಿದ್ದು ಒಂಟಿಯಾಗಿ ಜೀವನ ನಡೆಸುತ್ತಿರುತ್ತಾರೆ ಆ ವ್ಯಕ್ತಿ. ತಾನು ಒಬ್ಬನೇ ಎನ್ನುವ ಕಾರಣಕ್ಕೆ ಆಗಾಗ ಈ ಮನೆಗೆ ಬಂದು ಹೋಗುತ್ತಿರುವ ಆ ವ್ಯಕ್ತಿ, ಅವರಿಗೆ ತುಂಬಾನೇ ಹತ್ತಿರದವನಾಗಿರುತ್ತಾನೆ. ಗಂಡ ಹೆಂಡತಿ ಇಬ್ಬರೂ ಹೆಂಡತಿಯನ್ನು ಕಳೆದುಕೊಂಡ ಈ ವ್ಯಕ್ತಿಯ ಜೊತೆಗೆ ಹೆಚ್ಚು ಮಾತುಕತೆ ನಡೆಸುತ್ತಾರೆ.
ಆಗಾಗ ಮನೆಗೆ ಬರುವಂತೆ ಕರೆಯುತ್ತಾರೆ ಇವರ ಮನೆಗೆ ಬಂದು ಹರಟೆ ಹೊಡೆದು ವಾಪಸ್ ಹೋಗುತ್ತಿರುತ್ತಾನೆ ಆ ಗಂಡಸು. ಈ ದಿನಚರಿ ಹೀಗೆ ಮುಂದುವರೆಯುತ್ತಿತ್ತು ಆಗ ಮನೆಯವರಿಗೆ ಮಗಳು ಒಂದು ಶಾಕ್ ನೀಡುತ್ತಾಳೆ. ಆ ವ್ಯಕ್ತಿ ಇಷ್ಟು ದಿನ ಈ ಮನೆಗೆ ಬರುತ್ತಿದ್ದದ್ದು ಆ ಹುಡುಗಿಯ ಜೊತೆ ಸಂಬಂಧ ಬೆಳೆಸಲು. ಆ ಹುಡುಗಿಯೂ ಅಷ್ಟೇ 60ರ ವಯಸ್ಸು ಅನ್ನುವುದನ್ನು ಕೂಡ ಯೋಚನೆ ಮಾಡದೆ ಆತನೇ ಬೇಕು ಅಂತ ಹಠಕ್ಕೆ ಬೀಳುತ್ತಾಳೆ.
ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ತಂದೆ ತಾಯಿಗೆ ಸ್ವಲ್ಪ ಅನುಮಾನವೇ ಇರಲಿಲ್ಲ. ನಂತರ ವಿಷಯ ತಿಳಿದು ಇವರಿಬ್ಬರನ್ನು ದೂರ ಮಾಡಲು ಪ್ರಯತ್ನಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಆ ಹುಡುಗಿ ಮಾತ್ರ ಪಟ್ಟು ಹಿಡಿದು ಕುಳಿತುಕೊಳ್ಳುತ್ತಾಳೆ ಮದುವೆಯಾದರೆ ಆ ಗಂಡಸನ್ನೇ, ಇಲ್ಲವಾದರೆ ನನಗೆ ಜೀವನದಲ್ಲಿ ಮದುವೆಯೇ ಬೇಡ ಅಂತ ಹಠ ಹಿಡಿಯುತ್ತಾಳೆ.
ಆದರೆ ಇದಕ್ಕೆ ಸುತಾರಂ ಒಪ್ಪದ ಆಕೆಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಅಲ್ಲಿ ವಿಚಾರಣೆಯ ವೇಳೆ ಆ ಗಂಡಸು ನನ್ನ ಹೆಂಡತಿ ಆಕೆ. ಅವಳನ್ನ ನನ್ನೊಂದಿಗೆ ಕಳುಹಿಸಿ ಕೊಡಿ ಅಂತ ಬೇಡಿಕೆ ಇಡುತ್ತಾನೆ. ಇದೀಗ ನ್ಯಾಯಾಲಯದಲ್ಲಿ ಇರುವ ಈ ಪ್ರಕರಣ ಅಲ್ಲಿಯವರಿಗೂ ತಲೆ ನೋವಾಗಿಬಿಟ್ಟಿದೆ ಹಾಗಾಗಿ ಇನ್ನು ತೀರ್ಪು ಮಾತ್ರ ಹೊರಬಿದ್ದಿಲ್ಲ. ಈ ಪ್ರೀತಿ ಅನ್ನೋದು ಯಾರ ಬಳಿ ಏನೆಲ್ಲಾ ಮಾಡಿಸುತ್ತೆ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ ಅದಕ್ಕೆ ಉತ್ತಮ ನಿದರ್ಶನವೇ ಈ ಘಟನೆ.