ಇತ್ತೀಚೆಗೆ ಜನ ಸಂಬಂಧದ ವಾಲ್ಯೂ ಮರೆಯುತ್ತಿದ್ದಾರೆ ತಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ಮಾತ್ರ ಮಾಡುತ್ತಾರೆ. ಸಮಾಜದ ದೃಷ್ಟಿಯಲ್ಲಿ ನಾವು ಹೇಗೆ ಕಾಣುತ್ತಿದ್ದೇವೆ ಎನ್ನುವುದನ್ನು ಯೋಚಿಸದೆ ತಮಗೆ ಬೇಕಾದ ಹಾಗೆ ವರ್ತಿಸುತ್ತಾರೆ. ಹದಿ ಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಲ್ಲವೂ ಕಾಮನ್ ಆದರೆ ಕೆಲವೊಮ್ಮೆ ಈ ಪ್ರೀತಿ ಅನ್ನೋದು ಎಷ್ಟು ಅಚ್ಚರಿ ಮೂಡಿಸುತ್ತೆ ಅಂದ್ರೆ, ಇಂತಹ ಪ್ರೇಮಿಗಳು ಇದ್ದಾರಾ ಎಂದುಕೊಳ್ಳುತ್ತೇವೆ.
ಇತ್ತೀಚಿಗೆ ಚಿಕ್ಕ ವಯಸ್ಸಿನ ಹುಡುಗಿಯರು ತಮಗಿಂತ 30 40 ವರ್ಷ ದೊಡ್ಡವರ ಜೊತೆ ಪ್ರೀತಿಯಲ್ಲಿ ಬೀಳುವುದು ಸಹಜವಾಗಿ ಬಿಟ್ಟಿದೆ. ಅದಕ್ಕೆ ತಕ್ಕ ಹಾಗೆ ಇಂದಿನ ಧಾರಾವಾಹಿಗಳು ಕೂಡ ಇಂತಹ ಘಟನೆಯ ನೀರು ತೋರಿಸುತ್ತವೆ ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣ ಮೊದಲಾದ ಧಾರವಾಹಿಗಳನ್ನು ನೋಡಿದರೆ 25 ವರ್ಷದ ಹುಡುಗಿ 45 ವರ್ಷದ ಗಂಡಸಿನ ಜೊತೆ ವಿವಾಹವಾಗಿರುವ ಕಥೆ ಇದೆ ಇದು ನಿಜವಾಗಿ ನಡೆದಿರುವ ಘಟನೆ ಒಂದನ್ನು ನಾವಿಲ್ಲಿ ಹೇಳುತ್ತಿದ್ದೇವೆ ಮುಂದೆ ಓದಿ.
ಆತನ ವಯಸ್ಸು ಸುಮಾರು 60 ವರ್ಷ ಇರಬಹುದು ಹೆಂಡತಿಯನ್ನು ಕಳೆದುಕೊಂಡಿದ್ದ ಒಂಟಿಯಾಗಿ ಜೀವನ ನಡೆಸುತ್ತಿದ್ದ. ಆದರೆ ತಮ್ಮ ಮನೆಯ ಹತ್ತಿರದ ಕುಟುಂಬ ಒಂದಕ್ಕೆ ತುಂಬಾನೇ ನಿಕಟ ವ್ಯಕ್ತಿ ಎನಿಸಿಕೊಂಡಿದ್ದ ಆ ಮನೆಯಲ್ಲಿ ಗಂಡ ಹೆಂಡತಿ ಹಾಗೂ ವಯಸ್ಸಿಗೆ ಬಂದ ಮಗಳು ಇದ್ದಳು. ಸದಾ ಅವರ ಮನೆಗೆ ಹೋಗುತ್ತಿದ್ದ ಈ 60 ವರ್ಷದ ತಾತಪ್ಪ ಅವರ ಜೊತೆ ಆರಾಮಾಗಿ ಕುಳಿತು ಮಾತನಾಡಿ ಬರುತ್ತಿದ್ದ.
ಕೆಲವು ದಿನಗಳ ವರೆಗೆ ಇದು ಹೀಗೆ ಸಾಗಿತ್ತು ಅವರ ಮನೆಗೆ ಬರುವುದು ಆ ಗಂಡ ಹೆಂಡತಿ ಜೊತೆ ಮಾತನಾಡಲು ಅಲ್ಲ ಬದಲಿಗೆ ಅವರ ಮಗಳ ಜೊತೆಯೇ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದ. ಹೌದು 60 ರ ವರ್ಷದ ತಾತಪ್ಪನ ಪ್ರೀತಿಗೆ ಹದಿಹರೆಯದ ಆ ಹುಡುಗಿ ಮಾರುಹೋಗಿದ್ದಳು. ಈ ವಿಷಯ ತಿಳಿಯುತ್ತಿದ್ದ ಹಾಗೆ ಆ ಹುಡುಗಿಯ ತಂದೆ ತಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಆ ಹುಡುಗಿ ಮಾತ್ರ ನಾನು ಮದುವೆಯಾದರೆ 60 ವರ್ಷದ ತಾತನ ಇಲ್ಲವಾದರೆ ಒಂಟಿಯಾಗಿ ಜೀವನ ನಡೆಸುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದಳು. ಇದು ಕುಟುಂಬದವರಿಗೆ ತುಂಬಾನೇ ತಲೆನೋವು ಆಗಿತ್ತು. ಕೊನೆಗೆ ಆಕೆಯ ತಂದೆ ತಾಯಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಇರುತ್ತಾರೆ. ವಿಚಾರಣೆಗೆ ಆಗಮಿಸಿದ ತಾತ ಆಕೆ ನನ್ನ ಹೆಂಡತಿ ನನ್ನ ಹೆಂಡತಿಯನ್ನು ನನ್ನಿಂದ ದೂರ ಮಾಡುತ್ತಿದ್ದಾರೆ ಎಂದು ಆ ಹುಡುಗಿಯ ತಂದೆ ತಾಯಿಯ ವಿರುದ್ಧ ದೂರು ನೀಡಿದ.
ಹುಡುಗಿಯೂ ಆತನೇ ಬೇಕು ಅಂತ ಇತ್ತ ಪಟ್ಟು ಹಿಡಿದು ಕುಳಿತಿದ್ದಳು. ಕೊನೆಗೂ ಈ ವಿಷಯ ಮಾತ್ರ ಇದುವರೆಗೆ ಇತ್ಯರ್ಥ ಆಗಿಲ್ಲ ಯಾರ ಪರವಾಗಿ ನ್ಯಾಯ ಕೊಡಬೇಕು ಅನ್ನೋದು ಪೊಲೀಸರಿಗೂ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ವಯಸ್ಸಾದ ಮುದುಕನ ಜೊತೆ ಈ ಹುಡುಗಿಯ ಪ್ರೀತಿ ಸಂಬಂಧ ಮಾತ್ರ ಅಚ್ಚರಿಯನ್ನ ಮೂಡಿಸಿದೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.