PhotoGrid Site 1659756287967

ನಾನು ನಾಲ್ಕು ಜನಕ್ಕೆ ಮಾದರಿ ಆಗುವಂತಹ ಕೆಲಸ ಮಾಡಿದ್ದೀನಿ ಎಂದ ಯುವ ನಾಯಕಿ ನವ್ಯಶ್ರೀ! ಮತ್ತೆ ಮಾಧ್ಯಮದ ಮುಂದೆ ಬಂದು ಎಲ್ಲವನ್ನೂ ತೋಡಿಕೊಂಡು ಹೇಳಿದ್ದೇನು ನೋಡಿ!!

ಸುದ್ದಿ

ಕಾಂಗ್ರೆಸ್ ನ ಯುವ ನಾಯಕಿಯಾಗಿರುವ ನವ್ಯಶ್ರೀ ಅವರು ತನ್ನ ಪತಿಯ ವಿರುದ್ಧ ದೂರು ನೀಡಿದ್ದು ಈಗಾಗಲೇ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿಚಾರಣೆಗಳು ನಡೆಯುತ್ತವೆ. ಅಲ್ಲದೇ ಹಲವು ಬಾರಿ ಪತ್ರಿಕಾಗೋಷ್ಠಿಯನ್ನು ನೀಡಿ ನವ್ಯಶ್ರೀ ತನ್ನ ಪತಿ ರಾಜಕುಮಾರ ಠಾಕಳೆ ಅವರ ವಿರುದ್ಧ ವಾಗ್ವಾದ ನಡೆಸಿದ್ದಾರೆ. ತಾನು ಈಗಾಗಲೇ ಎಪಿಎಂಸಿ ಠಾಣೆಯಲ್ಲಿ ಆತನ ವಿರುದ್ಧ ದೂರನ್ನು ದಾಖಲಿಸಿರುವುದಾಗಿ ನವ್ಯಶ್ರೀ ಹೇಳಿದ್ದಾರೆ.

ಇನ್ನು ರಾಜ್‌ಕುಮಾರ್ ಟಾಕಳೆ ಅವರು ನಿರೀಕ್ಷಣ ಜಾಮೀನಿಗೆ ಅರ್ಜಿ ಹಾಕಿದ್ದರು ಆದರೆ ನ್ಯಾಯಾಲಯ ಇವರ ಅರ್ಜಿಯನ್ನು ತಿರಸ್ಕರಿಸಿದೆ ಹೀಗಾಗಿ ನನ್ನ ಹೋರಾಟಕ್ಕೆ ಅರ್ಧ ಜಯ ಸಿಕ್ಕಂತಾಗಿದೆ ಅಂತ ನವ್ಯಶ್ರೀ ಹೇಳಿಕೊಂಡಿದ್ದಾರೆ. ಇನ್ನು ರಾಜಕುಮಾರ ಟಾಕಳೆ ಅವರ ವಿರುದ್ಧ ನವ್ಯಶ್ರೀ ದೂರು ದಾಖಲಿಸುವುದಕ್ಕೆ ಹಲವಾರು ಕಾರಣಗಳನ್ನ ನೀಡಿದ್ದಾರೆ. ಮೊದಲನೆಯದಾಗಿ ಅವರ ಖಾ’ಸಗಿ ವಿ’ಡಿಯೋವನ್ನು ರಾಜಕುಮಾರ ಸಾಮಾಜಿಕ ಜಾಲತಾಣದಲ್ಲಿ ಹ’ರಿಬಿಟ್ಟಿದ್ದರು.

ಇದರಿಂದ ಆ’ಕ್ರೋಶಕ್ಕೆ ಒಳಗಾದ ನವ್ಯಶ್ರೀ, ರಾಜಕುಮಾರ್ ಮೇಲೆ ದೂರು ದಾಖಲಿಸಿದ್ದಾರೆ. ಇನ್ನು ಎಫ್ಐಆರ್ ಆಗಿ 13 ದಿನಗಳು ಕಳೆದಿದೆ ಆದರೂ ರಾಜಕುಮಾರ್ ಠಾಕಳೆ ಅವರನ್ನು ಪೊಲೀಸರು ಬಂಧಿಸಿಲ್ಲ ಯಾಕೆ ಎನ್ನುವುದು ನನ್ನ ಪ್ರಶ್ನೆ ಅಂತ ಮಾಧ್ಯಮದ ಬಳಿ ಹೇಳಿದ್ದಾರೆ. ನಾನು ನನ್ನ ಹೋರಾಟದಲ್ಲಿ ಎಂದಿಗೂ ಹಿಂದೆ ಸರಿದಿಲ್ಲ ನಾನು ವಿದೇಶದಿಂದ ಬರುತ್ತಿದ್ದ ಹಾಗೆ ರಾಜಕುಮಾರ ಠಾಕಳೆ ಅವರ ವಿರುದ್ಧ ಹೋ’ರಾಟಕ್ಕೆ ಇಳಿದಿದ್ದೇನೆ.

ಅವರು ಮಾಡಿರುವ ಅನ್ಯಾಯದ ವಿರುದ್ಧ ಪೊಲೀಸರಿಗೆ ವಿಷಯ ತಿಳಿಸಿದ್ದೇನೆ. ಪೊಲೀಸರಿಂದ ನನಗೆ ನ್ಯಾಯ ಸಿಗುತ್ತೆ ಎನ್ನುವ ನೀರಿಕ್ಷೆ ನನಗೆ ಇದೆ ಎಂದಿದ್ದಾರೆ. ಇನ್ನು, ನವ್ಯಶ್ರೀ ಅವರು ತಮ್ಮ ನವ್ಯಶ್ರೀ ಫೌಂಡೇಶನ್ ಅವರ ಬಗ್ಗೆಯೂ ಮಾತನಾಡಿದ್ದು, ನವ್ಯಶ್ರೀ ಫೌಂಡೇಶನ್ ಅಡಿಯಲ್ಲಿ ನಾವು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಇದು ಕೇವಲ ನನ್ನ ಒಬ್ಬಳ ಸಂಸ್ಥೆಯಲ್ಲ ಇದು ಸರ್ಕಾರಿ ನೊಂದಿತ ಸಂಸ್ಥೆಯಾಗಿದ್ದು ಇದರಲ್ಲಿ ಹಲವು ಪದಾಧಿಕಾರಿಗಳು ಇದ್ದಾರೆ.

ಈ ಸಂಸ್ಥೆಯ ಅಡಿಯಲ್ಲಿ ನಾವು ನೆರೆ ಪ್ರದೇಶಗಳಿಗೆ, ಕರೋನ ಸಂತ್ರಸ್ತರಿಗೆ ಸಾಕಷ್ಟು ಸಹಾಯವನ್ನು ಮಾಡಿದ್ದೇವೆ. ನಾನು ಹಾಗೂ ನನ್ನ ತಂಡ ಖುದ್ದಾಗಿ ಮಡಿಕೇರಿ, ಬಾಗಲಕೋಟೆ ಮೊದಲ ನೆರೆ ಪ್ರದೇಶಗಳಿಗೆ ಹೋಗಿ ಅಲ್ಲಿ 15 20 ದಿನಗಳ ಕಾಲ ಉಳಿತುಕೊಂಡು ಅಗತ್ಯ ಇದ್ದವರಿಗೆ ಸಹಾಯ ಮಾಡಿದ್ದೇವೆ. ಬೇರೆಯವರಿಂದ ಹಣ ತೆಗೆದುಕೊಂಡು, ಫಂಡ್ ತೆಗೆದುಕೊಂಡು ಕೆಲಸ ಮಾಡಿದವರಲ್ಲ.

ನಾವೇ ನಮ್ಮ ಕೈಯಾರ ಹಣವನ್ನು ಹಾಕಿ ಕೆಲಸ ಮಾಡಿದ್ದೇವೆ. ಅಲ್ಲದೆ ಕರೋನಾ ಬಂದಿರುವ ಸಂದರ್ಭದಲ್ಲಿ ರೈತರಿಗೆ ಅವರು ಬೆಳೆದ ತರಕಾರಿಗಳನ್ನು ಮಾರಾಟ ಮಾಡುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ನಾವು ಅವರಿಂದ ತರಕಾರಿಗಳನ್ನು ಖರೀದಿ ಮಾಡಿ ಯಾರು ಅರ್ಹರಿದ್ದಾರೋ ಅಂತವರ ಕುಟುಂಬವನ್ನು ಗುರುತಿಸಿ, ಅವರ ಬಿಪಿಎಲ್ ಕಾರ್ಡ್ ಜೆರಾಕ್ಸ್ ತೆಗೆದುಕೊಂಡು ಸುಮಾರು 2000 ಕುಟುಂಬಗಳಿಗೆ ತರಕಾರಿ ದಿನಸಿ ಪ್ಯಾಕೆಟ್ ರೆಡಿ ಮಾಡಿ ಕೊಟ್ಟಿದ್ದೇವೆ.

ಇನ್ನು ನವ್ಯಶ್ರೀ ಫೌಂಡೇಶನ್, ನವ್ಯಶ್ರೀ ಒಬ್ಬರದ್ದೇ ಅಂತ ಹೇಳುವುದು ಸುಳ್ಳು. ನಾನು ನನ್ನ ಸಂಸ್ಥೆಯನ್ನು ಪ್ರತಿನಿಧಿಸಿದ್ದೇನೆ ಹೊರತು ನಾನೊಬ್ಬಳೇ ಇಲ್ಲ. ಇಲ್ಲಿ ಸಾಕಷ್ಟು ಮಂದಿ ಕೆಲಸ ಮಾಡುತ್ತಾರೆ. ಇನ್ನು ಸಮಾಜಮುಖಿ ಕೆಲಸಗಳನ್ನು ಮಾಡಿರುವ ನಾನು ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಕಾರಣ ರಾಜಕುಮಾರ ನನಗೆ ಕೊಟ್ಟ ಎಲ್ಲ ಹಿಂ’ಸೆ ಹಾಗೂ ನನ್ನ ಮೇಲೆ ನಡೆಸಿದ ಹ’ಲ್ಲೆಯನ್ನು ಇಷ್ಟು ದಿನ ಸಹಿಸಿಕೊಂಡಿದ್ದೆ. ಆದರೆ ಇದೀಗ ನನ್ನ ಖಾಸಗಿ ವಿಡಿಯೋವನ್ನು ಹರಿಬಿಟ್ಟಿರುವ ಕಾರಣ ನಾನು ಅವರ ವಿರುದ್ಧ ತಿರುಗಿ ಬಿದ್ದಿದ್ದೇನೆ ಅಂತ ನವ್ಯಶ್ರೀ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *