PhotoGrid Site 1655288471133

ನಾನು ಇದೇ ಕಾರಣಕ್ಕೆ ತುಂಡುಡುಗೆ ತೋಡುವುದಿಲ್ಲ ಎಂದು ತನ್ನ ಜೀವನದಲ್ಲಿ ನಡೆದ ಆ ಒಂದು ಘಟನೆಯನ್ನು ಹೇಳಿ ಕಣ್ಣೀರಿಟ್ಟ ನಟಿ ಸಾಯಿ ಪಲ್ಲವಿ! ಯಾವ ಘಟನೆ ಗೊತ್ತಾ.??

ಸುದ್ದಿ

ಸಿನಿಮಾಗಳಲ್ಲಿ ನಟಿಯರು ಮೇಕಪ್ ಹಾಕದೆ ನಟಿಸಲು ಸಾಧ್ಯವೇ ಇಲ್ಲ ಅನ್ನುವ ಸಂಪ್ರದಾಯವನ್ನು ಅದೇ ರೀತಿ ತುಂಡುಡುಗೆ ತೊಟ್ಟು ಸಿನಿಮಾ‌ ದಲ್ಲಿ ನಟಿಸಿದರೆ ಮಾತ್ರ ಸಿನಿಮಾ ಅವಕಾಶಗಳು‌ ಸಿಗುತ್ತವೆ ಅನ್ನುವ ಭಾವನೆಯನ್ನು ತೊಡೆದು ಹಾಕಿರುವ ಏಕೈಕ ನಟಿ ಅಂದರೆ ಅದು ಸಾಯಿ ಪಲ್ಲವಿ. ಹೌದು, ದಕ್ಷಿಣಭಾರತದ ನಟಿಯರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ಸಾಯಿಪಲ್ಲವಿ. ಇವರು ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದ್ದರು.

ಆ ಸಿನಿಮಾದಲ್ಲಿ ಸಾಯಿಪಲ್ಲವಿಯ ಮಲರ್ ಅನ್ನುವ ಟೀಚರ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇವರು ಕೇವಕ ಮಲಯಾಳಂ ಸಿನಿಮಾಗಳಲ್ಲಿ ಮಾತ್ರವಲ್ಲ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಸಾಯಿ ಪಲ್ಲವಿ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ, ಇವರು 2016 ರಲ್ಲಿ ಎಂ‌ಬಿಬಿಎಸ್ ಮುಗಿಸಿದ್ದರು. ಆದರೆ ಇವರನ್ನು ಸಿನಿಮಾ ಲೋಕ ಬರ ಸೆಳೆದಿತ್ತು. ಸಿನಿಮಾ ಕ್ಷೇತ್ರಕ್ಕೆ ಬಂದ ಸಾಯಿ ಪಲ್ಲವಿ ತಮ್ಮ ಸರಳತೆ, ಹಾಗು ನೋ ಮೇಕಪ್‌ ಲುಕ್‌ ನಿಂದಾಗಿ ಸ್ಪೆಷಲ್ ನಟಿ ಅನ್ನಿಸಿಕೊಂಡವರು.

ನಟಿಯರು ಅಂದರೆ ಅರ್ಧ ಇಂಚು ಮೇಕಪ್ ಹಾಕಿ ಕೊಳ್ಳುವವರು ಎಂದು ಅಂದುಕೊಂಡವರ ಯೋಚನಾ ಶೈಲಿಯನ್ನೇ ಬದಲಾಯಿಸಿದವರು. ಇವರು ಸರಳ ಹಾಗೂ ನೈಜ ಸೌಂದರ್ಯವನ್ನು ಇಷ್ಟ ಪಡುವ ಹುಡುಗರ ಆಲ್ ಟೈಂ ಪೆವರಿಟ್ ಹೀರೋಯಿನ್. ಹೌದು, ಸಿನಿಮಾಗಳಲ್ಲಿ ತುಂಡುಡುಗೆ ತೊಟ್ಟು ನಟಿಸುವ ನಟಿಮಣಿಯರ ನಡುವೆ ಸಾಯಿ ಪಲ್ಲವಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಇವರು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಸ್ನೇಹ ಪರವಾಗಿ ನಡೆದುಕೊಳ್ಳುವ ಸಾಯಿ ಪಲ್ಲವಿ ಕೇವಲ ಅಭಿಮಾನಿಗಳಿಗೆ ಮಾತ್ರ ಅಲ್ಲ ಅನೇಕ ಸ್ಟಾರ್ ನಟರಿಗೂ ಇಷ್ಟ. ಇನ್ನು ಈ ಸೌತ್ ಬ್ಯೂಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಯಾಕೆ ಶಾರ್ಟ್ ಡ್ರೆಸ್ ಹಾಕಿ ನಟಿಸುವುದಿಲ್ಲ ಎಂದು ಅನೇಕರ ಕುತೂಹಲದ ವಿಷಯವಾಗಿದೆ.

PhotoGrid Site 1655288412987

ಇದಕ್ಕೆ ಸಾಯಿ ಪಲ್ಲವಿಯವರೇ ಉತ್ತರ ನೀಡಿದ್ದಾರೆ. ಹೌದು, ಇದೇ ಜೂನ್ 17 ರಂದು ತೆರೆ ಕಾಣಲಿರುವ ರಾಣಾ ದಗ್ಗುಬಾಟಿ ಜೊತೆ ನಟಿಸಿರುವ ತಮ್ಮ‌ ವಿರಾಟ ಪರ್ವಂ ಸಿನಿಮಾ ಕುರಿತಾಗಿ ಸಂದರ್ಶನ ಮಾಡುವಾಗ ಈ ಬಗ್ಗೆ ಹೇಳಿ ಕೊಂಡಿದ್ದಾರೆ. ನಮ್ಮದು ಸಂಪ್ರದಾಯಸ್ಥ ಕುಟುಂಬ. ತಂಗಿಯ ಜೊತೆ ಸೇರಿ ಬ್ಯಾಡ್ಮಿಂಟನ್​ ಆಡುವಾಗ ಅದಕ್ಕೆ ಸೂಟ್ ಆಗುವಂತಹ ಅದೇ ರೀತಿ ಕಂಫರ್ಟ್​ ಆಗುವಂತಹ ಬಟ್ಟೆಗಳನ್ನೇ ಧರಿಸುತ್ತೇನೆ.

ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅದೇ ರೀತಿ ಸಿನಿಮಾಗಳಲ್ಲಿ ನಟಿಸುವಾಗ ಆ ರೀತಿ ಇರಲು ಅವರು ಬಯಸುವುದಿಲ್ಲ ಅಂದಿದ್ದಾರೆ. ಇದಕ್ಕೆ ಕಾರಣ ಒಂದು ಘಟನೆ ಅಂದಿದ್ದಾರೆ.‌ ಅವರು ವಿದ್ಯಾಭ್ಯಾಸಕ್ಕಾಗಿ ಜಾರ್ಜಿಯಾಕ್ಕೆ ಹೋಗಿದ್ದರಂತೆ.‌ ಅಲ್ಲಿ ಟ್ಯಾಂಗೋ ಡ್ಯಾನ್ಸ್​ ಕಲಿತಿದ್ದರಂತೆ. ಆದರೆ ಆ ಡ್ಯಾನ್ಸ್ ​ ಕಲಿಯಲು ವಿಶೇಷವಾದ ಬಟ್ಟೆ ಧರಿಸಬೇಕಾಗುತ್ತದೆ. ಅದಕ್ಕಾಗಿ ಪೋಷಕರ ಅನುಮತಿ ಪಡೆದುಕೊಂಡು, ಆ ಬಟ್ಟೆ ಧರಿಸಿ ಅವರು ಟ್ಯಾಂಗೋ ಡ್ಯಾನ್ಸ್​ ಕಲಿತಿದ್ದರಂತೆ.

ಅದಾಗಿ ಇವರಿಗೆ ‘ಪ್ರೇಮಂ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸಿನಿಮಾ ರಿಲೀಸ್​ ಆದ ಬಳಿಕ ಅವರ ಹಿಂದಿನ‌ ಟ್ಯಾಂಗೋ ಡ್ಯಾನ್ಸ್​ ಫೆಸ್ಟ್ ನಲ್ಲಿ ಮಾಡಿರುವ ಒಂದು ಡ್ಯಾನ್ಸ್ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಅದರಲ್ಲಿ ಕೆಂಬಣ್ಣದ ಸೈಡ್ ಕಟ್ ಇರುವ ಶಾರ್ಟ್ ಬಟ್ಟೆ ಹಾಕಿದ್ದರು.ಆ ವಿಡಿಯೋ‌ನೋಡಿದ ಜನರು ಕೆಟ್ಟ ಕೆಟ್ಟ ಕಮೆಂಟ್​ಗಳು ಮಾಡಿದ್ದರು.‌

ಇದರಿಂದ ತೀರಾ ಮುಜುಗರ ಹಾಗೂ ಕಸಿವಿಸಿಗೆ ಒಳಗಾದ ಸಾಯಿ‌‌ ಪಲ್ಲವಿ ಇನ್ನು ಮುಂದೆ ಸಾಮಾಜಿಕವಾಗಿ ತುಂಡು ಬಟ್ಟೆಯಲ್ಲಿ ಕಾಣಿಸಬಾರದು ಎಂದು ನಿರ್ಧರಿಸಿದ್ದರಂತೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *