ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಸಿನಿಮಾ ತಾರೆಯರು ಧಾರವಾಹಿ ನಟ ನಟಿಯರು ಹಾಗೂ ಇತರ ಕಲಾವಿದರು ಆಕ್ಟಿವ್ ಆಗಿರುತ್ತಾರೆ. ಹಾಗಾಗಿ ಇಂದು ಯಾವ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಎನ್ನುವುದು ಮುಖ್ಯವಲ್ಲ ಯಾಕಂದ್ರೆ ಎಲ್ಲಾ ಭಾಷೆಯ ಜನರು ಬೇರೆ ಭಾಷೆಯ ಕಲಾವಿದರನ್ನು ಫಾಲೋ ಮಾಡುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಕಲಾವಿದರು ಇಂದು ಫೇಮಸ್ ಆಗುತ್ತಿದ್ದಾರೆ. ಸಿನಿಮಾಗಳ ನಟನಿಗಿಂತಲೂ ಹೆಚ್ಚಾಗಿ ಸೋಶಿಯಲ್ ಮೀಡಿಯಾದ ಮೂಲಕವೇ ಹೆಚ್ಚು ಜನ ಮನ್ನಣೆ ಗಳಿಸಿಕೊಳ್ಳುತ್ತಿದ್ದಾರೆ.
ನಿರೂಪಕಿ ರಶ್ಮಿ ಕೂಡ ಇಂದು ದೇಶಾದ್ಯಂತ ಸೋಶಿಯಲ್ ಮೂಡಿ ಮೀಡಿಯಾದ ಮೂಲಕವೇ ಚಿರಪರಿಚಿತರಾಗಿದ್ದಾರೆ. ಹೌದು, ತೆಲುಗು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜಬರ್ದಸ್ತ್ ಶೋ ನ ನಿರೂಪಕಿಯಾಗಿ ರಶ್ಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತಿರುವುದಕ್ಕೆ ಕಾರಣವೇ ರಶ್ಮಿ ಎಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಅವರು ಅಷ್ಟು ಅದ್ಭುತವಾಗಿ ನಿರೂಪಣೆ ಮಾಡುತ್ತಾರೆ.
ಜೊತೆಗೆ ತಮ್ಮದೇ ಆದ ಪರ್ಫಾರ್ಮೆನ್ಸ್ ಕೂಡ ನೀಡುತ್ತಾರೆ. ಹಾಗಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ ರಶ್ಮಿ. ನಿರೂಪಕಿ ರಶ್ಮಿ ಒಬ್ಬ ನಾಯಕ ನಟಿಯ ಮೆಟೀರಿಯಲ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆಕ್ಟಿಂಗ್ ಹಾಗೂ ನೋಡುವುದಕ್ಕೂ ಬಹಳ ಸ್ಪುರದ್ರೂಪಿ ಆಗಿದ್ದಾರೆ ರಶ್ಮಿ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮದೇ ಆದ ಖಾತೆಯನ್ನು ಹೊಂದಿರುವ ನಿರೂಪಕಿ ರಶ್ಮಿ ಈಗಾಗಲೇ ಸಾಕಷ್ಟು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.
ವಿವಿಧ ರೀತಿಯ ಫೋಟೋಶೂಟ್ ಗಳನ್ನ ಕೂಡ ಮಾಡಿಸಿ ಪೋಸ್ಟ್ ಮಾಡುತ್ತಾರೆ. ಇನ್ನು ರಶ್ಮಿ ಅವರ ಯಾವುದೇ ವಿಡಿಯೋ ಅಪ್ಲೋಡ್ ಆದ್ರೂ ಅದಕ್ಕೆ ಸಾಕಷ್ಟು ಲೈಕ್ ಗಳು, ಕಮೆಂಟ್ ಗಳು ಬರುತ್ತವೆ. ತೆಲುಗು ನಿರೂಪಕಿ ಒಬ್ಬಳು ದೇಶಾದ್ಯಂತ ಎಲ್ಲರಿಗೂ ಇಷ್ಟವಾಗಿದ್ದಾಳೆ ಅಂದ್ರೆ ಅದಕ್ಕೆ ಸೋಶಿಯಲ್ ಮೀಡಿಯಾ ಕೂಡ ಕಾರಣ. ಅಂದಹಾಗೆ ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರಲು ರಶ್ಮಿ ಬಯಸುತ್ತಾರೆ. ಹಾಗಾಗಿ ಇಲ್ಲಿ ಜನರು ಕೇಳುವ ಪ್ರಶ್ನೆಗೂ ಕೂಡ ರಶ್ಮಿ ನೇರವಾಗಿ ಉತ್ತರಿಸುತ್ತಾರೆ.
ನಿರೂಪಕಿ ರಶ್ಮಿ ಪ್ರಾಣಿ ಪ್ರಿಯೆ ಕೂಡ ಹೌದು. ಹಾಗಾಗಿ ಸಾಕಷ್ಟು ಸಾಕು ಪ್ರಾಣಿಗಳ ಜೊತೆಗೆ ಇರುವ ಫೋಟೋ ಹಾಕು ವಿಡಿಯೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಇತ್ತೀಚೆಗೆ ಅಭಿಮಾನಿ ಒಬ್ಬರ ಜೊತೆಗೆ ಮಾತನಾಡುತ್ತಿದ್ದಾಗ ಆತ ಹೀಗೊಂದು ಕಮೆಂಟ್ ಮಾಡುತ್ತಾನೆ. ‘ಜಬರ್ದಸ್ತ್ ಅಂತಹ ಬಕ್ವಾಸ್ ಕಾರ್ಯಕ್ರಮಕ್ಕೆ ನೀವ್ಯಾಕೆ ನಿರೂಪಣೆ ಮಾಡುತ್ತೀರಾ? ನೀವು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಬೇಕು’ ಅಂತ ಪ್ರಶ್ನೆ ಮಾಡಿದ್ದಾನೆ.
ಇದಕ್ಕೇ ನಿರೂಪಕಿ ರಶ್ಮಿ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ. ’ನನ್ನ ಬಳಿ ಸಾಕಷ್ಟು ಕಥೆ ಇದೆ ನಾನು ನಾಯಕನಟಿಯಾಗಿ ಅಭಿನಯಿಸಲು ಸಿದ್ದಳಿದ್ದೇನೆ. ನೀವು ನಿರ್ದೇಶನ ಮಾಡುತ್ತೀರಾ? ಹಾಗಾದರೆ ಹೇಳಿ ಈಗಲೇ ಈ ಶೋ ಬಿಟ್ಟು ಬರುತ್ತೇನೆ’ ಅಂತ ಆ ವ್ಯಕ್ತಿಯ ಪ್ರಶ್ನೆಗೆ ಕೌಂಟರ್ ಕೊಟ್ಟಿದ್ದಾರೆ ರಶ್ಮಿ. ಸುಮ್ಮನಿರಲಾರದೆ ಇರುವೆ ಬಿಟ್ಕೊಂಡ್ರು ಅನ್ನುವ ಹಾಗೆ ಏನೋ ಕೇಳಲು ಹೋಗಿ ಕೊನೆಗೆ ಉತ್ತರವನ್ನೇ ನೀಡದೆ ಪರಾರಿಯಾಗಿದ್ದಾನೆ ಆ ವ್ಯಕ್ತಿ. ರಶ್ಮಿ ಅವರ ಉತ್ತರಕ್ಕೆ ಅವರ ಅಭಿಮಾನಿಗಳು ಶಹಭಾಸ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.