ಕೆಲವರ ಐಷಾರಾಮಿ ಜೀವನವನ್ನ ನೋಡಿ ಅಬ್ಬಾ ಎಲ್ಲಿಂದ ಇಷ್ಟೊಂದು ಹಣ ಸಂಪಾದಿಸುತ್ತಾರಪ್ಪಾ ಎಂದು ಉದ್ಘರವೆತ್ತುತ್ತೇವೆ. ಯಾಕಂದ್ರೆ ಭಾರತದಂತಹ ದೇಶದಲ್ಲಿ ಕೆಲವರು ತಿಂಗಳ ಸಂಬಳ ನಂಬಿ ಬದುಕುವವರಾದರೆ, ಇನ್ನಷ್ಟು ಮಂದಿ ದಿನದ ದುಡಿಮೆ ನೆಚ್ಚಿ ಬದುಕು ನಡೆಸುತ್ತಾರೆ. ಎಷ್ಟೋ ಜನ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಇದೆ. ಇನ್ನು ಮಧ್ಯಮ ವರ್ಗದ ಜನರನ್ನ ತೆಗೆದುಕೊಂಡರೆ, ಮರ್ಯದಿಯೆ ಇವರ ಆಸ್ತಿ. ಆದರೆ ಆರಕ್ಕೆ ಎರಲ್ಲ ಮೂರಕ್ಕೆ ಇಳಿಯಲ್ಲ ಎನ್ನುವ ಸ್ಥಿತಿ. ಇನ್ನು ಇವರೆಲ್ಲರನ್ನೂ ಹೊರತುಪಡಿಸಿದ ಒಂದು ವರ್ಗವಿದೆ. ಅದೇ ಶ್ರೀಮಂತ ವರ್ಗ.
ಇವರಲ್ಲಿ ಎಲ್ಲರೂ ಅನ್ಯಾಯ ಮಾಡಿಯೇ ಹಣ ಮಾಡುತ್ತಾರೆ ಎಂದಲ್ಲ. ಕಷ್ಟ ಪಟ್ಟು ಮೇಲೆ ಬಂದಿರುವ ಸಾಕಷ್ಟು ಜನರಿದ್ದಾರೆ. ಆದರೆ ಬೇರೆಯವರ ಹಣವನ್ನೇ ಬಂಡವಾಳವಾಗಿಟ್ಟುಕೊಂಡು ತಮ್ಮ ಸ್ಥಿತಿ ಸುಧಾರಿಸಿಕೊಳ್ಳುವವರು ಹಲವರಿದ್ದಾರೆ. ಉದಾಹರಣೆಗೆ ರಾಜಕಾರಣಿಗಳನ್ನು ತೆಗೆದುಕೊಳ್ಳಿ. ನಾವು ಜನ ಸೇವೆಗಾಗಿ ಅವರನ್ನ ಎಲೆಕ್ಟ್ ಮಾಡಿ ಕಳುಹಿಸಿದ್ದರೆ, ಅವರು ತಮ್ಮ ಆಸ್ತಿ ವಿಸ್ತರಿಸುವುದಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಬಹುದು.
ಎಲ್ಲರೂ ಹಾಗೇ ಎಂದಲ್ಲ, ಆದರೆ ಹೆಚ್ಚು ಜನ ರಾಜಕಾರಣಕ್ಕೆ ಬರುವುದೇ ಹಣ ಮಾಡುವುದಕ್ಕೆ ಎನ್ನುವುದು ಅವರು ಬದುಕುವ ರೀತಿ ನೀತಿಗಳನ್ನು ನೋಡಿದ್ರೇನೆ ಅರ್ಥವಾಗುತ್ತದೆ. ಚಾಮರಾಜ ಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಜಮೀರ್ ಅಹಮ್ಮದ್ ಖಾನ್ ಅವರ ಬಂಗಲೆಯನ್ನು ನೋಡಿದ್ರೆ ನಿಮಗೆ ನಮ್ಮ ಮಾತು ಅರ್ಥ ವಾಗಬಹುದು. ಹೌದು, ಜಮೀರ್ ಅಹಮ್ಮದ್ ಖಾನ್ ಕೋಟಿ ಕೋಟಿ ಆಸ್ತಿಗಳ ಒಡೆಯ. ಅವರ ಬಳಿ ಇರುವ ಆಸ್ತಿ ವಿವರ ಇನ್ನೂ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಎಣಿಸೋಕೆ ಸಾಧ್ಯವಿಲ್ಲದಷ್ಟು ಆಸ್ತಿಗಳನ್ನ ಮಾಡಿಟ್ಟಿದ್ದಾರೆ ಜಮೀರ್ ಅಹ್ಮದ್ ಖಾನ್. ಇದಕ್ಕೆ ಸಾಕ್ಷಿ ಅವರು ಕಟ್ಟಿಸಿರುವ ಒಂದು ಭವ್ಯವಾದ ಬಂಗಲೆ.
ಬೆಂಗಳೂರಿನ ಕಂಟ್ರೋಲ್ ಮೆಂಟ್ ರೈಲ್ವೆ ಸ್ಟೇಷನ್ ಬಳಿ ಜಮೀರ್ ಅಹ್ಮದ್ ಅವರ ಈ ಬಂಗಲೆಯನ್ನು ನೋಡಬಹುದು. ಬಂಗಲೆ ಅಂದರೂ ತಪ್ಪಾಗಬಹುದು ಇದು ಮೈಸೂರಿನ ಅರಮನೆಯನ್ನು ಮೀರಿಸುವಷ್ಟು ವೈಭವೋಪೇತವಾಗಿ ನಿರ್ಮಾಣವಾದ ಮನೆ. ಮಿಲಿಯನ್ ಕಟ್ಟಲೆ ಹಣವನ್ನು ಖರ್ಚು ಮಾಡಿ ಜಮೀರ್ ಅಹ್ಮದ್ ಖಾನ್ ತಮ್ಮ ಬಂಗಲಿಯಾನ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಇರುವ ಪ್ರತಿಯೊಂದು ವಸ್ತುಗಳು, ನಿರ್ಮಾಣ ಶೈಲಿ ಎಲ್ಲವೂ ಬಹಳ ವಿಶೇಷವಾದದ್ದು. ಅಲ್ಲದೆ ಮನೆಗೆ ಅಲ್ಲಲ್ಲಿ ಚಿನ್ನ ಹಾಗೂ ಬೆಳ್ಳಿಯ ಲೇಪನಗಳನ್ನ ಮಾಡಿರುವಂತಹ ನಿರ್ಮಾಣ ಶೈಲಿಯನ ನೀವು ಕಾಣಬಹುದು.
ಬಿಳಿಯ ಶಿಲೆಗಳಲ್ಲಿ ನಿರ್ಮಾಣವಾದಂತ ಈ ಬಂಗಲೆಯಲ್ಲಿ ಅಳವಡಿಸಲಾಗಿರುವ ಕೆಲವು ವರ್ಣ ಚಿತ್ರಗಳು ಚಿನ್ನ ಲೇಪೀತವಾದವು. ಇಡಿ ಮನೆ ಚಿನ್ನ ಹಾಗೂ ಬೆಳ್ಳಿಯ ಬಣ್ಣಗಳಿಂದ ಕಂಗೊಳಿಸುತ್ತದೆ. ಈ ಬಂಗಲೆಯನ್ನು ಅರೇಬಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಮನೆಯ ಇಂಟೀರಿಯರ್ ಮನೆಯಲ್ಲಿ ಬಳಸಲಾಗಿರುವ ಫರ್ನಿಚರ್ ಗಳು ಎಲ್ಲವೂ ವಿಶೇಷ ಹಾಗೂ ಸಿಕ್ಕಾಪಟ್ಟೆ ದುಬಾರಿಯಾದವು.
ನೋಡುಗರ ಕಣ್ಣು ಕುಕ್ಕುವ ರೀತಿಯಲ್ಲಿ ಜಮೀರ್ ಅಹಮದ್ ಖಾನ್ ಮನೆಯನ ನಿರ್ಮಿಸಿದ್ದಾರೆ. ಈಗಾಗಲೇ ಈಡಿ ತನಿಖೆಯು ಈ ಮನೆಯ ಕುರಿತಂತೆ ನಡೆದಿದೆ. ದೇಶದ ದೊಡ್ಡ ಪ್ಯಾಲೇಸ್ ಗಳನ್ನು ಕೂಡ ಮೀರಿಸುವಂತಹ ಬಂಗಲೆಯನ್ನು ನಿರ್ಮಿಸಿದ್ದಾರೆ ಜಮೀರ್ ಅಹ್ಮದ್ ಖಾನ್. ಈ ಮನೆ ಹೇಗಿದೆ ಎಂದರೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು ಆಶ್ಚರ್ಯವಿಲ್ಲ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ.