ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆದಿದೆ. ಯಶಸ್ವಿಯಾಗಿ ಎರಡನೇ ವಾರಕ್ಕೂ ಕಾಲಿಟ್ಟಿದೆ. ಇನ್ನು ಈಗಾಗಲೇ ಕಿರಣ್ ಯೋಗೇಶ್ವರ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ತಮ್ಮ ಕನ್ನಡ ಸರಿಯಾಗಿ ಮಾತನಾಡಲು ಬಾರದೇ ಇದ್ದುದ್ದೆ ನಾನು ಮನೆಯಿಂದ ಹೊರ ಹೋಗಲು ಮುಖ್ಯ ಕಾರಣವಾಯಿತು ಅಂತ ಕಿರಣ್ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಹೇಳಿದ್ದಾರೆ. ಇನ್ನು ಮುಂದಿನ ವಾರ ಯಾರು ಮನೆಯಿಂದ ಹೊರಗೆ ಬರಬಹುದು ಅನ್ನುವ ಕುತೂಹಲ ಈಗಾಗಲೇ ಜನರಲ್ಲಿ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ಇರುವ 15 ಸ್ಪರ್ಧಿಗಳಲ್ಲಿ ಎಲ್ಲರೂ ಒಂದಲ್ಲ ಒಂದು ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ಜನರಿಗೆ ಈ ಬಾರಿಯ ಸ್ಪರ್ಧಿಗಳ ಬಗ್ಗೆ ಅಷ್ಟು ಉತ್ತಮ ಅಭಿಪ್ರಾಯವಿಲ್ಲ ಹಾಗಾಗಿ ಬಿಗ್ ಬಾಸ್ ಮನೆ ತುಂಬಾನೇ ಟ್ರೂಲ್ ಆಗುತ್ತಿದೆ ಹೊರ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತವೆ. ಇನ್ನು ಇದೀಗ ಮನೆಯೊಳಗೆ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಗುರೂಜಿ ಹೇಳಿರುವ ಮಾತು ಹೆಚ್ಚು ಟ್ರೋಲ್ ಗೆ ಗುರಿಯಾಗಿದೆ. ಹಾಗಾದ್ರೆ ಆರ್ಯವರ್ಧನ್ ಗುರೂಜಿ ಹೇಳಿದ್ದು ಏನು ಗೊತ್ತಾ?
ಬಿಗ್ ಬಾಸ್ ಮನೆ ಪ್ರವೇಶಿಸಿದ ಮೊದಲನೆಯ ದಿನವೇ ಅಲ್ಲಿನ ಸ್ಪರ್ಧೆಗಳು ತಮ್ಮ ಜೀವನದ ಕಹಿ ಘಟನೆಗಳನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದರು ಆದರೆ ಲೋಕೇಶ ಕುಮಾರ ಮಾತನಾಡುವ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ ಹೀಗೆಲ್ಲಾ ಅತ್ತು ಕರೆದು ಸಿಂಪತಿ ಗಿಟ್ಟಿಸಿಕೊಳ್ಳಬಾರದು ಅಂತ ಖಡಕ್ ಆಗಿ ಹೇಳಿದ್ರು. ಇದಕ್ಕೆ ಜನರು ಕೂಡ ಒಮ್ಮತ ಸೂಚಿಸಿದ್ರು. ಇನ್ನು ಇದೀಗ ಆರ್ಯವರ್ಧನ ಗುರೂಜಿ ತನಗೆ ತನ್ನ ಹೆಂಡತಿ ಕಂಡ್ರೆ ಭಯ ಅಂತ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರಿಗೂ ಹೆಂಡತಿ ಭಯಾನ ಅಂತ ಜನ ಕಮೆಂಟ್ ಮಾಡಿ ಕೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಾ ಆರ್ಯವರ್ಧನ್ ಗುರೂಜಿ ‘ ನಾನು ನನ್ನ ಹೆಂಡತಿಗೆ ಹೆದರುತ್ತೇನೆ ನಾನು ಜೋರಾಗಿ ಅವಾಜ್ ಹಾಕುತ್ತೇನೆ ಆದರೂ ಆಕೆ ನನ್ನ ತಪ್ಪನ್ನು ಕಂಡುಹಿಡಿಯುತ್ತಾಳೆ. ನನ್ನ ತಪ್ಪನ್ನು ಕರೆಕ್ಟ ಆಗಿ ಹುಡುಕಿ ಹೇಳುತ್ತಾಳೆ. ಆದರೂ ನನ್ನಲ್ಲಿ ಅಷ್ಟೊಂದು ತಪ್ಪು ಆಗಿದೆ ಸಿಗೋದಿಲ್ಲ ಅಂತ’ ಆರ್ಯವರ್ಧನ್ ಹೇಳಿದ್ದಾರೆ.
ಇನ್ನು ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಗೆ ಹೋಗಲು ಸೆಲೆಕ್ಟ್ ಆಗಿದ್ದಾರೆ ಎಂದು ತಿಳಿದ ತಕ್ಷಣ ಗುರೂಜಿ ಅವರ ಹೆಂಡತಿ ತುಂಬಾ ಅತ್ತು ಬಿಟ್ಟರಂತೆ. ನಂತರ ಪರಿಚಯದವರನ್ನ ಕರೆಸಿ ಅವಳನ್ನ ಸಮಾಧಾನ ಮಾಡಿದ್ದೇನೆ ಎಂದಿದ್ದಾರೆ. ಇನ್ನು ತಾನು ಮನೆಯಲ್ಲಿ ಒಂದು ಶರ್ಟ್ ಹಾಗೂ ಪಂಚೆಯನ್ನು ಹಾಕಿಕೊಳ್ಳುತ್ತಿದ್ದೆ. ನನ್ನ ಹೆಂಡತಿ ಹಾಗೂ ನನ್ನ ಸ್ಟಾಫ್ ಸೇರಿ ನನ್ನ ಈ ಎಲ್ಲಾ ಬಟ್ಟೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ ಅಂತ ಆರ್ಯವರ್ಧನ್ ಗುರೂಜಿ ತಿಳಿಸಿದ್ದಾರೆ.
ಆರ್ಯವರ್ಧನ್ ಕಳೆದ ವಾರವು ನಾಮಿನೇಟ್ ಆಗಿದ್ರು ಈ ವಾರವು ನಾಮಿನೇಟ್ ಆಗಿದ್ದಾರೆ. ಈ ವಾರದ ಕ್ಯಾಪ್ಟನ್ ಆಗಿರುವ ಅರ್ಜುನ್ ರಮೇಶ್ ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಖುಷಿಯಾಗಿಯೇ ಕಾಲ ಕಳೆಯುತ್ತಿರುವ ಆರ್ಯವರ್ಧನ ಗುರೂಜಿ ಈ ಬಾರಿ ಟಾಸ್ಕ್ ನಲ್ಲಿ ಗೆದ್ದು ಎಲಿಮಿನೇಷನ್ ಭೀತಿಯಿಂದ ತಪ್ಪಿಸಿಕೊಳ್ಳುತ್ತಾರಾ ಕಾದು ನೋಡಬೇಕು. ಆರ್ಯವರ್ಧನ್ ಗುರೂಜಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.