ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿ ಪ್ರವೇಶಿಸಿದ ಒಬ್ಬೊಬ್ಬರದ್ದು ಒಂದೊಂದು ಕಥೆ. ನಾನು ಯಾರು ಎನ್ನುವ ಟಾಸ್ಕ್ ಮೂಲಕ ಎಲ್ಲರೂ ತಮ್ಮ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರದ್ದೂ ಕಣ್ಣೀರು ತರಿಸುವ ಕಥೆ. ಅದರಲ್ಲೂ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಸಾನ್ಯ ಅಯ್ಯರ್ ಅವರು ತಮ್ಮ ಮಲತಂದೆಯಿಂದ ಅನುಭವಿಸಿದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಅವರ ತಾಯಿ ದೀಪ ಅಯ್ಯರ್.
ಇವರು ಕೂಡ ಕಿರುತೆರೆಯಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಈಗಲೂ ಲಕ್ಷಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಸಾನ್ಯಾ ಅಯ್ಯರ್ ಅವರ ಜೀವನದ ಕಥೆ ಇದು ನೋಡಿ.. ಸಾನ್ಯಾ ಅಯ್ಯರ್ ಅವರ ತಾಯಿ ದೀಪ ಅಯ್ಯರ್ ಅವರಿಗೆ ಎರಡು ಮದುವೆ. ಇಬ್ಬರಿಂದಲೂ ವಿ’ಚ್ಛೇಧನವನ್ನೂ ಪಡೆದಿದ್ದಾರೆ. ದೀಪಾ ಮದುವೆಯಾಗಿ, ಸಾನ್ಯಾ ಹುಟ್ಟಿ ಎರಡು ವರ್ಷಕ್ಕೇ ಪತಿಯಿಂದ ಡೀ’ವೋರ್ಸ್ ತೆಗೆದುಕೊಳ್ಳುತ್ತಾರೆ ನಂತರ ಸಾನ್ಯಾಳಿಗೆ ಅಪ್ಪನ ಪ್ರೀತಿ ಸಿಗಬೇಕು ಎನ್ನುವ ಕಾರಣಕ್ಕೆ ಸ್ನೇಹಿತನನ್ನು ಮತ್ತೆ ಮದುವೆಯಾಗುತ್ತಾರೆ.
ಆದರೆ ಈ ಮದುವೆಯಲ್ಲಿ ದೀಪ ಅವರಿಗೆ ಸಂತೋಷ ಸಿಗುವುದಿಲ್ಲ. ಸ್ನೇಹಿತನಾದವನು ಸಂಗಾತಿಯಾಗಿ ದೀಪಾಅವರಿಗೆ ಸರಿಬರುವುದಿಲ್ಲ. ಈ ಮದುವೆ ತನ್ನ ತಪ್ಪು ನಿರ್ಧಾರ ಎಂದು ಅವರಿಗೆ ಅನಿಸುತ್ತದೆ. ಸಾನ್ಯಾ ಅಯ್ಯರ್ ತನ್ನ ಹೆತ್ತ ತಂದೆಗಿಂತಲೂ ಹೆಚ್ಚಾಗಿ ಮಲತಂದೆಯನ್ನೇ ಹಚ್ಚಿಕೊಂಡಿರುತ್ತಾರೆ. ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಇನ್ನು ಅವರೂ ಕೂಡ ಸಾನ್ಯಾಳನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ.
ಆದರೆ ದೀಪ ಮಾತ್ರ ಸಂಸಾರದಲ್ಲಿ ನೆಮ್ಮದಿ ಇಲ್ಲದ ಕಾರಣ ತನ್ನ ಎರದನೇ ಪತಿಗೂ ವಿ’ಚ್ಛೇದನ ನೀಡುವ ನಿರ್ಧಾರ ಮಾಡುತ್ತಾರೆ. ದೀಪಳಿಂದ ವಿ’ಚ್ಛೇದನ ಪಡೆಯಲು ಇಚ್ಛಿಸದ ದೀಪಾಳ ಎರಡನೆಯ ಪತಿ ಸಾನ್ಯಾಳನ್ನು ಮುಂದೆ ಇಟ್ಟುಕೊಂಡು ದೀಪಾಗಳೊಂದಿಗೆ ಜೀವನ ನಡೆಸಲು ಮುಂದಾಗುತ್ತಾನೆ .ಅದಕ್ಕಾಗಿ ಆತ ಮಾಡಿದ್ದು ಮಾತ್ರ ನಿಜಕ್ಕೂ ಅಸಹನೀಯ ಕೆಲಸ. ನಟಿ ಸಾನ್ಯಾ ಒಮ್ಮೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಕೋಣೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ.
ಆಕೆಯ ಮಲತಂದೆ ಸ್ವಲ್ಪವೂ ನಾಚಿಕೆಯಿಲ್ಲದೇ ಪಕ್ಕದ ಮನೆಯ ಕಿಟಕಿಯಿಂದ ಅವರಿಬ್ಬರು ಕುಳಿತಿರುವುದನ್ನು ವಿಡಿಯೋ ಮಾಡಿಕೊಳ್ಳುತ್ತಾನೆ. ಆ ವಿಡಿಯೋವನ್ನು ಅಜ್ಜಿ, ಚಿಕ್ಕಮ್ಮ ಹಾಗೂ ಇತರರಿಗೆ ತೋರಿಸುತ್ತಾನೆ. ಆತನೂ ಸಿನಿಮಾರಂಗದೊಂದಿಗೆ ಸಂಬಂಧಹೊಂದಿದ್ದರಿಂದ ಇಂಡಸ್ಟ್ರಿಯಲ್ಲಿ ಹಲವರಿಗೆ ವಿಡಿಯೋ ತೋರಿಸಿ ಸಾನ್ಯಾಳಿಗೆ ಅವಮಾನ ಮಾಡುತ್ತಾನೆ. ದೀಪಾ ಸಿಂಗಲ್ ಮದರ್ ಆಗಿ ಮಗಳನ್ನು ನೋಡಿಕೊಳ್ಳುವುದು ಕಷ್ಟ ಅಂತ ಎಲ್ಲರಲ್ಲಿಯೂ ಹೇಳುತ್ತಾನೆ.
ಸಾನ್ಯಾ ಅವರ ತಾಯಿ ಬಳಿ ಒಮ್ಮೆ ಒಬ್ಬ ವ್ಯಕ್ತಿ ಬಂದು ನಾನು ನಿನ್ನ ಮಗಳ ವಿಡಿಯೋ ನೋಡಿದೇನೆ ಎಂದು ಹೇಳುತ್ತಾರೆ. ಇದರಿಂದ ನೊಂದ ದೀಪಾ ಆ ವಿಡಿಯೋದಲ್ಲಿ ಏನಿತ್ತು ಹೇಳು ಅಂತ ಸಾನ್ಯಾ ಅವರನ್ನಕೇಳುತ್ತಾರೆ. ’ನಾನು ನಿಜವಾಗಿಯೂ ನನ್ನ ಬಾಯ್ ಫ್ರೆಂಡ್ ಜೊತೆ ಸುಮ್ಮನೆ ಕುಳಿತಿದ್ದೆ ಅಷ್ಟೇ, ಮೈತುಂಬ ಬಟ್ಟೆ ಇತ್ತು’ ಈ ವಿಡಿಯೋವನ್ನು ಅಮ್ಮ ನೋಡಿಲ್ಲ ಹಾಗಾಗಿ ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲ.
ಇಷ್ಟು ವರ್ಷ ಸಾಕಿ ಬೆಳೆಸಿದ ನಿನಗೆ ನಾನು ಅವಮಾನ ಮಾಡಿಲ್ಲ, ಮಾಡೋದಿಲ್ಲ ಅಂತ ಸಾನ್ಯಾ ತಮ್ಮ ಕಥೆಯನ್ನು ಹೇಳಿ ಕಣ್ಣೀರಿಟ್ಟಿದ್ದಾರೆ. ಇನ್ನು ಬೇರೆಯವರಿಂದ ಪ್ರೀತಿಯನ್ನು ನಿರೀಕ್ಷೆ ಮಾಡಲ್ಲ ಸ್ವಾವಲಂಬಿಯಾಗಿಯೇ ಬದುಕುತ್ತೇನೆ ಅಂತ ಸಾನ್ಯಾ ಗಟ್ಟಿಯಾಗಿ ನಿರ್ಧರಿಸಿದ್ದಾರೆ. ನೀವು ಬಿಗ್ ಬಾಸ್ ನೋಡಿಲ್ಲಾ ಅಂದ್ರೆ ಈಗಲೇ ವೂಟ್ ಸೆಲೆಕ್ಟ್ ಚಂದಾದಾರಿಕೆಯನ್ನು ಪಡೆದುಕೊಳ್ಳಿ!