PhotoGrid Site 1659682111595

ನನ್ನ ಗಂಡ 16 ವರ್ಷಗಳಿಂದ ಕೆಲಸ ಮಾಡುತ್ತಿಲ್ಲ, ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಇರ್ತಾರೆ ಎಂದು ಕಣ್ಣೀರಿಟ್ಟ ಕಿರುತೆರೆ ನಟಿ ಸ್ವಪ್ನಾ ದೀಕ್ಷಿತ್! ಅಸಲಿ ವಿಷಯ ತಿಳಿದು ಬೆಚ್ಚಿಬಿದ್ದ ಜನತೆ ನೋಡಿ!!

ಸುದ್ದಿ

ಈ ಬಣ್ಣದ ಜಗತ್ತು ಅಂದರೆ ಅದು ಸಿನಿಮಾ ಕ್ಷೇತ್ರವಾಗಲಿ ಅಥವಾ ಧಾರವಾಹಿ ಲೋಕವಾಗಲಿ ಅದರಲ್ಲಿನ ಕಲಾವಿದರು ಹೊರ ನೋಟಕ್ಕೆ ಅದ್ಭುತವಾಗಿ ಕಂಡು ಬಂದರೂ ಅವರ ವೈಯಕ್ತಿಕ ಜೀವನದಲ್ಲಿ ತುಂಬಾ ಕ-ಷ್ಟ ನೋ-ವು ಇರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅವರು ತಮ್ಮ‌ ಜೀವನದ ಕಹಿ‌ ಘಟನೆ ಅಥವ ಜೀವನದ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಅದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಆಗುತ್ತದೆ.‌

ಇದೀಗ ಕನ್ನಡದ ನಟಿಯೊಬ್ಬರು ಹೇಳಿರುವ ಮಾತು‌ ಕೇಳಿ ಎಲ್ಲರಿಗೂ ಶಾಕ್ ಜೊತೆ ಭಯ ಶುರುವಾಗಿದೆ. ಸ್ಟಾರ್ ಸುವರ್ಣದಲ್ಲಿ ಇಸ್ಮಾರ್ಟ್ ಜೋಡಿ ಅನ್ನುವ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ‌‌. ಈ ರಿಯಾಲಿಟಿ ಶೋಗಳಲ್ಲಿ ಜೋಡಿಗಳು ಮನಸ್ಸು ಬಿಚ್ಚಿ ಮಾತನಾಡುತ್ತಾರೆ, ತಮ್ಮ ಜೀವನದ ಖುಷಿಗಳನ್ನು ಅದೇ ರೀತಿ ಕಷ್ಟಗಳನ್ನು ಶೇರ್ ಮಾಡುತ್ತಾರೆ ‌ ಅಷ್ಟೆ ಅಲ್ಲದೆ ಅನೇಕ ಗುಟ್ಟುಗಳನ್ನು ಕೂಡ ಬಿಟ್ಟು ಕೊಡುತ್ತಾರೆ.

ಇದೇ ರೀತಿ ಇದೀಗ ಕನ್ನಡದ ಖ್ಯಾತ ನಟಿ ಸ್ವಪ್ನಾ ದೀಕ್ಷಿತ್ ಒಂದು ಸತ್ಯವನ್ನು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಹೌದು, ಸ್ವಪ್ನಾ ದೀಕ್ಷಿತ್ ಅವರು ಜೀ ಕನ್ನಡದ ನಂ 1 ಧಾರವಾಹಿ ಕಮಲಿಯಲ್ಲಿ ಒಂದು ರೀತಿ ವಿಲನ್ ರೀತಿಯಲ್ಲಿ ಪಾತ್ರ‌ ಮಾಡಿದ್ದರು. ಆದರೆ ಈಗ ಅವರು ಅದರಲ್ಲಿ ಇಲ್ಲ. ಇವರು ಧಾರವಾಹಿ ಮಾತ್ರವಲ್ಲದೆ ಸಿನಿಮಾ ‘ರನ್ನ’, ‘ಭರಾಟೆ’, ‘ರಂಗಿತರಂಗ’, ‘ರಾಜು ಕನ್ನಡ ಮೀಡಿಯಂ’, ‘ಕೃಷ್ಣ ರುಕ್ಕು’, ‘ಮುಕುಂದ ಮುರಾರಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ಕೂಡ ನಟಿಸುತ್ತಿರುವ ಖ್ಯಾತ ನಟಿ ಸ್ವಪ್ನ ದೀಕ್ಷಿತ್. ಇವರು ಇದೀಗ ಸ್ಟಾರ್ ಸುವರ್ಣ ಪ್ರಸಾರ ಮಾಡುತ್ತಿರುವ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ‌ನಲ್ಲಿ ಪತಿ ಅಶ್ವಿನ್ ಜೊತೆ ಭಾಗವಹಿಸಿದ್ದಾರೆ.‌ ಸ್ವಪ್ನ ದೀಕ್ಷಿತ್ ಹಾಗೂ ಅಶ್ವಿನ್ ಅವರದ್ದು ಪ್ರೇಮ ವಿವಾಹ. ಪಿಯುಸಿ ಯಲ್ಲಿ ಇರುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಇವರು ಮದುವೆ ಆಗಿ 19 ವರ್ಷ ಕಳೆದಿವೆ.ಇವರಿಬ್ಬರ ಪರಿಚಯ ಆಗಿ 22 ವರ್ಷ ಕಳೆದಿವೆ.

ಇಂತಹ ಜೋಡಿ ಇಸ್ಮಾರ್ಟ್ ಜೋಡಿಯಲ್ಲಿ ಅದ್ಭುತ ಆಟ ಆಡುತ್ತಿದ್ದಾರೆ.‌ ಇನ್ನು ಈ ಶೋ ಹೋಸ್ಟ್ ಮಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸ್ವಪ್ನಾ ದೀಕ್ಷಿತ್ ಅವರಲ್ಲಿ ನೀವು ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೀರಿ ಎಂದು ಕೇಳಿದ್ದರು. ಆಗ ಅವರು ಮೊದಲು ವೃತ್ತಿ ಜೀವನ, ನಂತರ ಗಂಡ, ಆ ನಂತರ ಮಕ್ಕಳು,ತಂದೆ ತಾಯಿ, ಹಣ, ಸ್ನೇಹಿತರು ಎಂದು ಹೇಳಿದ್ದಾರೆ. ಇದಕ್ಕೆ ಗಣೇಶ್ ಅವರು ಮೊದಲು ವೃತ್ತಿ ಜೀವನ ಯಾಕೆ ಎಂದು ಕೇಳಿದಾಗ.

ಸ್ವಪ್ನಾ ಅವರು “ವೃತ್ತಿ ಜೀವನ ಚೆನ್ನಾಗಿದ್ದರೆ ಮಾತ್ರ ಗಂಡ, ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯ. ಕಳೆದ 16 ವರ್ಷದಿಂದ ಅಶ್ವಿನ್ ದುಡಿಯುತ್ತಿಲ್ಲ, ಅವರು ಮನೆಯಲ್ಲಿಯೇ ಇದ್ದಾರೆ ನಾನೇ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ ತಾಯಿಗೆ ಇಂದಿಗೂ ಕೂಡ ನನ್ನ ಮಗಳು ಮಾತ್ರ ದುಡಿಯುತ್ತಾಳೆ, ಅಳಿಯ ದುಡಿಯೋದಿಲ್ಲ, ಸುಮ್ಮನೆ ಕೂತ್ಕೊಂಡು ತಿಂತಾನೆ ಎಂಬ ಕೊರಗು ಇದ್ದೇ ಇದೆ. ಅಶ್ವಿನ್ ನನಗೆ ಹೀರೋ ಆದರೆ ಸಮಾಜದಿಂದ ಅವರಿಗೂ ಗೌರವ ಬೇಕು” ಎಂದು ಗಣೇಶ್ ಮುಂದೆ ಹೇಳಿಕೊಂಡಿದ್ದಾರೆ.

ಸ್ವಪ್ನಾ ಮಾತು ಕೇಳಿ ಅಶ್ವಿನ್ ಅವರು ಇದು ಟಾಪಿಕ್‌ಲೆಸ್, ಈ ರೀತಿ ಮಾತನಾಡೋದು ಬೇಕಾಗಿರಲಿಲ್ಲ, ನನ್ನ ಕಾಲ ಮೇಲೆ ಚಪ್ಪಡಿ ಹಾಕಿದ್ರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಎಲ್ಲರಿಗೂ ಶಾಕ್ ಕೊಟ್ಟಿದ್ದು, ಮುಂದಿನ ಎಪಿಸೋಡ್ ನಲ್ಲಿ ಗಣೇಶ್ ಈ ಭಿನ್ನಾಭಿಪ್ರಾಯವನ್ನು ಹೇಗೆ ಸರಿಪಡಿಸಲಿದ್ದಾರೆ ಅನ್ನುವುದನ್ನು ನೋಡಬೇಕಾಗಿದೆ‌. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

 

View this post on Instagram

 

A post shared by Pixel Pictures (@pixelpicturesindia)

Leave a Reply

Your email address will not be published. Required fields are marked *