ಬಿಗ್ ಬಾಸ್ ಕನ್ನಡ ಓಟಿಟಿ ಮೊದಲನೆಯ ಸೀಸನ್ ಆರಂಭವಾಗಿದೆ. ಇಲ್ಲಿನ 16 ಸ್ಪರ್ಧಿಗಳಲ್ಲಿ ಕೆಲವರು ಅತಿಯಾಗಿ ಮಾತನಾಡಿದರೆ ಕೆಲವರು ಮಾತೇ ಆಡುವುದಿಲ್ಲ. ಕೆಲವರು ಬಿಗ್ ಬಾಸ್ ಟ್ರೋಫಿ ಎತ್ತುಕೊಂಡು ಹೋಗ್ತೀವಿ ಅಂತ ಕುಳಿತಿದ್ದರೆ. ಇನ್ನೂ ಕೆಲವರು ಯಾಕಾದರೂ ಬಂದೇನಪ್ಪಾ ಅನ್ನೋ ರೀತಿ ಇದ್ದಾರೆ. ಆಗಲೇ ಎಲಿಮಿನೇಷನ್ ಬಿಸಿ ಕೂಡ ಬಿಗ್ ಬಾಸ್ ಸ್ಪರ್ಧಿಗಳಿಗೆ ತಟ್ಟಿದೆ. ಎಂಟು ಸ್ಪರ್ದಿಗಳು ಎಲಿಮಿನೇಟ್ ಆಗಿದ್ದು ಇವರ ಬಿಗ್ ಬಾಸ್ ಮನೆಯನ್ನು ತೊರೆಯುವವರು ಯಾರು ಅನ್ನೋದನ್ನ ವೀಕೆಂಡ್ ವರೆಗೂ ಕಾದು ನೋಡಬೇಕು.
ಇನ್ನು ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ ಅಂತ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಅಂತವರಲ್ಲಿ ಸಾನ್ಯಾ ಅಯ್ಯರ್ ಕೂಡ ತಮ್ಮ ಜೀವನದ ಕರಾಳ ಅಧ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದವರು. ನಾನು ಯಾರು ಎನ್ನುವ ಟಾಸ್ಕ್ ನಲ್ಲಿ ಹಲವಾರು ವಿಷಯಗಳನ್ನ ಶೇರ್ ಮಾಡಿಕೊಂಡು ಸಾನ್ಯ ಅಯ್ಯರ್ ಕಣ್ಣೀರಿಟ್ಟಿದ್ದಾರೆ.
ಮೊದಲಿಗೆ ‘ಅಮ್ಮ ಚಿಕ್ಕಮ್ಮ ನನ್ನನ್ನು ಕ್ಷಮಿಸಿ, ನಾನು ನಮ್ಮ ಬ್ಯಾಕ್ ಸ್ಟೋರಿಯನ್ನ ಇಲ್ಲಿ ಹೇಳಲೇಬೇಕು’ ಅಂತ ಹೇಳಿ ಸಾನ್ಯ ಅಯ್ಯರ್ ತನ್ನ ಮಾತನ್ನು ಆರಂಭಿಸಿದರು. ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಅವರ ಜೀವನದ ನೋವಿನ ಕಥೆ ಹೀಗಿದೆ. ಸಾನ್ಯಾ ಅಯ್ಯರ್ ಅವರ ಚಿಕ್ಕಮ್ಮ ಮದುವೆಯಾಗಿ ಮದುವೆಯಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತಾರೆ. ಸಾನ್ಯಾ ಅಯ್ಯರ್ ಅವರ ಎದುರಿನಲ್ಲಿಯೇ ಅವರ ಚಿಕ್ಕಮ್ಮನಿಗೆ ಗಂಡನಿಂದ ಏಟು ಬೀಳುತ್ತಿತ್ತು.
ಸಾನ್ಯಾ ಅಯ್ಯರ್ ಕೂಡ ಒಂದು ರಿಲೇಷನ್ಶಿಪ್ ನಲ್ಲಿ ಇರುತ್ತಾರೆ. ಆದರೆ ಆ ರಿಲೆಶನ್ ಶಿಪ್ ನಲ್ಲಿ ಸಾಕಷ್ಟು ನೋವನ್ನು ಅನುಭವಿಸುದ್ದಾರೆ ಸಾನ್ಯಾ. ಆದರೂ ಸಬಂಧ ಉಳಿಯಬೇಕು ಎನ್ನುವ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ಸಿದ್ದರಾಗುತ್ತಾರೆ. ಆದರೆ ಯಾಉದೇ ಪ್ರಯೋಜನವೂ ಆಗುವುದಿಲ್ಲ. ಇನ್ನು ತನ್ನ ಮಲತಂದೆ ಹೇಗೆ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡು ಅನ್ನೋದನ್ನ ಕೂಡ ಸಾನ್ಯಾ ಬಿಚ್ಚಿಟ್ಟಿದ್ದಾರೆ.
ಸಾನ್ಯ ಅಯ್ಯರ್ ಅವರ ಅಮ್ಮ ಡಬಲ್ ಡಿವೋರ್ಸಿ. ಅವರಿಗೆ ಎರಡು ಬಾರಿ ಮದುವೆಯಾಗಿತ್ತು. ಒಬ್ಬರು ಸಾನ್ಯಾ ಅವರ ಹೆತ್ತ ತಂದೆ. ಇನ್ನೊಬ್ಬರು ಮಲತಂದೆ. ಮಲತಂದೆಯಯ ಜೊತೆ ಸಂಬಂಧ ಸಾನ್ಯಾ ಉತ್ತಮವಾಗಿತ್ತು. ಯಾಕಂದ್ರೆ ತಾಯಿಯ ಸ್ನೇಹಿತರಾಗಿದ್ದ ಅವರು ಸಾನ್ಯಾ ತಾಯಿಯನ್ನು ಮದುವೆಯಾದ ನಂತರವೂ ಸಾನ್ಯಾ ಜೊತೆ ಉತ್ತಮ ರಿಲೇಷನ್ಶಿಪ್ ಇಟ್ಕೊಂಡಿದ್ರು. ನನಗೆ ಅವರು ತಂದೆಗಿಂತಲೂ ಹೆಚ್ಚಾಗಿದ್ರು ಅವರ ಕೈಯಲ್ಲಿ ಕೈತುತ್ತು ತಿಂದಿದ್ದೇನೆ ಅಂತ ಸಾನ್ಯಾ ಹೇಳುತ್ತಾರೆ.
ಅದಾದ ಬಳಿಕ ಸಾನ್ಯಾ ಅವರ ತಾಯಿ ದೀಪ ಅವರಿಗೆ ತನ್ನ ಎರಡನೆಯ ಮದುವೆ ತಪ್ಪು ನಿರ್ಧಾರ ಎಂಥ ಅನಿಸುವುದಕ್ಕೆ ಶುರುವಾಗುತ್ತದೆ. ಆದರೆ ಸಾನ್ಯಾ ಮಲತಂದೆ ತಾಯಿಯನ್ನ ಬಿಡೋದಕ್ಕೆ ರೆಡಿ ಇರೋದಿಲ್ಲ. ಹಾಗಾಗಿ ಹೇಗಾದರೂ ಮಾಡಿ ತನ್ನ ಹೆಂಡತಿಯ ಜೊತೆ ಇರಬೇಕು ಅನ್ನುವ ಕಾರಣಕ್ಕೆ ಚೀಪ್ ಟ್ರಿಕ್ಸ್ ಗಳನ್ನು ಮಾಡಿ ಸಾನ್ಯಾ ಮೇಲೆ ಅಪವಾದವನ್ನು ಕೂಡ ಹೊರಿಸುತ್ತಾರೆ.
ಸಾನ್ಯಾ ತನ್ನ ಬಾಯ್ ಫ್ರೆಂಡ್ ಜೊತೆ ಇರುವ ವಿಡಿಯೋವನ್ನು ರೆಕಾರ್ಡ್ ಮಾಡಿ ಚಿಕ್ಕಮ್ಮನಿಗೂ ಹಾಗೂ ಸಾನ್ಯಾ ತಾಯಿಗೂ ತೋರಿಸುತ್ತಾರೆ ದೀಪ ಒಬ್ಬಳಿಗೆ ಸಿಂಗಲ್ ಪೇರೆಂಟ್ ಆಗಿ ಮಗಳನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಸಾಬೀತು ಮಾಡೋದು ಅವರ ಉದ್ದೇಶವಾಗಿತ್ತು. ಬಹಳ ಪ್ರೀತಿಸಿದ ಮಲತಂದೆಯೇ ಅತ್ಯಂತ ಕೆಟ್ಟದಾಗಿ ವರ್ತಿಸಿ ಅವಮಾನ ಮಾಡಿದ್ದದರ ಬಗ್ಗೆ ಸಾನ್ಯಾಗೆ ಸಾಕಷ್ಟು ಬೇಸರವಿದೆ.
ಈವರಿಗೆ ಬೇರೆಯವರಿಂದ ಪ್ರೀತಿಯನ್ನು ನಿರೀಕ್ಷಿಸಿದ್ದೆ ಆದರೆ ಈಗ ನಾನು ಸ್ವಾವಲಂಬಿಯಾಗಿದ್ದೇನೆ ಅಂತ ಸಾನಿಯಾ ಅಯ್ಯರ್ ಕಣ್ಣೀರುಡುತ್ತಲೇ ತನ್ನ ಗಟ್ಟಿ ನಿರ್ಧಾರವನ್ನು ತಿಳಿಸಿದ್ದಾರೆ. ಇವರ ಕಥೆ ಕೇಳಿ ಬಿಗ್ ಬಾಸ್ ನ ಇತರ ಸ್ಪರ್ಧಿಗಳು ಕೂಡ ಕಣ್ಣೀರಿಟ್ಟರು.