ಕನ್ನಡ ಕಿರುತೆರೆ ಲೋಕದಲ್ಲಿ ಒಬ್ಬ ನಟಿಯಾಗಿ ಹೆಸರು ಮಾಡಿದ ಕೊಡಗಿನ ಕುವರಿ ಶ್ವೇತ ಚೆಂಗಪ್ಪ, ಇದೀಗ ಹೆಚ್ಚಾಗಿ ಗುರುತಿಸಿಕೊಳ್ಳುವುದು ಒಬ್ಬ ನಿರೂಪಕಿಯಾಗಿ. ಸಾಕಷ್ಟು ವರ್ಷಗಳ ಹಿಂದೆಯೇ ನಟನೆಯನ್ನು ವೃತ್ತಿಯಾಗಿ ಆಯ್ದುಕೊಂಡ ಶ್ವೇತಾ ಚಂಗಪ್ಪ ಕನ್ನಡಿಗರಿಗೆ ಚಿರಪರಿಚಿತ. ನೋಡುವುದಕ್ಕೆ ಬಹಳ ಮುದ್ದಾಗಿರುವ ಶ್ವೇತ ಚೆಂಗಪ್ಪ ಅವರು ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಕೊಡಗಿನ ಮೂಲದವರಾದ ಶ್ವೇತಾ ಚಂಗಪ್ಪ ಅವರ ನಟನಾ ಜರ್ನಿ ಬಗ್ಗೆ ನೋಡುವುದಾದರೆ ಇವರು 2003 ರಲ್ಲಿ ಸುಮತಿ ಎನ್ನುವ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದರು. ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ಎಸ್ ನಾರಾಯಣ್ ಶ್ವೇತ ಚಂಗಪ್ಪ ಅವರನ್ನು ಧಾರಾವಾಹಿ ಲೋಕಕ್ಕೆ ಪರಿಚಯಿಸುತ್ತಾರೆ. ಇದಾದ ಬಳಿಕ 2006ರಲ್ಲಿ ಕಾದಂಬರಿ ಎನ್ನುವ ಧಾರಾವಾಹಿಯಲ್ಲಿ ನಟಿ ಶ್ವೇತಾ ಚಂಗಪ್ಪ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾರೆ.
ಈ ಧಾರಾವಾಹಿ ಶ್ವೇತಾ ಚಂಗಪ್ಪ ಅವರಿಗೆ ದೊಡ್ಡ ಬ್ರೇಕ್ ತಂದು ಕೊಡುತ್ತೆ. ಇದಾದ ಮೇಲೆ ಸಾಕಷ್ಟು ಧಾರಾವಾಹಿಗಳಲ್ಲಿ ಅವರಿಗೆ ನಟಿಸುವ ಅವಕಾಶ ಒಳಿತು ಬರುತ್ತೆ. ವಿಷ್ಣುವರ್ಧನ್ ಅವರ ಜೊತೆಗೆ ವರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಅಣ್ಣ ತಂಗಿ ಮೊದಲಾದ ಹಿಟ್ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ ಅನುಭವ ಶ್ವೇತಾ ಚಂಗಪ್ಪ ಅವರದ್ದು.
ಇನ್ನು ಬಿಗ್ ಬಾಸ್ ಸೀಸನ್ 2ಕ್ಕೂ ಕೂಡ ಸ್ಪರ್ಧಿಯಾಗಿ ಹೋಗಿದ್ದ ಶ್ವೇತಾ ಚಂಗಪ್ಪ ಅಲ್ಲಿಂದ ಮುಂದೆ ಹೊಸ ರೀತಿಯ ಕೆರಿಯರ್ ಆರಂಭಿಸಿದರು. ಇಷ್ಟು ದಿನ ನಟಿಯಾಗಿ ಕಾಣಿಸಿಕೊಂಡಿದ್ದ ಶ್ವೇತಾ ಚಂಗಪ್ಪ ಮುಂದೆ ನಿರೂಪಣೆ ಮಾಡುವುದಕ್ಕೆ ಆರಂಭಿಸಿದರು. ಸುಕನ್ಯ ಅರುಂಧತಿ ಮೊದಲಾದ ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿ ಈ ಧಾರಾವಾಹಿಗಳು ಅವರಿಗೆ ದೊಡ್ಡ ಜನಪ್ರಿಯತೆಯನ್ನು ತಂದು ಕೊಟ್ಟಿದ್ದವು.
ಪ್ರಸ್ತುತ ಎರಡು ಟಿವಿ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶ್ವೇತಾ ಚಂಗಪ್ಪ. ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ನಿರೂಪಕಿಯಾಗಿ ಹಾಗೂ ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ ಆಂಕರ್ ಆಗಿಯೂ ಕೂಡ ಶ್ವೇತ ಚಂಗಪ್ಪ ಛಾಪು ಮೂಡಿಸಿದ್ದಾರೆ. ಇತ್ತೀಚಿಗೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈಸ್ಮಾರ್ಟ್ ಜೋಡಿ ಕಾರ್ಯಕ್ರಮದ ನಿರೂಪಕಿಯಾಗಿಯೂ ಕೂಡ ಶ್ವೇತಾ ಚಂಗಪ್ಪ ಕಾಣಿಸಿಕೊಂಡಿದ್ದರು.
ಇನ್ನು ಕರುನಾಡಿನಲ್ಲಿ ಶ್ವೇತಾ ಚಂಗಪ್ಪ ಇನ್ನು ಹೆಚ್ಚು ಗುರುತಿಸಿಕೊಂಡಿದ್ದು ಮಜಾ ಟಾಕೀಸ್ ಗ್ಯಾಂಗ್ ಸೇರಿದ ಮೇಲೆ. ಹೌದು ಸೃಜನ್ ಲೋಕೇಶ್ ಅವರ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಅವರ ಪತ್ನಿ ರಾಣಿಯಾಗಿ ಶ್ವೇತಾ ಚಂಗಪ್ಪ ಮಿಂಚಿದ್ದಾರೆ. ಅತ್ಯುತ್ತಮ ಮಾತುಗಾರ್ತಿಯು ಆಗಿರುವ ಶ್ವೇತ ಚಂಗಪ್ಪ ಹಾಸ್ಯ ನಟಿಯಾಗಿ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಜಾ ಟಾಕೀಸ್ ಬಗ್ಗೆ ಮಾತನಾಡಿದ ಶ್ವೇತಾ ಚಂಗಪ್ಪ ನನಗೆ ಮೊದಲು ಸೃಜನ್ ಲೋಕೇಶ್ ಕಂಡರೆ ಆಗುತ್ತಿರಲಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೌದು ಸೃಜನ್ ಲೋಕೇಶ್ ಅವರ ಹೆಂಡತಿ ಗ್ರೀಷ್ಮ ಹಾಗೂ ಶ್ವೇತಾ ಚಂಗಪ್ಪ ಉತ್ತಮ ಸ್ನೇಹಿತರು. ಮಜಾ ಟಾಕೀಸ್ ನಲ್ಲಿ ಅವಕಾಶ ಪಡೆದುಕೊಳ್ಳುವುದಕ್ಕೂ ಮೊದಲು ಶ್ವೇತಾ ಚಂಗಪ್ಪ ಅವರು ಸೃಜನ್ ಲೋಕೇಶ್ ಅವರಿಗೆ ಅಹಂಕಾರ ಎಂದು ಭಾವಿಸಿದ್ದರು. ಅದೇ ರೀತಿ ಸೃಜನ್ ಕೂಡ ಶ್ವೇತಾ ಚಂಗಪ್ಪ ಅವರಿಗೆ ದುರಹಂಕಾರ ಎಂದೇ ಭಾವಿಸಿದರಂತೆ.
ಯಾವಾಗ ಸೃಜನ್ ಲೋಕೇಶ್ ತನ್ನ ಸ್ನೇಹಿತೆ ಗ್ರೀಷ್ಮ ಅವರ ಪತಿ ಎಂದು ತಿಳಿದು ಆಗ ಸೃಜನ್ ಬಗ್ಗೆ ಸರಿಯಾಗಿ ತಿಳಿದುಕೊಂಡರಂತೆ ಶ್ವೇತಾ ಚಂಗಪ್ಪ. ಅದಾದ ಬಳಿಕ ಶ್ವೇತಾ ಚಂಗಪ್ಪ ಹಾಗೂ ಸೃಜನ್ ಲೋಕೇಶ್ ಮಜಾ ಟಾಕೀಸ್ ನಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಿ ಇದೀಗ ಅತ್ಯುತ್ತಮ ಸ್ನೇಹಿತರು. ಮುಂದಿನ ವರ್ಷ ಮತ್ತೆ ಮಜಾ ಟಾಕೀಸ್ ಆರಂಭವಾಗುವ ನೀರಿಕ್ಷೆ ಇದೆ. ಅದರಲ್ಲಿ ರಾಣಿ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತೇನೆ ಎಂದು ಶ್ವೇತಾ ಚಂಗಪ್ಪ ಹೇಳಿದ್ದಾರೆ.