ಅನೇಕ ಹೆಣ್ಮಕ್ಕಳು ತಾನೊಬ್ಬಳು ಸೆಲೆಬ್ರಿಟಿ ಆಗಬೇಕು ಜನರ ಮುಂದೆ ಗುರುತಿಸಿ ಕೊಳ್ಳುವಂತಾಗಬೇಕು ಅನ್ನುವ ಆಸೆ ಹೊಂದಿರುತ್ತಾರೆ. ಅದಕ್ಕಾಗಿ ತುಂಬಾ ಕಷ್ಟ ಪಡುತ್ತಾರೆ. ಇನ್ನು ಹೇಗೋ ಕಷ್ಟ ಪಟ್ಟು ಒಂದು ಹಂತಕ್ಕೆ ಬಂದ ಮೇಲೆ ಇನ್ನೊಂದು ರೀತಿಯ ಸಮಸ್ಯೆ ಎದುರಿಸುತ್ತಾರೆ. ಒಬ್ಬ ಹೆಣ್ಣು ತನ್ನ ಸ್ವಂತ ಪರಿಶ್ರಮದಿಂದ ಯಶಸ್ಸು ಗಳಿಸಿದರೂ ಆಕೆಗೆ ಬೇರೆಯೇ ಹೆಸರು ಕೊಡುತ್ತಾರೆ. ಅದು ಬಣ್ಣದ ಲೋಕದಲ್ಲಿ ಹೆಚ್ಚಾಗಿಯೇ ಇದೆ.ಆಕೆ ಎಲ್ಲರೊಂದಿಗೆ ಹೋಗುತ್ತಾಳೆ, ಆಕೆಗೆ ಯಾರು ಬೇಕಾದರೂ ಆಗುತ್ತದೆ, ಅದರಿಂದ ಆಕೆ ಈ ಮಟ್ಟಕ್ಕೆ ಬೆಳೆದಿದ್ದಾಳೆ ಅನ್ನುವ ಹೆಸರು ಬರುತ್ತದೆ.
ಇದು ಯಾವುದೇ ಹೆಣ್ಣಿಗೆ ಸಹಿಸಲಾರದ ನೋವು ಕೊಡುತ್ತದೆ. ಇದೀಗ ಇಂತಹ ನೋವನ್ನು ಅನುಭವಿಸಿ ಅದನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ ನಟಿ ದಿವ್ಯಾ. ಹೌದು, ನಿಮಗೆಲ್ಲಾ ಕಾಮೆಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಗೊತ್ತಿರಲೇ ಬೇಕು.ದಿವ್ಯಾ ಎಂ ಕಾಂ ಪದವೀಧರೆ. ಅವರಿಗೆ ಮೊದಲಿನಿಂದಲೂ ತಾನೊಬ್ಬ ನಟಿಯಾಗಬೇಕು ಅನ್ನುವ ಆಸೆ ಇತ್ತು. ಅದರಂತೆ ತನ್ನ ತಂದೆ ಬಳಿ ತಾನು ಏನಾದರೂ ಸಾಧನೆ ಮಾಡಿ ತೋರಿಸುತ್ತೇನೆ ಎಂದಿದ್ದರು.
ಅದರಂತೆ ಅವರು ಕಾಮೆಡಿ ಕಿಲಾಡಿಗಳು ಸೀಸನ್ 1 ರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅವರ ನಟನೆ ನೋಡಿ ಅನೇಕ ಮಂದಿ ಅವರಿಗೆ ಅಭಿಮಾನಿಗಳಾಗಿದ್ದಾರೆ. ತನ್ನದೇ ಆದ ಹಾಸ್ಯ, ಮೈ ಚಳಿ ಬಿಟ್ಟು ಮಾಡುವ ನಟನೆ,ಎಲ್ಲವೂ ಜನರಿಗೆ ಇಷ್ಟವಾಗಿತ್ತು.ಇವರ ಹಾಸ್ಯ ನಟನೆಗೆ ಆ ಶೋ ಜಡ್ಜ್ ಆಗಿದ್ದ ಕ್ರೇಜಿ ಕ್ವೀನ್ ರಕ್ಷಿತಾ, ನವರಸ ನಾಯಕ ಜಗ್ಗೇಶ್, ಸಂಗೀತ ನಿರ್ದೇಶಕ ಯೋಗರಾಜ್ ಭಟ್ ಅವರ ಮೆಚ್ಚುಗೆಗೆ ಪಾತ್ರ ರಾಗಿದ್ದರು.
ಈ ಶೋ ನಿಂದಾಗಿ ಜನಪ್ರಿಯತೆ ಪಡೆದ ದಿವ್ಯ ಅವರು ಕೆ ಜಿ ಎಫ್ ಸಿನಿಮಾಗಳಲ್ಲಿ ನಟಿಸುವಂತಹ ಅವಕಾಶ ಪಡೆದುಕೊಂಡವರು. ದಿವ್ಯಾ ಅವರು ಅದೇ ಸೀಸನ್ ನಲ್ಲಿ ಇದ್ದ ಗೋವಿಂದೇ ಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. 2019ರ ಮಾರ್ಚ್ 14ರಂದು ಶೃಂಗೇರಿಯಲ್ಲಿ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಅವರಿಗೆ ಪುಟ್ಟ ಕಂದಮ್ಮ ಹುಟ್ಟಿದ್ದಾಳೆ.
ಆ ಖುಷಿಯಲ್ಲಿ ಇರುವಾಗಲೇ ಅವರು ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಜೋಡಿ ನಂ ವನ್ ಶೋ ನಲ್ಲಿ ಭಾಗವಹಿಸುವ ಅನೇಕ ದಂಪತಿಗಳು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಗಂಡ ಹೆಂಡತಿಯರ ನಡುವಿನ ವೈ ಮನಸ್ಸು ಕೂಡ ಬಯಲಾಗಿ ಮತ್ತೆ ಅವರು ಎಲ್ಲವನ್ನೂ ಮರೆತು ಚೆನ್ನಾಗಿ ಜೀವನ ನಡೆಸುವಂತಾಗುತ್ತಾದೆ. ಈ ಶೋ ನಲ್ಲಿ ಭಾಗವಹಿಸಿದ ದಿವ್ಯಾ ತನ್ನ ನೋವನ್ನು ಹೇಳಿಕೊಂಡಿದ್ದಾರೆ.
ದಿವ್ಯ ಳಿಗೆ ಅವನ ಜೊತೆ ಸಂಬಂಧವಿದೆ. ದಿವ್ಯ ಕರೆದ ಕಡೆಯಿಂದ ಬರ್ತಾಳೆ, ದಿವ್ಯ ಜೊತೆ ನಾನು ಓಡಾಡಿದ್ದೇನೆ. ದಿವ್ಯನ್ದು ನನಗೆಲ್ಲಾ ಗೊತ್ತು ಹೀಗೆ ಸಮಾಜದಲ್ಲಿರುವಂತಹ ಜನರು ಚುಚ್ಚಿ ಚುಚ್ಚಿ ಮಾತನಾಡಲು ಆರಂಭಿಸಿದರು ಎಂದು ನಟಿ ದಿವ್ಯ ಜೋಡಿ ನಂ 1 ಶೋ ನಲ್ಲಿ ಭಾವುಕರಾಗಿ ಮಾತನಾಡಿದ್ದರು.ಕಷ್ಟ ಪಟ್ಟು ಒಂದು ಹಂತಕ್ಕೆ ಬಂದರೂ ಜನರು ಚುಚ್ಚಿ ಮಾತನಾಡುವುದನ್ನು ಬಿಡುವುದಿಲ್ಲ ಅನ್ನುವುದು ಅವರ ನೋವು. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.