ಸಾಮಾನ್ಯವಾಗಿ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಎಷ್ಟು ಮಹತ್ವವನ್ನು ಪಡೆದುಕೊಂಡಿದೆಯೋ, ಅದೇ ರೀತಿ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ಬಗ್ಗೆ ಜನರಿಗೆ ಅಷ್ಟೇ ಆಸಕ್ತಿ ಇದೆ. ಜನರ ಆಸಕ್ತಿಗೆ ತಕ್ಕಂತೆ ಈ ಎಲ್ಲಾ ವಾಹಿನಿಗಳು ತರಾವರಿ ರಿಯಾಲಿಟಿ ಶೋ ಗಳನ್ನು ಪ್ರಸಾರ ಮಾಡುತ್ತವೆ. ಅದರಲ್ಲೂ ಕಲರ್ಸ್ ಕನ್ನಡ ರಿಯಾಲಿಟಿ ಶೋಗಳಿಗೆ ಹೆಸರುವಾಸಿ. ಕನ್ನಡದ ಅತಿ ದೊಡ್ಡ ಶೋ ಬಿಗ್ ಬಾಸ್ ನಿಂದ ಹಿಡಿದು ಡಾನ್ಸ್ ಶೋಗಳು, ಸಿಂಗಿಂಗ್ ಶೋಗಳು.
ಕಾಮಿಡಿ ಶೋಗಳು, ನಮ್ಮಮ್ಮ ಸೂಪರ್ ಸ್ಟಾರ್, ರಾಜ ರಾಣಿ ಮೊದಲಾದ ಶೋ ಗಳನ್ನ ಮಾಡಿ ಜನರನ್ನ ರಂಜಿಸಿದ ಕಲರ್ಸ್ ಕನ್ನಡ ಈಗ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಶೋ ಅನ್ನು ಕೂಡ ಮಾಡುತ್ತಿದೆ. ಇದರಲ್ಲಿ ಹಿರಿಯ ಕಾಮಿಡಿ ಕಲಾವಿದರಿಂದ ಹಿಡಿದು ಈಗ ತಾನೇ ಸ್ಟೇಜ್ ಹತ್ತಿರ ಕಲಾವಿದರವರಿಗೆ ಎಲ್ಲರೂ ತಮ್ಮ ಅತ್ಯದ್ಭುತ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿಯಲ್ಲಿ ಜನರನ್ನ ಹೆಚ್ಚು ರಂಜಿಸುತ್ತಿದ್ದಾರೆ.
ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸೃಜನ್ ಲೋಕೇಶ್ ಹಾಗೂ ನಟಿ ಶ್ರುತಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದು ನಾವು ಗೆಜ್ಜೆ ಗಿಲಿ ಗಿಲಿ ಶೋನಲ್ಲಿ ಕೇವಲ ತೀರ್ಪುಗಾರರಾಗಿ ಅಲ್ಲ, ನಿಮಗೆ ಸಪೋರ್ಟ್ ಮಾಡೋದಕ್ಕೆ ಬಂದಿದ್ದೇವೆ ಅಂತ ಶೋನ ಆರಂಭದಲ್ಲಿ ಹೇಳಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದ್ದರು. ಈಗಾಗಲೇ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಶೋಗಳು ಹಲವಾರು ಕಲಾವಿದರಿಗೆ ಜೀವನವನ್ನು ಕಲ್ಪಿಸಿ ಕೊಟ್ಟಿದೆ ಅಂದರೆ ಇಲ್ಲಿ ವೇದಿಕೆಯಲ್ಲಿ ಮಿಂಚಿದ್ದ ಕಲಾವಿದರು ಬೇರೆ ಬೇರೆ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನಿಗೆ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈಗಿನ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಹಲವು ಹೊಸ ಮುಖಗಳನ್ನು ನೋಡಬಹುದು. ಅಂಥವರಲ್ಲಿ ದಿವ್ಯ ವಸಂತ ಕೂಡ ಒಬ್ಬರು.
ದಿವ್ಯ ವಸಂತ ಇಂದು ಕಾಮಿಡಿಗಳ ಮೂಲಕ ಜನರನ್ನ ರಂಜಿಸುತ್ತಿದ್ದಾರೆ. ಆದರೆ ಇವರ ವೃತ್ತಿ ಆಂಕರಿಂಗ್ ಮಾಡುವುದಾಗಿತ್ತು. ಬಿ ಟಿವಿಯಲ್ಲಿ ನ್ಯೂಸ್ ರೀಡರ್ ಆಗಿದ್ದ ದಿವ್ಯ ವಸಂತ, ಗಿಚ್ಚಿ ಗಿಲಿ ಗಿಲಿ ಶೋನ ಒಬ್ಬ ಸ್ಪರ್ಧಿ. ಒಬ್ಬ ಟಿವಿ ಆಂಕರ್ ಆಗಿರುವವರು ಈ ಶೋಗೆ ಬರಲು ಏನು ಕಾರಣ ಎಂದು ಕೇಳಿದರೆ, ನಾನು ಯಾವಾಗಲೂ ನ್ಯೂಸ್ ರೀಡರ್ ಆಗಿಯೇ ಉಳಿದುಬಿಡುತ್ತೇನೆ ಎಂದುಕೊಂಡಿದ್ದೆ ಆದರೆ ಕಲರ್ಸ್ ಕನ್ನಡ ನನಗೆ ಅಭಿನಯಿಸಲು ಕರೆ ಮಾಡಿದರು.
ನನಗೆ ಆಕ್ಟಿಂಗ್ ಬರಲ್ಲ ಆದರೆ ಆಕ್ಟಿಂಗ್ ಅನ್ನು ಕಲಿಸುತ್ತೇನೆ ಅಂತ ಬಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದರು. ಹಾಗಾಗಿ ಈ ವಿಷಯಕ್ಕೆ ನನಗೆ ತುಂಬಾ ಸಂತೋಷವಿದೆ ಎಂದು ದಿವ್ಯ ವಸಂತ ಹೇಳಿಕೊಂಡಿದ್ದರು. ಅಲ್ಲದೆ ದಿವ್ಯ ವಸಂತ ಅವರು ಹೆಚ್ಚು ಟ್ರೋಲ್ ಗಳಿಗೆ ಆಹಾರವಾಗುತ್ತಾರೆ. ಅವರು ನ್ಯೂಸ್ ರೀಡಿಂಗ್ ಮಾಡುವಾಗ ಮಾಡುವ ಕೆಲವು ತಪ್ಪುಗಳನ್ನು ಜನರು ಟ್ರೋಲ್ ಮಾಡುತ್ತಾರೆ.
View this post on Instagram
ಹಾಗಾಗಿ ಟ್ರೋಲ್ ಪೇಜ್ ಗಳ ಬಗ್ಗೆಯೂ ಮಾತನಾಡಿರುವ ದಿವ್ಯ ವಸಂತ, ಟ್ರೋಲ್ ಮಾಡುವವರಿಗೆ ನಾನು ನಿಜಕ್ಕೂ ಥ್ಯಾಂಕ್ಸ್ ಹೇಳುತ್ತೇನೆ ಯಾಕೆಂದರೆ ಅವರಿಂದಾಗಿ ನಾನು ಇಂದು ಇಲ್ಲಿ ಕುಳಿತಿದ್ದೇನೆ ಅಂತ ಟ್ರೋಲ್ ಗಳನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಳ್ಳುವ ವ್ಯಕ್ತಿತ್ವ ದಿವ್ಯ ವಸಂತ ಅವರದ್ದು. ದಿವ್ಯ ವಸಂತ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಬರುತ್ತಿರುವುದು ಅವರ ಅಮ್ಮನಿಗೆ ತುಂಬಾ ಖುಷಿಯಾಗಿದೆ ಅಂತೆ.
ಇನ್ನು ದಿವ್ಯ ವಸಂತ ಅವರ ಹೆಸರಿನಲ್ಲಿ ಈಗಾಗಲೇ ಫ್ಯಾನ್ ಪೇಜ್ ಗಳು ಕೂಡ ಆರಂಭವಾಗಿವೆ. ದಿವ್ಯ ವಸಂತ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಆಕ್ಟಿವ್ ಆಗಿರುತ್ತಾರೆ. ಅವರು ಗಿಚ್ಚಿ ಗಿಲಿ ಗಿಲಿ ಟೀಮ್ ಜೊತೆ ಸಾಕಷ್ಟು ರೀಲ್ ಗಳನ್ನು ಮಾಡಿ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
ಇದೀಗ ಬಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮತ್ತೋರ್ವ ಸ್ಪರ್ಧಿಯ ಜೊತೆ ತಾವು ಮಾಡಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ತಾವಿಬ್ಬರು ನೃತ್ಯ ಮಾಡುವಾಗ ಚಿಲ್ಲರ್ ಮಂಜ ಅಡ್ಡ ಬಂದಿದ್ದು ಅದಕ್ಕೆ ಕಬಾಬ್ ಮೇ ಹಟ್ಟಿ ಅಂತ ಟ್ಯಾಗ್ ಲೈನ್ ಬರೆದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ ಗಳು ಬಂದಿದ್ದು, ಜನರನ್ನ ರಂಜಿಸಿದೆ.