ಕಾಂತರಾ ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಅದರ ಹವಾ ಮಾತ್ರ ಕಡಿಮೆಯಾಗಿಲ್ಲ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಕೂಡ ಈಗಲೂ ಕಾಂತರಾ ಸಿನಿಮಾ ಓಡುತಿದೆ. ಸಿಕ್ಕಾಪಟ್ಟೆ ಗಳಿಕೆ ಮಾಡುತ್ತಿದೆ. ಇತ್ತೀಚಿಗೆ ತೆಲುಗು ಚಿತ್ರರಂಗ ಕೂಡ ಕಾಂತಾರ ಸಿನಿಮಾದ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದು 45 ದಿನಗಳಲ್ಲಿ 35 ಕೋಟಿಗೂ ಅಧಿಕ ಹಣ ಗಳಿಕೆ ಆಗಿದೆ ಎಂದು ತಿಳಿಸಿದೆ.
ಕಾಂತರಾ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ನೇಮ್ ಫೇಮ್ ಎರಡನ್ನೂ ತಂದುಕೊಟ್ಟಿದೆ. ರಿಶಬ್ ಶೆಟ್ಟಿ ಈ ಹಿಂದೆ ಎಷ್ಟೇ ಸಿನಿಮಾ ಮಾಡಿದ್ರು ಕೂಡ ಕಾಂತರಾ ಅವರ ಹೆಸರನ್ನ ಒಂದು ಮಟ್ಟಕ್ಕೆ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಿಶಬ್ ಶೆಟ್ಟಿ ಅವರು ಕಾಂತಾರಾ ಸಿನಿಮಾವನ್ನು ಒಂದು ಐತಿಹಾಸಿಕ ಸಿನಿಮಾ ವಾಗಿಸಿದ್ದಾರೆ.
ಹೌದು ಕನ್ನಡದಲ್ಲಿ ರಿಲೀಸ್ ಆದ ಮೇಲೆ ಕಾಂತರಾ ಸಿನಿಮಾವನ್ನ ಇತರ ಭಾಷೆಯಲ್ಲಿಯೂ ಕೂಡ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಬೇರೆ ಭಾಷೆಯ ಎಲ್ಲಾ ಸೆಲೆಬ್ರಿಟಿಗಳು ಕೂಡ ಕಾಂತಾರ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರಾಣಾ ದಗ್ಗುಬಾಟಿ, ಕಾರ್ತಿ, ಸೂರ್ಯ, ಬಾಲಿವುಟ್ ನಟಿ ಶಿಲ್ಪ ಶೆಟ್ಟಿ ಕಂಗನಾ ರಣಾವತ್, ಅನುಷ್ಕಾ ಶೆಟ್ಟಿ ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂತರಾ ಸಿನಿಮಾ ಗಳಿಕೆ ವಿಷಯ ನೋಡುವುದಾದರೆ ನೂರು ಕೋಟಿ ಕ್ಲಬ್ ಹೌಸ್ ಸೇರಿದ್ದು ಹಳೆಯ ದಾಖಲೆ. ಅದನ್ನು ಮೀರಿ ಸಾಕಷ್ಟ ಹಣ ಗಳಿಕೆ ಮಾಡಿದ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತರಾ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದಂತೂ ಸತ್ಯ.
ಇನ್ನು ಕಾಂತರಾ ಸಿನಿಮಾದ ಸಾಕಷ್ಟು ಮೇಕಿಂಗ್ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾಂತರಾ ಸಿನಿಮಾ ಗೆಲ್ಲುತ್ತಿದ್ದಂತೆ ಅವರ ಪತ್ನಿ ಪ್ರಗತಿ ಶಕ್ತಿ ಕೂಡ ಈ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಂದರ್ಶನಗಳಲ್ಲಿ ತಿಳಿಸಿದರು. ಇನ್ನು ರಿಶಬ್ ಶೆಟ್ಟಿ ಅವರು ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿದ್ದು ಕೆಲವು ಸೀನ್ ಗಳ ಬಗ್ಗೆ ವಿವರಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಬರುವ ರೊಮ್ಯಾಂಟಿಕ್ ಸೀನ್ ಗಳು ಕೂಡ ಜನರಿಗೆ ಬಹಳ ಇಷ್ಟವಾಗಿವೆ. ಇಂಥ ಸೀನ್ ಚಿತ್ರೀಕರಣ ಮಾಡಬೇಕಿದ್ದರೆ ರಿಶಬ್ ಶೆಟ್ಟಿಯವರಿಗೆ ನಾಚಿಕೆಯಾಗುತ್ತಿತ್ತಂತೆ. ಈ ಬಗ್ಗೆ ಮಾತನಾಡಿದ ರಿಶಬ್, ಸಿನಿಮಾದಲ್ಲಿ ಆ ತರ ಆಕ್ಟ್ ಮಾಡೋದು ಸಹಜ. ಆದ್ರೆ ಆ ಚಿತ್ರೀಕರಣ ಆಗುವಾಗ ಸೆಟ್ ನಲ್ಲಿದ್ದ ನನ್ನ ಪತ್ನಿ ಪ್ರಗತಿ ಹಾಗೂ ಸ್ನೇಹಿತರಾದ ರಾಜ್. ಬಿ, ಶೆಟ್ಟಿ ಮೊದಲಾದವರು ಕಾಲೆಳೆಯುತ್ತಿದ್ದರು. ಹಾಗಾಗಿ ಮುಜುಗರವಾಗುತ್ತಿತ್ತು ಅಷ್ಟೇ ಎಂದು ರಿಶಬ್ ಹೇಳಿದ್ದಾರೆ. ಇನ್ನು ರಿಶಬ್ ಅವರ ಜೊತೆಗೆ ಮಂಗಳೂರಿನ ಭಾಷೆಯನ್ನು ಕಲಿತು ಬೆಂಗಳೂರಿನ ಹುಡುಗಿ ಸಪ್ತಮಿ ಗೌಡ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.