ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸತನವನ್ನು ಸಿನಿಮಾದಲ್ಲಿ ತಂದ ಏಕೈಕ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್. ಇನ್ನು ಅದೆಷ್ಟೇ ಬಗೆಯ ಸಿನಿಮಾಗಳೇ ಬರಲಿ, ರವಿಚಂದ್ರನ್ ಅವರಂತೆ ಸಿನಿಮಾ ಮಾಡುವುದಕ್ಕೆ ಮತ್ತೆ ಯಾರಿಗೂ ಸಾಧ್ಯವೇ ಇಲ್ಲ. ಅವರು ಸಿನಿಮಾ ನೋಡುವ ರೀತಿ ಬೇರೆ, ಅವರ ಕಲ್ಪನೆಗಳೆ ವಿಭಿನ್ನ. ಅದೆಲ್ಲವನ್ನು ನೀವು ಈಗಾಗಲೇ ಅವರ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೀರಿ.
ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ರವಿಚಂದ್ರನ್ ಸೋತಿರಬಹುದು ಆದರೆ ಅವರ ಸಕ್ಸಸ್ ನ ಸಿನಿಮಾಗಳು ಮಾತ್ರ ಜಗತ್ತಿಗೆ ಮಾದರಿ. ಹೌದು, ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆ. ಅವರಲ್ಲಿ ಒಬ್ಬ ನಾಯಕನಟ ಮಾತ್ರವಲ್ಲ ಒಬ್ಬ ಅತ್ಯುತ್ತಮ ನಿರ್ದೇಶನ ಅತ್ಯುತ್ತಮ ಸಂಗೀತ ಸಂಯೋಜಕನಿದ್ದಾನೆ, ಹೊಸತನ್ನು ಒಪ್ಪಿಕೊಳ್ಳುವ ಸಂಕಲನಕಾರನಿದ್ದಾನೆ. ರವಿಮಾಮ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚು ಆಕರ್ಷಣೀಯವಾಗಿ ಇರುತ್ತಿದ್ದದ್ದೇ ಹಾಡುಗಳು.
ರವಿಚಂದ್ರನ್ ಅವರ ಹಾಡುಗಳನ್ನು ನೋಡಿದರೆ ಒಂದೊಂದು ಫ್ರೇಮ್ ನಲ್ಲಿಯೂ ಹೊಸತನವನ್ನು ವಿಶೇಷತೆಯನ್ನು ಕಾಣಬಹುದು. ಇನ್ನು ಪರಭಾಷೆ ನಟಿಯರನ್ನ ಕನ್ನಡಕ್ಕೆ ಪರಿಚಯ ಮಾಡಿಸಿದವರಲ್ಲಿ ರವಿಚಂದ್ರನ್ ಅವರೇ ಮುಂಚೂಣಿಯಲಿದ್ದಾರೆ. ತಮಿಳು, ತೆಲುಗು, ಮಲಯಾಳಂ ಇಂಡಸ್ಟ್ರಿ ಮಾತ್ರವಲ್ಲದೇ ಬಾಲಿವುಡ್ ಹೀರೋಯಿನ್ ಗಳನ್ನು ಸ್ಯಾಂಡಲ್ ವುಡ್ ಗೆ ಕರೆ ತಂದ ಖ್ಯಾತಿ ರವಿಚಂದ್ರನ್ ಅವರದ್ದು.
ರವಿಚಂದ್ರನ್ ಅವರು ಇದುವರೆಗೆ ಸಾಕಷ್ಟು ಹೀರೋಯಿನ್ ಗಳ ಜೊತೆ ಅಭಿನಯಿಸಿದ್ದಾರೆ, ಪರಭಾಷೆ ನಟಿಯರನ್ನ ಇತರ ನಿರ್ದೇಶಕರು, ನಿರ್ಮಾಪಕರು ಗುರುತಿಸುವಂತೆ ಮಾಡಿದ್ದಾರೆ. ಆದರೆ ಈ ಒಬ್ಬ ನಟಿ ಅಂದ್ರೆ ರವಿಚಂದ್ರನ್ ಅವರಿಗೆ ಬಹಳ ಇಷ್ಟವಂತೆ ಆ ನಟಿ ಯಾರು ಗೊತ್ತಾ? ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗಲೂ ಇಷ್ಟ ಪಡುವ ಪ್ರೀತಿ ಅಭಿಮಾನ ಇಟ್ಟುಕೊಂಡಿರುವ ಆ ನಟಿ ಬೇರೆ ಯಾರು ಅಲ್ಲ. ನಟಿ ಪ್ರಿಯಾಂಕ ಉಪೇಂದ್ರ. ಪ್ರಿಯಾಂಕ ಉಪೇಂದ್ರ ಕನ್ನಡದವರೇ ಅಲ್ಲ.
ಆದರೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಮದುವೆಯಾಗಿ ಕನ್ನಡಿಗರೇ ಆಗಿ ಹೋಗಿದ್ದಾರೆ. ನಟಿ ಪ್ರಿಯಾಂಕ ಅವರು ಉಪೇಂದ್ರ ಅವರ ಜೊತೆ ಹೆಚ್ ಟು ಒ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ರು. ಇದಾದ ಬಳಿಕ ರವಿಚಂದ್ರನ್ ಅವರ ಜೊತೆಗೆ ಮಲ್ಲ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಪ್ರಿಯಾಂಕ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು ಮಾತ್ರವಲ್ಲದೆ ರವಿಚಂದ್ರನ್ ಅವರು ಕೂಡ ಈ ಸಿನಿಮಾದ ಮೂಲಕ ಮತ್ತೆ ಯಶಸ್ಸನ್ನ ಕಾಣುವಂತಾಯಿತು.
ರವಿಚಂದ್ರನ್ ಅವರ ಜೊತೆಗಿನ ಕೆಲಸ ಮಾಡಿದ ಅನುಭವವನ್ನು ಪ್ರಿಯಾಂಕ ಉಪೇಂದ್ರ ಕೂಡ ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ. ಕಲಾವಿದೆರನ್ನು ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿ ನಿರ್ದೇಶನ ಮಾಡುವ ಏಕೈಕ ನಟ ರವಿಚಂದ್ರನ್, ಅವರು ಅವರಂತೆ ಯಾರೂ ಕೂಡ ನಿರ್ದೇಶನ ಮಾಡಲು ಸಾಧ್ಯವಿಲ್ಲ ಅಂತ ಪ್ರಿಯಾಂಕ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದೇ ರೀತಿ ರವಿಚಂದ್ರನ್ ಅವರಿಗೂ ಕೂಡ ಪ್ರಿಯಾಂಕಾ ಅವರು ಮಲ್ಲ ಸಿನಿಮಾದಲ್ಲಿ ಅಭಿನಯಿಸಿ ಸಕ್ಸಸ್ ತಂದು ಕೊಟ್ಟಿದ್ದರು.
ಪರಭಾಷಾ ಹುಡುಗಿ ಕನ್ನಡ ಬರುವುದಿಲ್ಲ ಹೇಗೆ ಅಭಿನಯಿಸುತ್ತಾರೋ ಎನ್ನುವ ಸಣ್ಣ ಆತಂಕ ರವಿಚಂದ್ರನ್ ಅವರಲ್ಲಿ ಇತ್ತು. ಆದರೆ ಅವೆಲ್ಲವನ್ನು ಮೀರಿ ಅದ್ಭುತ ಅಭಿನಯ ಮಾಡಿ ತೋರಿಸಿದರು ಪ್ರಿಯಾಂಕ. ಹಾಗಾಗಿ ಮಲ್ಲ ಸಿನಿಮಾ ಗೆಲ್ಲಲು ಪ್ರಿಯಾಂಕ ಉಪೇಂದ್ರ ಕೂಡ ಕಾರಣ. ರವಿಚಂದ್ರನ್ ಅವರು ಈಗಲೂ ಪ್ರಿಯಾಂಕ ಉಪೇಂದ್ರ ಅವರನ್ನು ಬಗ್ಗೆ ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ನಿಮಗೂ ಇಷ್ಟವಾದ ನಟಿ ಆಗಿದ್ರೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.