ಕನ್ನಡದ ನಟ ಚಂದನ್ ಅವರಿಗೆ, ತೆಲುಗು ಸೀರಿಯಲ್ ತಂತ್ರಜ್ಞರು ಹೊಡೆದಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಸೂಕ್ತ ಕಾರಣಗಳನ್ನ ಚಂದನ್ ಅವರು ಮಾಧ್ಯಮಕ್ಕೆ ಈಗಾಗಲೇ ನೀಡಿದ್ದಾರೆ. ನಟ ಚಂದನ್ ಅವರು ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅಭಿನಯಿಸಿದ ಉದಯೋನ್ಮುಖ ನಟ. ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಹೆಚ್ಚು ಫೇಮಸ್ ಆಗಿದ್ದ ನಟ ಚಂದನ್ ಅದಾದ ಬಳಿಕ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇದೀಗ ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ ಚಂದನ್. ಹೀಗೆ ತೆಲಗು ಧಾರಾವಾಹಿಯೊಂದಕ್ಕೆ ಅಭಿನಯಿಸಲು ಹೈದ್ರಾಬಾದ್ ಗೆ ಚಂದನ್ ಹೋಗಿದ್ದ ವೇಳೆ ಅಚಾತುರ್ಯವೊಂದು ನಡೆದಿದೆ! ಈ ಸಂದರ್ಭದಲ್ಲಿ ತೆಲಗುವಿನ ಧಾರಾವಾಹಿಯಲ್ಲಿ ಅಭಿನಯಿಸುವ ಪ್ರಮುಖ ಕಲಾವಿದರೂ ಸ್ಥಳದಲ್ಲಿದ್ದರು!
ನಿನ್ನೆ ಚಂದನ್ ಅವರು ಹೈದರಾಬಾದ್ ನಲ್ಲಿ ಸೀರಿಯಲ್ ಶೂಟಿಂಗ್ ಒಂದರಲ್ಲಿ ತೊಡಗಿದ್ದಾಗ ಚಂದನ್ ಹಾಗೂ ತಂತ್ರಜ್ಞಾನ ನಡುವೆ ಮಾತಿನ ಚಕಮಕಿ ನಡೆದಿದೆ. ಎಲ್ಲರೂ ಮಾತನಾಡುತ್ತಿರುವಾಗ ಅಲ್ಲಿ ಇದ್ದ ಒಬ್ಬ ವ್ಯಕ್ತಿ ಚಂದನ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ಈ ವಿಷಯದ ಬಗ್ಗೆ ಮಾಧ್ಯಮದ ಬಳಿ ಮಾತನಾಡಿರುವ ಚಂದನ್, ಈ ಘಟನೆ ನಡೆದುದರ ಬಗ್ಗೆ ವಿವರಣೆ ನೀಡಿದ್ದಾರೆ.
‘ಸಿರಿಯಲ್ ಸೆಟ್ ನಲ್ಲಿ ಎಲ್ಲವೂ ಚೆನ್ನಾಗಿತ್ತು. ಎಲ್ಲರೂ ನನ್ನೊಂದಿಗೆ ಉತ್ತಮ ಬಾಂಡಿಂಗ್ ಹೊಂದಿದ್ದಾರೆ. ಕಳೆದ 26 ನೇ ತಾರೀಕು ನನ್ನ ತಾಯಿ ಹೃದಯ ಸಂಬಂಧಿ ಸಮಸ್ಯೆಯಿಂದ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿದ್ದಾರೆ. ಅವರು ಬೇಗ ಹುಷಾರಾಗಬೇಕು ಎನ್ನುವುದು ನನ್ನ ತಲೆಯಲ್ಲಿತ್ತು. ಹಾಗಾಗಿ ರಾತ್ರಿ ನಿದ್ದೆಯೂ ಸರಿಯಾಗಿ ಇಲ್ಲದೆ ನಾನು ಸ್ವಲ್ಪ ಟೆನ್ಶನ್ ನಲ್ಲಿಯೇ ಇದ್ದೆ.
ಇನ್ನು ಸೀರಿಯಲ್ ಸೆಟ್ ನಲ್ಲಿ ಶೂಟಿಂಗ್ ಸ್ವಲ್ಪ ತಡವಾದ ಕಾರಣ ನಾನು ನಿದ್ದೆ ಮಾಡಿದೆ. ಸ್ವಲ್ಪ ಜಾಸ್ತಿಯೇ ನಿದ್ದೆ ಮಾಡಿದ್ದೆ. ಯಾಕಂದ್ರೆ ಶೂಟಿಂಗ್ ಆರಂಭವಾಗಿರಲಿಲ್ಲ’ ಎಂದಿದ್ದಾರೆ. ಮಾತು ಮುಂದುವರೆಸಿದ ಚಂದನ್. ’ನಾನು ಮಲಗಿದ್ದಾಗ ಅಸಿಸ್ಟೆಂಟ್ ಡೈರೆಕ್ಟರ್ ರಂಜನ್ ಎನ್ನುವವನು, ಜೋರಾಗಿ ಏಕವಚನದಲ್ಲಿ ನನ್ನ ಹೆಸರನ್ನ ಕರೆದು ಶೂಟಿಂಗ್ ಬರುವಂತೆ ಹೇಳು ಎಂದು ಹೇಳಿದ್ದಾನೆ.
ಆಗ ನಾನು ಸ್ವಲ್ಪ ಸಲುಗೆಯಿಂದಲೇ ಬರ್ತೇನೆ ಹೋಗು ಎಂದು ಆತನನ್ನು ತಳ್ಳಿದ್ದೆ. ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ನಿರ್ದೇಶಕರ ಬಳಿ ಹೋಗಿ ಹೇಳಿದ್ದಾನೆ. ಹೀಗಾಗಿ ಈ ವಿಷಯ ಬಹಳ ದೊಡ್ಡದಾಯಿತು. ಇತರ ಅಸೋಸಿಯೇಷನ್ ನವರು ಕೂಡ ಬಂದು ವಿಚಾರಣೆ ಮಾಡ್ತಾ ಇದ್ರು. ಆ ಸಮಯದಲ್ಲಿ ಆತ ನನಗೆ ಹೊಡೆದಿದ್ದಾನೆ. ಇನ್ನು ನಾನು ಆವಾಚ್ಯ ಶಬ್ದದಿಂದ ಮಾತನಾಡಿದ್ದೇನೆ ಎನ್ನುವುದು ಸುಳ್ಳು.
ಕ್ಷಮೆ ಕೇಳು ಅಂದ್ರು ಕ್ಷಮೆಯನ್ನೂ ಕೇಳಿದ್ದೇನೆ. ಎಲ್ಲರೂ ಸೇರಿ ಒಂದು ನಿರ್ಣಯಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ ಈಗ ವಿಷಯ ಎಲ್ಲಿವರೆಗೆ ಹೋಗಿ ಮುಟ್ಟಿದೆ ನನಗೆ ಗೊತ್ತಿಲ್ಲ. ಆದರೆ ನನಗೆ ಅದೆಲ್ಲದಕ್ಕಿಂತಲೂ ಮುಖ್ಯವಾದ ವಿಷಯ ನನ್ನ ಅಮ್ಮ ಗುಣಮುಖರಾಗಬೇಕು ಎನ್ನುವುದು’. ಎಂದು ಚಂದನ್ ಕುಮಾರ್ ಹೈದರಾಬಾದ್ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.