ಟಾಲಿವುಡ್ ನ ಖ್ಯಾತ ನಟಿ ಸಮಂತಾ ಅವರು ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ವಿ-ಚ್ಛೇದನದ ಬಳಿಕ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಇನ್ನು ಅವರ ಸುತ್ತ ಗಾಸಿಪ್ ಗಳು ಸುತ್ತಿಕೊಂಡಿದ್ದವು. ಆದರೆ ಇವೆಲ್ಲವನ್ನ ಮೀರಿ ಬೆಳೆಯುವ ಪ್ರಯತ್ನ ನಟಿ ಸಮಂತಾ ಅವರದ್ದು. ಹಾಗಾಗಿ ತಮ್ಮ ವೈಯಕ್ತಿಕ ಜೀವನದಲ್ಲಿ ಏನೇ ನಡೆದರೂ ಅವೆಲ್ಲವನ್ನು ಹಿಂದಿಕ್ಕಿ ವೃತ್ತಿ ಜೀವನದಲ್ಲಿ ಮುಂದುವರೆಯಲು ಸಮಂತಾ ಮನಸ್ಸು ಮಾಡಿದ್ದರು.
ಅಂತೆಯೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು ಸಮಂತಾ. ಈ ನಡುವೆ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡಿದ್ದು, ಅವರ ಹಲವು ಯೋಜನೆಗಳನ್ನು ಉಲ್ಟಾವಾಗಿಸಿದೆ. ಹೌದು, ಸಮಂತಾ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇರುವಾಗಲೇ ಶೂಟಿಂಗ್ ಬಿಟ್ಟು ಇದ್ದಕ್ಕಿದ್ದ ಹಾಗೆ ಗಾಯಬ್ ಆಗಿದ್ದರು ಸಮಂತಾ ಯಾಕೆ ಕಾಣಿಸಿಕೊಳ್ಳುತ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಮಂತಾ ಆಕ್ಟಿವ್ ಇಲ್ಲ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳಿಗೆ ಬೇಸರವೂ ಆಗಿತ್ತು ಜೊತೆಗೆ ಸಾಕಷ್ಟು ಊಹಾಪೋಹಗಳು ಕೂಡ ಹುಟ್ಟಿಕೊಂಡಿದ್ದವು. ಸಮಂತಾ ಯಾವುದೋ ಸಿನಿಮಾಕ್ಕೆ ಬೇರೆಯದೇ ರೀತಿಯ ಟ್ರೇನಿಂಗ್ ಪಡೆದುಕೊಳ್ಳಲು ಫಾರಿನ್ ಹೋಗಿದ್ದಾರೆ ಅಂತಲೋ, ಮುಖದ ಸರ್ಜರಿ ಮಾಡಿಸಿಕೊಳ್ಳುವುದಕ್ಕಾಗಿ ಹೋಗಿದ್ದಾರೆ ಅಂತಲೂ ಸುದ್ದಿಯಾಗಿತ್ತು.
ಆದರೆ ಇದೀಗ ಎಲ್ಲರ ಕಲ್ಪನೆಗಳಿಗೆ ತೆರೆ ಎಳೆದಿರುವ ನಟಿ ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ತಾವು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ ಇಷ್ಟು ದಿನ ತಾವು ಅನುಭವಿಸಿದ ಪರಿಸ್ಥಿತಿಗಳ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ. ಹೌದು, ಸಮಂತಾ ಅವರು ಹೇಳುವ ಪ್ರಕಾರ ಮಯೋಸಿಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಸ್ವಲ್ಪವೇ ಸ್ವಲ್ಪ ನಡೆದರೂ ಕೂಡ ದೇಹಕ್ಕೆ ಸುಸ್ತಾಗುತ್ತದೆ. ಸುಮಾರು 30 ರಿಂದ 60 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೂಡಲೇ ಸರಿಯಾದ ಚಿಕಿತ್ಸೆಯನ್ನು ಕೊಡಬೇಕು. ಇಲ್ಲವಾದರೆ ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಹಾಗಾಗಿ ಸದ್ಯ ನಟಿ ಸಮಂತಾ ಚಿಕಿತ್ಸೆಯಲ್ಲಿದ್ದಾರೆ. ಜೊತೆಗೆ ಸುಧಾರ್‍ಇಸಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಸಮಂತಾ ಅಭಿನಯದ ಯಶೋಧ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಕನ್ನಡದ ಸ್ಟಾರ್ ನಟರು ಕೂಡ ಈ ಸಿನಿಮಾ ಡಿಸ್ಟ್ರಿಬ್ಯೂಷನ್ ಗೆ ಸಹಕರಿಸುತ್ತಿದ್ದಾರೆ.
ಇನ್ನು ಸಮಂತ ಅಭಿನಯದ ಶಾಕುಂತಲ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಜೊತೆಗೆ ನಟ ವಿಜಯ ದೇವರಕೊಂಡ ಅವರ ಜೊತೆಗೆ ಖುಷಿ ಎನ್ನುವ ಸಿನಿಮಾದಲ್ಲಿಯೂ ಕೂಡ ಸಮಂತ ಅಭಿನಯಿಸುತ್ತಿದ್ದು ಆ ಸಿನಿಮಾದ ಚಿತ್ರೀಕರಣ ಇನ್ನೇನು ಆರಂಭವಾಗಬೇಕಿತ್ತು ಅಷ್ಟರಲ್ಲಿ ಸಮಂತಾ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ತೆರಳಿದ್ದರು. ಸದ್ಯ ಸಮಂತಾ ಅವರ ಅಭಿಮಾನಿಗಳು ಬೇಗ ಹುಷಾರಾಗಿ ಬನ್ನಿ ಅಂತ ಶುಭಾಶಯ ತಿಳಿಸಿ ಕಮೆಂಟ್ ಮಾಡಿದ್ದಾರೆ.