ಕನ್ನಡ ಕಿರುತೆರೆಯಲ್ಲಿ ಅಭಿನಯಿಸುತ್ತಿರುವ ಕೆಲವು ನಟಿಯರು, ನಿಜಕ್ಕೂ ಯಾವ ಸ್ಟಾರ್ ನಟಿಯರಿಗಿಂತಲೂ ಕಡಿಮೆ ಇಲ್ಲ. ಅವರ ಫಿಟ್ನೆಸ್ ಇರಬಹುದು, ಅವರ ಆಟಿಟ್ಯೂಡ್ ಇರಬಹುದು, ಡ್ರೆಸ್ಸಿಂಗ್ ಇರಬಹುದು ಎಲ್ಲದರಲ್ಲಿಯೂ ಸ್ಟಾರ್ ನಟಿಯರನ್ನ ಮೀರಿಸುವಷ್ಟು ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ನಟಿಯರು ಪೋಸ್ಟ್ ಮಾಡುವ ಫೋಟೋಗಳು ಅಥವಾ ವಿಡಿಯೋಗಳನ್ನು ನೋಡಿದರೆ ನಿಜಕ್ಕೂ ಶಾಕ್ ಆಗುತ್ತೆ.
ಅಂತಹ ನಟಿಯರ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಇನ್ನು ನಟಿ ಹಾಗೂ ನಿರೂಪಕಿ ಆಗಿರುವ ಶ್ವೇತಾ ಚಂಗಪ್ಪ ಅವರ ಬಗ್ಗೆ ಎಂದು ಕೇಳಲೇಬೇಡಿ. ಸೌಂದರ್ಯದ ಗಣಿಯಂತೆ ಇರುವ ಶ್ವೇತ ಚಂಗಪ್ಪ ದಿನದಿಂದ ದಿನಕ್ಕೆ ಯಂಗ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ನಟಿ ಶ್ವೇತಾ ಚಂಗಪ್ಪ ಅವರಿಗೆ ಮದುವೆಯಾಗಿ ಒಂದು ಮಗುವೂ ಇದೆ, ಆದರೆ ಅವರ ಫಿಟ್ನೆಸ್ ವಿಷಯಕ್ಕೆ ಬಂದರೆ ಇನ್ನೂ 18ರ ಹರೆಯ ಎನ್ನಬಹುದು.
ನಟಿ ಶ್ವೇತಾ ಚಂಗಪ್ಪ ಅವರಿಗೆ ಇದೀಗ 35 ವರ್ಷ ವಯಸ್ಸು. ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ ಮಿಲ್ಕ್ ಬ್ಯೂಟಿಯಂತೆ ಕಂಗೊಳಿಸುತ್ತಾರೆ. ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಶ್ವೇತಾ ಚಂಗಪ್ಪ ಅವರ ಸ್ಮೈಲ್ ಗೆ ಫಿದಾ ಆಗದೆ ಇರುವವರೇ ಇಲ್ಲ. ಕನ್ನಡ ಕಿರುತೆರೆಯ ಲೋಕದಲ್ಲಿ ಸಾಕಷ್ಟು ಫೇಮಸ್ ಆಗಿರುವ ಶ್ವೇತಾ ಚಂಗಪ್ಪ ಹೆಚ್ಚಾಗಿ ಗುರುತಿಸಿಕೊಂಡಿದ್ದು ನಿರೂಪಕಿಯಾಗಿ.
ಶ್ವೇತ ಚಂಗಪ್ಪ ಕಿರುತರಿಗೆ ಕಾಲಿಟ್ಟಿದ್ದೆ ಧಾರಾವಾಹಿ ನಟನೆಯ ಮೂಲಕ. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳದೆ ಇದ್ದರೂ ತಾವು ನಿಭಾಯಿಸಿದ ಪಾತ್ರದಿಂದಲೇ ಜನರ ಮನ ಗೆದ್ದ ನಟಿ ಶ್ವೇತಾ ಚಂಗಪ್ಪ. ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಹಾಗೂ ದರ್ಶನ್ ಹೀಗೆ ಮೊದಲಾದ ಸ್ಟಾರ್ ನಟರ ಜೊತೆ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ಶ್ವೇತ ಚಂಗಪ್ಪ ಇಂದು ಅತ್ಯುತ್ತಮ ನಿರೂಪಕಿ ಎನಿಸಿಕೊಂಡಿದ್ದಾರೆ.
ತಂಗಿಗಾಗಿ ವರ್ಷ ಮೊದಲಾದವು ಶ್ವೇತಾ ಚಂಗಪ್ಪ ಅಭಿನಯಿಸಿದ ಸಿನಿಮಾಗಳು. ಶ್ವೇತಾ ಚಂಗಪ್ಪ ಹೋಸ್ಟಿಂಗ್ ಮಾಡುವ ಯಾವುದೇ ರಿಯಾಲಿಟಿ ಶೋ ಇರಬಹುದು ಅವರು ತಮ್ಮ ಕೆಲಸವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಾರೆ. ಅಲ್ಲದೆ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಮೂಲಕವೂ ಕನ್ನಡ ನಾಡಿನ ಮನೆ ಮಾತಾಗಿದ್ದಾರೆ ಶ್ವೇತಾ ಚಂಗಪ್ಪ.
ಹೌದು ಶ್ವೇತಾ ಚಂಗಪ್ಪ ಮಜಾ ಟಾಕೀಸ್ ನಲ್ಲಿ ಸೃಜನ್ ಪತ್ನಿಯಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಇವರ ಹಾಸ್ಯ ಪ್ರವೃತ್ತಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇನ್ನು ಬಿಗ್ ಬಾಸ್ ಕನ್ನಡ ಶೋನಲ್ಲಿಯೂ ಕೂಡ ಶ್ವೇತಾ ಚಂಗಪ್ಪ ಸ್ಪರ್ದಿಯಾಗಿ ಭಾಗವಹಿಸಿದ್ದಾರೆ. ಇನ್ನು ಶ್ವೇತಾ ಚಂಗಪ್ಪ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಪೂರ್ಣ ಪ್ರಮಾಣದ ನಿರೂಪಕಿಯಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಜೋಡಿ ಕಾರ್ಯಕ್ರಮಕ್ಕೆ ಶ್ವೇತಾ ಚಂಗಪ್ಪ ನಿರೂಪಕಿ. ಇನ್ನು ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿ ಇರುತ್ತಾರೆ. ಶ್ವೇತಾ ಚಂಗಪ್ಪ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದು, ಅವರು ಅಪ್ಲೋಡ್ ಮಾಡುವ ಫೋಟೋ ಹಾಗೂ ವಿಡಿಯೋಗಳಿಗೆ ಲಕ್ಷಾಂತರ ಲೈಕ್ ಗಳು ಬರುತ್ತವೆ.
ಇತ್ತೀಚೆಗೆ ರಿಯಾಲಿಟಿ ಶೋವಿನ ನಿರೂಪಣೆಗೆ ಹೋಗುವುದಕ್ಕೂ ಮೊದಲು ಕ್ಯಾರವ್ಯಾನ್ ನಲ್ಲಿ ಸಿದ್ಧರಾಗುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶ್ವೇತ ಚಂಗಪ್ಪ ಹೀಗೆ ಸಾರಿಉಟ್ಟು ಕ್ಯಾರಾಮ್ಯಾನ್ ನಿಂದ ಇಳಿಯುತ್ತಾ ಇದ್ದರೆ ಅವರ ಸೌಂದರ್ಯವನ್ನು ನೋಡಿ ಅದೆಷ್ಟೋ ಜನ ನಿದ್ದೆ ಕೆಡಿಸಿಕೊಂಡರೋ ಗೊತ್ತಿಲ್ಲ.