ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ ಕಶ್ಯಪ್ ಸಾಕಷ್ಟು ಹೊಸ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ ಅವರ ಹೊಸ ಪ್ರಯತ್ನಗಳೆಲ್ಲವೂ ಸಕ್ಸಸ್ ಆಗಿವೆ. ಅನುರಾಗ ಕಶ್ಯಪ್ ಇದೀಗ ನಿರ್ದೇಶನ ಮಾಡಿರುವ ದೋಬಾರ ಸಿನಿಮಾ ಇನ್ನೇನು ತೆರೆ ಕಾಣಲಿದೆ. ಈ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಬಾಲಿವುಡ್ ಸಿನಿ ಪ್ರಿಯರು ಸಿನಿಮಾ ನೋಡುವುದಕ್ಕೆ ಕಾತುರರಾಗಿ ಕಾಯುತ್ತಿದ್ದಾರೆ. ಬಾಲಿವುಡ್ ನ ಗ್ರಹಗತಿ ಯಾಕೋ ಸರಿ ಇದ್ದಂತಿಲ್ಲ.
ಇತ್ತೀಚಿಗಿನ ಎಲ್ಲಾ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ. ಹಾಗಾಗಿ ಈ ಬಾರಿ ಅನುರಾಗ ಕಶ್ಯಪ್ ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ದೋಬಾರ ಸಿನಿಮಾ ಗೆಲ್ಲುತ್ತಾ ಅನ್ನೋದು ಕಾದು ನೋಡಬೇಕು. ಇನ್ನು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ತಾಪ್ಸಿ ಪನ್ನು. ತಾಪ್ಸಿ ಪನ್ನು ಬಾಲಿವುಡ್ ನಲ್ಲಿ ಈಗಾಗಲೇ ಬೇರೂರಿರಿವ ನಟಿ ಅವರ ಸಾಕಷ್ಟು ಸಿನಿಮಾಗಳು ಹಿಟ್ ಆಗಿವೆ. ಮಹಿಳಾ ಪ್ರಧಾನ ಪಾತ್ರಗಳನ್ನ ಹೆಚ್ಚಾಗಿ ಆಯ್ದುಕೊಂಡು ಅಭಿನಯಿಸುವ ತಾಪ್ಸಿ ಪನ್ನು.
ಈಗಾಗಲೇ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ ಜೊತೆಗೆ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅಭಿನಯದ ದೋಬಾರಾ ಸಿನಿಮಾವನ್ನು ಹೇಗಾದರೂ ಜನರ ಮೆಚ್ಚುಗೆ ಪಡೆದುಕೊಳ್ಳುವಂತೆ ಮಾಡಬೇಕು ಅಂತ ಈ ಸಿನಿಮಾದ ಪ್ರಚಾರ ಕಾರ್ಯವನ್ನು ಅನುರಾಗ ಕಶ್ಯಪ್ ಹಾಗೂ ನಟಿ ತಾಪ್ಸಿ ಪನ್ನು ಶತಾಯಗತಾಯ ನಡೆಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕಡೆ ಪ್ರಚಾರ ಕಾರ್ಯವನ್ನು ಮಾಡಿದ್ದಾರೆ.
ಪ್ರಮೋಷನ್ ಕಾರ್ಯವನ್ನು ಹೆಚ್ಚಾಗಿ ನಡೆಸುತ್ತಿರುವ ಕಾರಣ ಈ ಸಿನಿಮಾ ಹೆಚ್ಚು ಜನರಿಗೆ ತಲುಪುವ ನಿರೀಕ್ಷೆಯು ಇದೆ. ಇನ್ನು ಹೀಗೆ ಸಿನಿಮಾ ಪ್ರಚಾರದ ವೇಳೆ ಮಾಧ್ಯಮದೊಂದಿಗೆ ನಿರ್ದೇಶಕರು ಹಾಗೂ ಕಲಾವಿದರು ಮಾತನಾಡುವುದು ಸಹಜ. ಹಾಗಾಗಿ ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಕೂಡ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅನುರಾಗ ಕಶ್ಯಪ್ ಆಡಿದ ಮಾತುಗಳು ನಿಜಕ್ಕೂ ಶಾಕಿಂಗ್ ಆಗಿತ್ತು.
ಅಲ್ಲದೇ ಅವರು ಹೇಳಿರುವ ವಿಷಯ ಟ್ರೊಲ್ ಕೂಡ ಆಗುತ್ತಿದೆ. ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಮಾಧ್ಯಮದವರು ಅನುರಾಗ ಕಶ್ಯಪ್ ಅವರ ಬಳಿ ಈ ವಿಚಾರವಾಗಿ ಕೇಳಿದ್ದಾರೆ. ಅನುರಾಗ್ ಅದು ಸರಿ ಎನ್ನುವಂತೆ ಉತ್ತರ ನೀಡಿದ್ದಾರೆ. ಆದ್ರೆ ತಾಪ್ಸಿ ಪನ್ನು ಅವರಿಗೆ ಈ ಮಾತು ಸರಿ ಬಂದಿಲ್ಲ.
ಹೀಗೆ ಬೆತ್ತಲೆ ಫೋಟೋಶೂಟ್ ಮಾಡಿಸುವುದು ಸರಿ ಅಲ್ಲ ಅನ್ನುವಂತಹ ಉತ್ತರವನ್ನು ನೀಡಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಅನುರಾಗ ಕಶ್ಯಪ ತಾಪ್ಸಿ ಪನ್ನು ಅವರಿಗೆ ಕೌಂಟರ್ ಕೊಡ್ತಾರೆ. ‘ತಾಪ್ಸಿ ಪನ್ನು ಅವರಿಗೆ ಹುಡುಗರ ಕಂಡ್ರೆ ಸ್ವಲ್ಪ ಹೊಟ್ಟೆಕಿಚ್ಚು, ಯಾಕೆಂದರೆ ಅವಳಿಗಿಂತ ನನಗೆ ಸ್ತನ ಜಾಸ್ತಿ ಇದೆ ಅಂತ ಅನುರಾಗ್ ಕಶ್ಯಪ್ ಹೇಳಿದ್ದಾರೆ. ಇದನ್ನ ಕೇಳಿ ಸ್ಥಳದಲ್ಲಿದ್ದ ನಟಿ ತಾಪ್ಸಿ ಪನ್ನು ಶಾಕ್ ಆಗಿದ್ದರು.
ಇನ್ನು ಅನುರಾಗ ಕಶ್ಯಪ್ ಅವರು ಹೇಳಿದ ಮಾತನ್ನು ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ಚೆನ್ನಾಗಿ ಉಗಿಯುತ್ತಿದ್ದಾರೆ. ಒಬ್ಬ ಹುಡುಗಿಯ ಬಗ್ಗೆ ಹೀಗೆಲ್ಲ ಮಾತನಾಡಬಾರದು ಅಂತ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲಾ ಪ್ರಚಾರದ ಗಿಮಿಕ್ಸ್ ಅಷ್ಟೇ ಬಿಡಿ ಅಂತ ಕೊಡವಿಕೊಂಡಿದ್ದಾರೆ. ಅದೇನೇ ಇದ್ರೂ ದೋಬಾರಾ ಸಿನಿಮಾವಾದರೂ ಸಿನಿ ಪ್ರಿಯರು ಬಾಲಿವುಡ್ ಕಡೆಗೆ ನೋಡುವಂತೆ ಮಾಡುತ್ತಾ ಅನ್ನೋದೇ ಈಗಿರುವ ಪ್ರಶ್ನೆ!