ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಒಂದಲ್ಲಾ ಒಂದು ಸಿಹಿ ಸುದ್ದಿಯನ್ನು ಚಂದನವನದ ತಾರೆಯರು ನೀಡುತ್ತಿದ್ದಾರೆ. ಅತ್ತ ಸ್ಯಾಂಡಲ್ ವುಡ್ ನ ಸಿನಿಮಾಗಳೂ ಹಿಟ್ ಆಗಿ ಪ್ಯಾನ್ ಇಂಡಿಯಾ ಗುರುತಿಸಿಕೊಳ್ಳುತ್ತಿದ್ದರೆ, ಇತ್ತ ನಟ ನಟಿಯರು ವಯಕ್ತಿಕ ಜೀವನದ ಕೆಲವು ಖುಷಿ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೂ ಖುಷಿ ನೀಡುತ್ತಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮುದ್ದಾದ ಗೊಂಬೆ ಅಮೂಲ್ಯ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದರ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದವರು ಅಮೂಲ್ಯ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನೆಮಗಳಾಗಿದ್ದವರು.
ಇತ್ತೀಚಿನ ವರ್ಷಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅಮೂಲ್ಯ ಸಿನಿ ರಂಗದಿಂದ ದೂರ ಉಳಿದರು. ಮದುವೆಯಾದ ನಂತರ ಯಾವುದೇ ಸಿನಿಮಾಗಳಲ್ಲಿಯೂ ಅಭಿನಯಿಸಲಿಲ್ಲ ಅಮೂಲ್ಯ. ಉದ್ಯಮಿ ಜಗದೀಶ್ ಅವರನ್ನು ಮದುವೆಯಾದ ಬಳಿಕ ಅಮೂಲ್ಯ ವಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಅಮೂಲ್ಯ ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹಾಗಾಗಿ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಇನ್ನು ಮಕ್ಕಳಿಗೆ ಏಳು ತಿಂಗಳಿನ ಬಳಿಕ ಅಮೂಲ್ಯ ಹಾಗೂ ಜಗದೀಶ್ ದಂಪತಿ ನಾಮಕರಣ ಮಾಡಿದ್ದಾರೆ. ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ನಾಮಕರಣ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಹಲವು ತಾರೆಯರು ಈ ನಾಮಕರಣ ಶಾಸ್ತ್ರಕ್ಕೆ ಸಾಕ್ಷಿಯಾದರು.
ನಟಿ ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೂ ಸ್ಯಾಂಡಲ್ವುಡ್ ನ ಎಲ್ಲಾ ತಾರೆಯರು ಬಂದು ಶುಭ ಹಾರೈಸಿದ್ರು. ನಾಮಕರಣ ಶಾಸ್ತ್ರವನ್ನು ಅಮೂಲ್ಯಾ ಹಾಗೂ ಜಗದೀಶ್ ಅದ್ಧೂರಿಯಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಡಿ ಬಾಸ್ ಕೂಡ ನಾಮಕರಣಕ್ಕೆ ಬಂದು ದಂಪತಿಗಳಿಗೆ ಹಾಗೂ ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಇನ್ನು ಶಿವಣ್ಣ ಮಗಳ ಜೊತೆ ಸಮಾರಂಭಕ್ಕೆ ಬಂದಿದ್ದರು.
ಅದೇ ರೀತಿ ಅಮೂಲ್ಯಾ ಅವರಿಗೆ ಬಹಳ ಹತ್ತಿರವಾಗಿರುವ ಗ್ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳೂ ಕೂಡ ಸಮಾರಂಭಕ್ಕೆ ಬಂದಿದ್ದರು. ಗಣೇಶ್ ಒಂದು ಮಗುವಿಗೆ ಚಿನ್ನದ ಸರ ಉಡುಗೊರೆ ನೀಡಿದರೆ, ಶಿಲ್ಪಾ ಇನ್ನೊಂದು ಮಗುವಿಗೆ ಕೈಗೆ ಬಂಗಾರದ ಬಳೆ ತೊಡಿಸಿದ್ದಾರೆ. ಅದೇ ರೀತಿ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಕೂಡ ನಾಮಕರಣ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದಾರೆ.
ಇನ್ನೂ ಸಾಕಷ್ಟು ನಟ ನಟಿಯರು ಈ ಸುಸಂದರ್ಭದಲ್ಲಿ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಎಲ್ಲಾ ತಾರೆಯರು ಅಮೂಲ್ಯಾ ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ. ಸ್ನೇಹಿತರೆ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.