ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ಮೆಚ್ಚಿನ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವಿದೆ. ಪುಟ್ಟ ಗೌರಿ ಮದುವೆಯ ಮಹೇಶ್ ಪಾತ್ರಧಾರಿ ರಕ್ಷಿತ್ ಗೌಡ ವೇದಾಂತ ವಸಿಷ್ಠ ಆಗಿ ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯ 3 ಅಣ್ಣಂದಿರ ಮುದ್ದಿನ ತಂಗಿಯಾಗಿ ಆಧ್ಯಾ ಕೂಡ ಈ ಧಾರಾವಾಹಿಯಲ್ಲಿ ಬರುವ ಪ್ರಮುಖ ಪಾತ್ರ. ಬಬ್ಲಿಯಾಗಿರುವ ಅದೇ ರೀತಿ ಗಂಭೀರವಾಗಿರುವ ಎರಡೂ ಸಂದರ್ಭಗಳನ್ನು ಈ ಪಾತ್ರದಲ್ಲಿ ನಿಭಾಯಿಸಬೇಕಾಗುತ್ತದೆ.
ಈಗಾಗಲೇ ಯಶಸ್ವಿಯಾಗಿ ಹಲವು ಎಪಿಸೋಡ್ ಮುಗಿಸಿರುವ ಗಟ್ಟಿಮೇಳ ಧಾರಾವಾಹಿಯ ಆಧ್ಯಾ ಪಾತ್ರಕ್ಕೆ ಜೀವ ತುಂಬಿರುವುದು ಯಾಋ ಗೊತ್ತಾ? ಗಟ್ಟಿಮೇಳ ಧಾರವಾಹಿಯಲ್ಲಿ ಆಧ್ಯಾ ಪಾತ್ರವನ್ನು ನಿಭಾಯಿಸುತ್ತಿರುವುದು ಕರಾವಳಿಯ ಬೆಡಗಿ ಅನ್ವಿತಾ ಸಾಗರ್. ಅನ್ವಿತಾ ಮಂಗಳೂರು ಮೂಲದವರು. ಧಾರಾವಾಹಿಯಲ್ಲಿ ನಟಿಸಿ ಬೆಳ್ಳಿತೆರೆಗೆ ಹೋಗುವುದು ಸಹಜ.
ಆದ್ರೆ ಆನ್ವಿತಾ ಮೊದ್ಲು ಬೆಳ್ಳಿತೆರೆಯಲ್ಲಿ ನಟಿಸಿ ನಂತರ ಧಾರಾವಾಹಿಗೆ ಬಂದವರು. ಹೌದು ಅನ್ವಿತಾ, ತುಳು ಚೆನ್ನಾಗಿ ಬಲ್ಲವರು. ತುಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅನ್ವಿಕಾ ಸಾಗರ್ ಅವರು ಕಾಲೇಜಿನಲ್ಲಿ ಇರುವಾಗಲೇ ಸಾಕಷ್ಟು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ನಂತರ ಸಿನಿಮಾಗಳಲ್ಲಿಯು ಅಭಿನಯಿಸಿದರು.
ಅನ್ವಿಕಾ ಸಾಗರ್, ಅವರ ಅಣ್ಣ ಕೂಡ ತುಳು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಹಾಗಾಗಿ ಅನ್ವಿಕ ಅವರಿಗೂ ಮನೆಯವರ ವಿರೋಧ ಇಲ್ಲದೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಅನ್ವಿಕಾ ಸಾಗರ್ ಅವರು ತುಳುನಾಡಿನಿಂದ ಬೆಂಗಳೂರಿಗೆ ಬಂದು ವೃತ್ತಿ ಮುಂದುವರೆಸಿದ್ದಾರೆ. ಅನ್ವಿಕಾ ಅವರನ್ನು ನೋಡಿದ ಮಾ.ಆನಂದ್ ಅವರ ಅಣ್ಣ ಅರುಣ್ ಅವರು ಅವಕಾಶ ನೀಡಿದ್ರು.
ಗಟ್ಟಿಮೇಳ ಧಾರವಾಹಿಯಲ್ಲಿ ಆಧ್ಯಾ ಪಾತ್ರ ಮಾಡುವುದಕ್ಕೆ ಅನ್ವಿಕಾಗೆ ಕಷ್ಟವಾಗಿಲ್ಲವಂತೆ. ಯಾಕಂದ್ರೆ ಅವರು ಅಣ್ಣನ ಜೊತೆ ಬೆಳೆದವರು. ಹಾಗಾಗಿ ಅಣ್ಣನ ಪ್ರೀತಿ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಈ ಧಾರಾವಾಹಿಯಲ್ಲಿ ನಟಿಸಲು ಅವರಿಗೆ ಕಷ್ಟವಾಗಲಿಲ್ಲ. ಹಾಗೆಯೇ ಅವರ ಸ್ವಭಾವ ಕೂಡ ಆಧ್ಯಾ ಪಾತ್ರಕ್ಕೆ ಹೋಲುತ್ತದೆ. ಇನ್ನು ಅನ್ವಿಕಾ ಸಾಗರ್ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ.
ಸಾಕಷ್ಟು ಮಂದಿ ಫಾಲೋವರ್ಸ್ ಕೂಡ ಇದ್ದಾರೆ. ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಅದಕ್ಕೆ ಸಾವಿರಾರು ಲೈಕ್ ಗಳು ಕಮೆಂಟ್ ಗಳು ಬರುತ್ತವೆ. ಅನ್ವಿಕಾ ಇತ್ತೀಚಿಗೆ ಪರ್ಪಲ್ ಬಣ್ಣದ ಸೀರೆ ಉಟ್ಟು, ನೋಟಿ ಲುಕ್ ನೀಡಿದ್ದಾರೆ. ಅವರ ಫೋಸ್ ನಿಂದಲೆ ಇನ್ನಷ್ಟು ಅಂದವಾಗಿ ಕಾಣಿಸುತ್ತಾರೆ ಅನ್ವಿಕಾ.
ಇನ್ನು ಫೋಟೋಗಳ ಜೊತೆಗೆ ‘ ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ .. ನಿನ್ನದೇ ಗುಂಗಿನ ಹುಚ್ಚಿ ನೋಡಿ ನಾನೀಗ…’ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳಂತೆ ಅನ್ವಿಕಾ ಅವರ ಫೋಟೋ ಕೂಡ ಬಹಳ ವಿಭಿನ್ನವಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಅನ್ವಿಕಾ ಸಾಗರ್ ಅವರ ಅಫೀಷಿಯಲ್ ಖಾತೆಯಲ್ಲಿ ಈ ಫೋಟೋಗಳನ್ನು ನೋಡಬಹುದು. ಈ ಸುದ್ದಿ ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.