ತೆಲುಗು ನಿರೂಪಣೆಯ ಕ್ಷೇತ್ರದಲ್ಲಿ ಹೆಚ್ಬು ಪ್ರಸಿದ್ಧಿ ಪಡೆದುಕೊಂಡಿರುವ ಹೆಸರು ಅನಸೂಯ ಭಾರದ್ವಾಜ್. ಇವರು ನಿರೂಪಣೆಗಿಂತ ಹೆಚ್ಚಾಗಿ ಕೆಲವೊಮ್ಮೆ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ.ಅನಸೂಯ ಭಾರದ್ವಾಜ್ ಅವರು ತೆಲುಗಿನಲ್ಲಿ ಕೆಲವು ಗೇಮ್ ಶೋಗಳು ಹಾಗೂ ಕಾಮಿಡಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಇವರು ನಿರೂಪಣೆ ಮಾಡುವ ಶೈಲಿ ಜನರಿಗೆ ಇಷ್ಟವಾಗಿ ತುಂಬಾ ಎಂಜಾಯ್ ಮಾಡುತ್ತಿದ್ದರು.
ಅದರಿಂದಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಇವರಿಗೆ ಸಿಕ್ಕಿತು. ರಂಗಸ್ಥಲಂ ಸಿನಿಮಾದಲ್ಲಿ ರಂಗಮ್ಮತ್ತಯಾಗಿ, ಪುಷ್ಪ ಸಿನಿಮಾದಲ್ಲಿ ದಾಕ್ಷಾಯಿಣಿ ಪಾತ್ರದಲ್ಲಿ ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ, ಅಚ್ಚುಕಟ್ಟಾದ ಅಭಿನಯಕ್ಕೆ ಸೈಮಾ ಅವಾರ್ಡ್ ಮತ್ತು ಫಿಲ್ಮ್ ಫೇರ್ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ. ಅನಸೂಯ ಅವರು ಟಿವಿ ಕಾರ್ಯಕ್ರಮಗಳನ್ನು ಮಾತ್ರವಲ್ಲದೆ ಅವಾರ್ಡ್ ಶೋಗಳು, ಮ್ಯೂಸಿಕ್ ಕಾನ್ಸರ್ಟ್ಸ್ ಗಳನ್ನು ಸಹ ನಿರೂಪಣೆ ಮಾಡುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನಸೂಯ ಭಾರದ್ವಾಜ್ ಅವರು ಕೆಲವೊಂದು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿ ವಿವಾದಗಳಿಗೆ ಕಾರಣವಾಗುತ್ತಾರೆ. ಹಲವು ಬಾರಿ ಇವರು ಕೊಡುವ ಹೇಳಿಕೆಗಳು, ಮಾಡುವ ಟ್ವೀಟ್ ಗಳು ಟ್ರೋಲ್ ಆಗುವುದುಂಟು. ಒಂದು ಕಾಲದಲ್ಲಿ ನಿರೂಪಕಿಯರು ಎಂದರೆ ಸೀರೆ ಧರಿಸಿಯೇ ನಡೆಸಿಕೊಡಬೇಕು ಎನ್ನುವ ಹಾಗಿದ್ದ ಸಮಯದಲ್ಲಿ, ಮಾಡರ್ನ್ ಡ್ರೆಸ್ ಗಳನ್ನು ಧರಿಸಿ ನಿರೂಪಣೆ ಮಾಡುವುದನ್ನು ಶುರು ಮಾಡಿ, ಹೊಸ ಟ್ರೆಂಡ್ ಸೃಷ್ಟಿಸಿದ್ದರು ಅನಸೂಯ ಭಾರದ್ವಾಜ್.
ಇವರು ಡ್ರೆಸಿಂಗ್ ಸ್ಟೈಲ್ ಇಂದಲೇ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಇವರ ಕಾರ್ಯಕ್ರಮವನ್ನು ಪಡ್ಡೆ ಹುಡುಗರು ಸಹ ಕೂತು ನೋಡುವ ಹಾಗೆ ಹವಾ ಸೃಷ್ಟಿಸಿದ್ದರು ಅನಸೂಯ ಭಾರದ್ವಾಜ್. ಅನಸೂಯ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಈಗಲೂ ಸಹ ಆ ರೀತಿ ಕಾಣಿಸುವುದಿಲ್ಲ, ಯಂಗ್ ಆಗಿ ಕಾಣಿಸುವುದರ ಜೊತೆಗೆ ಹೆಚ್ಚಾಗಿ ಮಾಡರ್ನ್ ಡ್ರೆಸ್ ಗಳನ್ನೇ ಧರಿಸಿವುದರಿಂದ ಸುದ್ದಿಯಾಗುತ್ತಾರೆ ಅನಸೂಯ.
ಸೋಷಿಯಲ್ ಮೀಡಿಯಾದಲ್ಲಿ ಇವರು ಬಹಳ ಆಕ್ಟಿವ್, ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅನಸೂಯ ಅವರು ಹೆಚ್ಚಾಗಿ ಮಾಡರ್ನ್ ಡ್ರೆಸ್ ಗಳನ್ನೇ ಧರಿಸುವ ಬಗ್ಗೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದು, ಆತನಿಗೆ ಇನ್ನೆಂದು ಯಾರ ಬಗ್ಗೆಯೂ ಆ ರೀತಿ ಕಮೆಂಟ್ ಮಾಡದ ಹಾಗೆ ಉತ್ತರ ಕೊಟ್ಟಿದ್ದಾರೆ ಅನಸೂಯ ಭಾರದ್ವಾಜ್.
ವ್ಯಕ್ತಿಯೊಬ್ಬ, “ಎರಡು ಮಕ್ಳಳ ತಾಯಿಯಾಗಿ ನೀವು ಇಂತಹ ಬಟ್ಟೆಗಳನ್ನು ಧರಿಸುತ್ತೀರಾ, ನಿಮಗೆ ನಾಚಿಕೆ ಆಗೋದಿಲ್ವಾ? ತೆಲುಗು ಮಹಿಳಾ ಸಮುದಾಯಕ್ಕೆ ನೀವು ಅವಮಾನ..” ಎಂದು ಒಬ್ಬ ಕಮೆಂಟ್ ಮಾಡಿದ್ದು, ಅದಕ್ಕೆ ಖಡಕ್ ಉತ್ತರ ನೀಡಿರುವ ಅನಸೂಯ ಅವರು, “ನೀವು ಯೋಚನೆ ಮಾಡಿರುವ ಶೈಲಿ, ಇಡೀ ಗಂಡಸರ ಸಮುದಾಯಕ್ಕೆ ಅವಮಾನ ಮಾಡಿದ ಹಾಗೆ. ನನಗೆ ಏನು ಅನ್ನಿಸುತ್ತದೆ ಅದನ್ನು ನಾನು ಮಾಡುತ್ತೇನೆ.. ನೀವು ನಿಮ್ಮ ಕೆಲಸ ಮಾಡುವುದು ಒಳ್ಳೆಯದು..”ಎಂದು ಉತ್ತರ ಕೊಟ್ಟಿದ್ದಾರೆ ಅನಸೂಯ. ಈ ಮೂಲಕ ಆತ ಮರು ಉತ್ತರ ಕೊಡಲು ಸಾಧ್ಯವಾಗದ ಹಾಗೆ ಮಾಡಿದ್ದಾರೆ.