ನಟಿಯರ ಟ್ಯಾಲೆಂಟ್ ನೋಡಿ ಸಿನೆಮಾದಲ್ಲಿ ಅವಕಾಶ ಕೊಡಲ್ಲ, ಬದಲಿಗೆ ಅದನ್ನ ನೋಡಿ ಅವಕಾಶ ಕೊಡುತ್ತಾರೆ ಎಂದ ನಟಿ ನಿಧಿ ಅಗರ್ವಾಲ್! ಏನು ನೋಡಿ ಅವಕಾಶ ಕೊಡುತ್ತಾರೆ ಗೊತ್ತಾ? ಬೆಚ್ಚಿಬಿದ್ದ ಚಿತ್ರರಂಗ!!

ಸುದ್ದಿ

ಸೌತ್ ಸಿನಿಮಾಗಳಲ್ಲಿ ಈಗ ತಾನೇ ತಮ್ಮ ಕರಿಯರ್ ಸ್ಟಾರ್ಟ್ ಮಾಡಿರುವ ನಿಧಿ ಅಗರ್ವಾಲ್ ಇದೀಗ ಸಂಚಲನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ ಇವರ ಹೇಳಿಕೆಯನ್ನ ಕೇಳಿ ತೆಲುಗು ಚಿತ್ರರಂಗ ಹೌಹಾರಿದೆ. ಜೊತೆಗೆ ಸಿನಿಪ್ರೀಯರಿಗೂ ಶಾಕ್ ಆಗಿದೆ. ಜೊತೆಗೆ ಇನ್ನಷ್ಟು ಮಂದಿ ಅವರು ಹೇಳಿರುವ ಹೇಳಿಕೆ ಸರಿಯಾಗಿದೆ ಎಂದು ನಿಧಿ ಅಗರ್ವಾಲ್ ಅವರ ಮಾತಿಗೆ ಕೈ ಜೋಡಿಸಿದ್ದಾರೆ. ನಿಧಿ ಅಗರ್ವಾಲ್ ಹೇಳಿರುವ ಮಾತುಗಳು ಏನು ಗೊತ್ತೇ?

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಈಗ ತಾನೇ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿ ನಿಧಿ ಅಗರ್ವಾಲ್. ಇವರು ತೆಲುಗಿನಲ್ಲಿ ಸವ್ಯಸಾಚಿ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಆದರೆ ಈ ಸಿನಿಮಾ ಅಟ್ಟರ್ ಪ್ಲಾಫ್ ಆಗಿತ್ತು. ಮೊದಲ ಸಿನಿಮಾ ಸೋತರು ನಟಿ ನಿಧಿ ಅಗರ್ವಾಲ್ ಅವರಿಗೆ ಇತರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು.

ಅಧಿಕ ಅವಕಾಶಗಳು ಬಾರದೇ ಇದ್ದರೂ ತಕ್ಕಮಟ್ಟಿಗಂತೂ ನಟಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ನಿಧಿ ಅಗರ್ವಾಲ್ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಸದ್ಯ ಯಾವುದೇ ಸ್ಟಾರ್ ನಟರ ಜೊತೆಗೂ ನಟಿಸಲು ನಿಧಿ ಸಿದ್ಧವಾಗಿದ್ದಾರೆ. ಮೊದಲನೇ ಸಿನಿಮಾ ಸೋಲನ್ನು ಕಂಡರು ನಂತರ ಇಸ್ಮಾರ್ಟ್ ಶಂಕರ್ ಸಿನಿಮಾ ತಕ್ಕಮಟ್ಟಿಗೆ ನಿಧಿ ಅವರಿಗೆ ಗೆಲುವನ್ನು ತಂದುಕೊಟ್ಟಿತು.

ಇದೀಗ ನಟಿ ನಿಧಿ ಅಗರ್ವಾಲ್ ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಜೊತೆಗೆ ಹರಿಹರ ವೀರಮಲ್ಲು ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಭಾಸ್ ಅಭಿನಯಿಸುತ್ತಿರುವ ಚಿತ್ರ ಒಂದರಲ್ಲಿ ಎರಡನೇ ನಾಯಕಿಯಾಗಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಜೊತೆಗೆ ತಮಿಳು ಚಿತ್ರರಂಗದಲ್ಲಿಯು ಕೂಡ ನಿಧಿ ಅಗರ್ವಾಲ್ ಅವರಿಗೆ ಅವಕಾಶಗಳು ಸಿಗುತ್ತಿವೆ.

ಇನ್ನು ಚಿತ್ರರಂಗದ ಬಗ್ಗೆ ಕೆಲವು ಕಹಿ ಸತ್ಯಗಳನ್ನ ಬಿಚ್ಚಿಟ್ಟಿದ್ದಾರೆ ನಿಧಿ ಅಗರ್ವಾಲ್. ಹೌದು ಸಿನಿಮಾಗಳಲ್ಲಿ ನಟಿಯರ ಟ್ಯಾಲೆಂಟ್ ಅನ್ನು ಯಾರು ಗುರುತಿಸುವುದಿಲ್ಲ ಬದಲಿಗೆ ಹೀರೋಯಿನ್ ಚೆನ್ನಾಗಿದ್ದಾಳ? ನೋಡೋದಕ್ಕೆ ಅಂದವಾಗಿದ್ದಾಳೆಯೇ? ಎಂದು ನೋಡುತ್ತಾರೆ. ಹಾಗಾಗಿ ನಾನು ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸಲು ಹಿಂಜರಿಯುವುದಿಲ್ಲ.

ಅಂತ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇನೆ. ಇನ್ನು ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೆ ನಿರ್ಮಾಪಕರು ಅವಕಾಶ ಮಾಡಿಕೊಟ್ಟರೆ ನಾನು ಹೆಚ್ಚಿನ ಸಂಭಾವನೆಯನ್ನು ಕೇಳುವುದಿಲ್ಲ. ಅವರು ಎಷ್ಟು ಕೊಟ್ಟರು ಅಷ್ಟೇನ್ನು ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಮಿನಿಮಮ್ ಚಾರ್ಜ್ ಇಷ್ಟು ಅಂತ ಹೇಳುತ್ತೇನೆ.

ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಭದ್ರವಾಗಿ ನೆಲೆಯೂರಬಹುದು ಎನ್ನುವುದು ನಿಧಿ ಅಗರ್ವಾಲ್ ಅವರ ಮಾತು. ಇನ್ನು ಸಕ್ಕತ್ ಬೋಲ್ಡ್ ಆಗಿರುವ ನಿಧಿ ಅಗರ್ವಾಲ್ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಆಸೆಯನ್ನು ಹೊಂದಿದ್ದಾರೆ. ಸ್ನೇಹಿತರೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *