ಇಂದು ಟಾಲಿವುಡ್ ನ ನಂಬರ್ ಒನ್ ನಾಯಕ ನಟಿ ಅಂದ್ರೆ ಅದು ಪೂಜಾ ಹೆಗ್ಡೆ ಪುರುಸೊತ್ತು ಇಲ್ಲದಷ್ಟು ಸಿನಿಮಾಗಳನ್ನ ಒಪ್ಪಿಕೊಳ್ಳುತ್ತ ಸದಾ ಬ್ಯುಸಿಯಾಗಿರುವ ನಟಿ ಇವರು. ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಪೂಜಾ ಹೆಗ್ಡೆ ಇದೀಗ ಬಾಲಿವುಡ್ ಗೆ ಕೂಡ ಸಿನಿಮಾದಲ್ಲಿ ಅಭಿನಯಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಮಿಸ್ ಯೂನಿವರ್ಸ್, ಪೂಜಾ ಹೆಗ್ಡೆ ಅಪ್ಪಟ ಕರಾವಳಿ ಹುಡುಗಿ.
ಪೂಜಾ ಹೆಗ್ಡೆ ಜನಿಸಿದ್ದು ಅಕ್ಟೋಬರ್ 13, 1990ರಲ್ಲಿ. ಮುಂಬೈನಲ್ಲಿ ಜನಿಸಿದವರು. ಮಂಜುನಾಥ ಹೆಗ್ಡೆ ಮತ್ತು ಲತಾ ಹೆಗ್ಡೆ ಅವರ ಪ್ರ್‍ಇತಿಯ ಪುತ್ರಿ ಪೂಜಾ ಹೆಗ್ಡೆ. ಪೂಜಾ ಹೆಗ್ಡೆಯವರ ತಾಯಿ ಮತ್ತು ತಂದೆ ಕರ್ನಾಟಕದ ಮಂಗಳೂರಿನ ಮೂಲದವರು. ಆದರೆ ಅವರು ಸೆಟಲ್ ಆಗಿದ್ದು ಮಾತ್ರ ಮುಂಬೈನಲ್ಲಿ. ಮಾಡಲಿಂಗ್ ನಲ್ಲಿ ತೊಡಗಿಕೊಂಡಿದ್ದ ಪೂಜಾ ಹೆಗ್ಡೆ ತೆಲಗು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಾರೆ.
ಪೂಜಾ ಹೆಗ್ಡೆ ಅವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಬ್ರೇಕ್ ಕೊಟ್ಟಿದ್ದು ಅಲಾ ವೈಕುಂಠ ಪುರಮುಲೋ ಸಿನಿಮಾದಲ್ಲಿ ಅಭಿನಯಿಸಿದ ಮೂಲಕ. ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರ ಜೊತೆಗೆ ಪೂಜಾ ಹೆಗ್ಡೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಅರವಿಂದ ಸಮೇತ ವೀರ ರಾಘವ ಸಿನಿಮಾವು ಕೂಡ ತ್ರಿವಿಕ್ರಮ ಅವರ ನಿರ್ದೇಶನದ್ದು. ಹಾಗಾಗಿ ಇವರಿಬ್ಬರ ನಡುವೆ ಏನು ನಡೆಯುತ್ತಿರಬೇಕು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಯಾಕಂದ್ರೆ ತ್ರಿವಿಕ್ರಮ ಅವರ ಎಲ್ಲಾ ಸಿನಿಮಾಗಳಲ್ಲೂ ಪೂಜಾ ಹೆಗ್ಡೆ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ನಾಗಚೈತನ್ಯ ಅವರ ಜೊತೆಗೆ ಒಕ ಲೈಲಾ ಪಾರೋ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ರು. ಮುಕುಂದ ಸಿನಿಮಾದಲ್ಲಿ ಗೋಪಿಕಮ್ಮ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ ಪೂಜಾ ಹೆಗ್ಡೆ ಅಲ್ಲಿಂದ ತಮ್ಮ ಕ್ರೇಜ್ ಹೆಚ್ಚಿಸಿಕೊಂಡರು.
ಈಗಾಗಲೇ ಟಾಲಿವುಡ್ ನ ಎಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಬಹು ಬೇಡಿಕೆಯನ್ನು ಹೊಂದಿರುವ ಪೂಜಾ ಹೆಗ್ಡೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ಆಯ್ಕೆ ಆಗಿರುತ್ತಾರೆ. ಇನ್ನು ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಪೂಜಾ ಹೆಗ್ಡೆ ತಮ್ಮ ದೇಹದ ಒಂದು ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಮುಂದಾಗಿದ್ದಾರಂತೆ. ಹೌದು ಟಾಲಿವುಡ್ ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವುದು ಇದೀಗ ಟ್ರೆಂಡ್ ಕೂಡ ಆಗಿದೆ.
ಹಾಗಾಗಿ ಪೂಜಾ ಕಡೆ ಕೂಡ ಇದೇ ದಾರಿ ಹಿಡಿದರು ಅನಿಸುತ್ತೆ. ಯಾಕಂದ್ರೆ ಈಗಾಗಲೇ ಟಾಲಿವುಡ್ ನ ಕೃತಿ ಶೆಟ್ಟಿ ಕೂಡ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಯುವ ನಟಿ ಕೃತಿ ಶೆಟ್ಟಿ ತುಟಿಗಳ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಅದರ ಜೊತೆಜೊತೆಯಲ್ಲಿ ಪೂಜಾ ಹೆಗ್ಡೆ ಕೂಡ ತಮ್ಮ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಬಯಸಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೀಗೆ ಟಾಪ್ ನಟಿ ಎನಿಸಿಕೊಂಡಿರುವ ಪೂಜಾ ಹೆಗ್ಡೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಅಗತ್ಯ ಇದಿಯಾ ಅನ್ನೋದು ಹಲವರ ಪ್ರಶ್ನೆ. ಹೌದು, ಪೂಜಾ ಹೆಗ್ಡೆಯವರ ಮೂಗು ಸರಿಯಾಗಿ ಇದೆಯಲ್ಲ ಅವರು ಯಾಕೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕು ಅಂತ ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.