ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಸಕ್ಸಸ್ ಕಂಡಿದೆ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಕಾಂತಾರ ಸಿನಿಮಾದ ಸಕ್ಸಸ್ ಹಿಂದೆ ರಿಶಬ್ ಶೆಟ್ಟಿಯವರ ಪ್ರಯತ್ನ ಎಷ್ಟಿದೆಯೋ ಅಷ್ಟೇ ಇತರ ಕಲಾವಿದರ ಶ್ರಮವೂ ಕೂಡ ಇದೆ. ಇಂದು ಕನನ್ಡ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಡಬ್ ಆಗಿ ಯಶಸ್ಸು ಗಳಿಸುತ್ತಿರುವ ಕಾಂತಾರ ಸಿನಿಮಾ ಮೂಲಕ ಇದರಲ್ಲಿ ಅಭಿನಯಿಸಿದ ಕಲಾವಿದರೂ ಕೂಡ ದೇಶಾದ್ಯಂತ ಪರಿಚಿತರಾಗುತ್ತಿದ್ದಾರೆ.
ಹೌದು, ಕಾಂತಾರ ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಕೂಡ ಅದರದ್ದೇ ಆದ ಮಹತ್ವವಿದೆ. ಮುಖ್ಯ ಪಾತ್ರದಲ್ಲಿ ಶಿವು ಹಾಗೂ ಲೀಲಾ ಜೋಡಿಯನ್ನು ಬಿಟ್ಟರೆ ರಾಂಪ, ಗುರುವ, ಕಮಲಕ್ಕ ಮೊದಲಾದ ಎಲ್ಲಾ ಪಾಠಗಳು ಕೂಡ ಕಾಂತಾರ ಸಿನಿಮಾದಲ್ಲಿ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಈ ವರೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಲಾವಿದರೂ ಕೂಡಾ ಕಾಂತಾರ ಸಿನಿಮಾದಿಂದ ಗುರುತಿಸಿಕೊಳ್ಳುವಂತಾಗಿದೆ.
ಜೊತೆಗೆ ಸಾಕಷ್ಟು ಅವಕಾಶಗಳು ಕೂಡ ದೊರೆಯುತ್ತಿದೆ. ಇನ್ನು ಕಾಂತಾರ ಸಿನಿಮಾದಲ್ಲಿ ಗಮನ ಸೆಳೆದ ಮತ್ತೊಂದು ಬಹು ಮುಖ್ಯ ಪಾತ್ರ ಲೀಲಾ. ಹಳ್ಳಿಯ ಮೊದಲ ಮಹಿಳಾ ಫಾರೆಸ್ಟ್ ಆಫೀಸರ್ ಆಗಿ ಲೀಲಾ ಕೆಲಸ ಮಾಡುತ್ತಾಳೆ. ಲೀಲಾ ಪಾತ್ರದಲ್ಲಿ ಅಕ್ಷರಶಃ ಬದುಕಿದ, ಪಾತ್ರಕ್ಕೆ ಜೀವ ತುಂಬಿದ ನಟಿ ಸಪ್ತಮಿ ಗೌಡ. ರಿಶಬ್ ಶೆಟ್ಟಿ ತಂಡದಲ್ಲಿ ಸಾಮಾನ್ಯವಾಗಿ ದಕ್ಷಿಣ ಕನ್ನಡದವರೇ ಇರುತ್ತಾರೆ.
ಆದರೆ ಬೆಂಗಳೂರಿನವರಾದ ಸಪ್ತಮಿ ಗೌಡ, ಶೆಟ್ರ ತಂಡ ಸೇರಿ ಇಷ್ಟು ಚೆನ್ನಾಗಿ ಅಭಿನಯಿಸಿದ್ದು ನಿಜಕ್ಕೂ ಗ್ರೇಟ್. ಮಂಗಳೂರಿನ ಭಾಷೆಯನ್ನು ಕಲಿತು ಅಲ್ಲಿನವರಂತೆ ಜೀವಿಸಿದ್ದಾರೆ ನಟಿ ಸಪ್ತಮಿ. ನಟ, ನಿರ್ದೇಶಕ ರಿಶಬ್ ಶೆಟ್ಟಿಯವರ ಸಲಹೆಯ ಮೇರೆಗೆ ಮೂಗಿನ ಎರಡೂ ಭಾಗಕ್ಕೂ ಮೂಗುತಿ ಚುಚ್ಚಿಸಿಕೊಂಡರು ಸಪ್ತಮಿ ಗೌಡ. ಈಗ ಇದೇ ಟ್ರೆಂಡ್ ಆಗುತ್ತಿದೆ. ಸಪ್ತಮಿ ಗೌಡ ಅವರ ತಂದೆ ಉಮೇಶ್, ಪೊಲೀಸ್ ಅಧಿಕಾರಿಯಾಗಿದ್ದವರು.
ಇನ್ನು ಬೆಂಗಳೂರಿನಲ್ಲಿಯೇ ಸಿವಿಲ್ ಇಂಜನೀಯಿಂಗ್ ಪದವಿಯನ್ನು ಪಡೆದಿರುವ ಸಪ್ತಮಿ ಗೌಡ ರಿಶಬ್ ಗೆ ಸಿಕ್ಕಿದ್ದು ಇನ್ಸ್ಟಾಗ್ರಾಮ್ ಮೂಲಕ. ಅಲ್ಲಿಂದ ಸ್ಕ್ರೀನ್ ಟೆಸ್ಟ್ ಮಾಡಿ ಕಾಂತಾರ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಇನ್ನು ಸಪ್ತಮಿ ಗೌಡ 2020ರಲ್ಲಿ ತೆರೆಕಂಡ ನಟ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ತಮ್ಮ ನಟನೆಯ ಎರಡನೇ ಚಿತ್ರದ ಮೂಲಕವೇ ಸೂಪರ್ ಹಿಟ್ ಕಂಡಿದ್ದಾರೆ ನಟಿ ಸಪ್ತಮಿ.
ಇತ್ತೀಚಿಗೆ ಕಾಂತಾರ ಸಿನಿಮಾ ಇವೆಂಟ್ ಗಳು ಹೆಚ್ಚಾಗಿ ನಡೆಯುತ್ತಿದ್ದು, ಸಪ್ತಮಿ ಎಲ್ಲಾ ಕಡೆ ಮಿಂಚುತ್ತಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳ ನಡುವೆ ಸಪ್ತಮಿ ಗೌಡ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಸಪ್ತಮಿ ಗೌಡ ಸೀರೆಯುಟ್ಟು ಮಿಂಚಿದ್ದು, ನಟಿ ರಮ್ಯಾ ಅವರ ಜೊತೆಯೂ ಪೋಟೋ ತೆಗೆಸಿಕೊಂಡು ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಸಪ್ತಮಿ ಗೌಡ ಅವರ ಈ ಯಶಸ್ಸು ಅವರನ್ನು ಸಿನಿಮಾ ಇಂಡಸ್ಟ್ರಿಗೆ ಇನ್ನಷ್ಟು ತೆರೆದುಕೊಳ್ಳುವಂತೆ ಮಾಡಿದೆ. ಸಪ್ತಮಿ ಗೌಡ ಅವರ ಬೇಡಿಕೆಯೂ ಹೆಚ್ಚಾಗಿದ್ದು, ಸದ್ಯದಲ್ಲೇ ಅವರ ಇತರ ಸಿನಿಮಾಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.