ದ್ವಾಪರ ಯುಗವಾಗಿರಲಿ ತ್ರೈತಾಯುಗವಾಗಿರಲಿ, ಅಥವಾ ಈಗಿನ ಕಲಿಯುಗವೆ ಆಗಿರಲಿ ನಮ್ಮಲ್ಲಿ ಹೆಣ್ಣಿಗೆ ಎಷ್ಟು ಮಹತ್ವವನ್ನು ನೀಡಲಾಗುತ್ತೋ ಅಷ್ಟೇ ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ. ಒಂದು ಹೆಣ್ಣು ಮಗು ಜನನವಾಯಿತು ಅಂದ್ರೆ ಅಪ್ಪ-ಅಮ್ಮನಿಗೆ ಆಕೆಯ ಮುಂದಿನ ಭವಿಷ್ಯದ ಬಗ್ಗೆ ಚಿಂತೆ. ಆಕೆ ಬೆಳೆದು ದೊಡ್ಡವಳಾಗಿ ಉದ್ಯೋಗಕ್ಕೆ ಹೋದರೆ ಅಲ್ಲಿಯೂ ಸಾಕಷ್ಟು ಕಷ್ಟಗಳನ್ನ ಅನುಭವಿಸಬೇಕು. ಇನ್ನು ಮದುವೆಯಾಗಿ ಗಂಡನ ಮನೆಗೆ ಹೋದರೆ ಅಲ್ಲಿಯೂ ಅದೆಷ್ಟೋ ನೋವುಗಳನ್ನು ನೋಡಬೇಕು.
ಇದು ಎಲ್ಲ ಹೆಣ್ಣು ಮಕ್ಕಳ ಜೀವನದಲ್ಲಿ ನಡೆಯುತ್ತದೆ ಅಂತಲ್ಲ ಆದರೆ ಸಾಕಷ್ಟು ಜನ ಇಂತಹ ಕಷ್ಟವನ್ನು ಅನುಭವಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಕೇರಳದ ಒಬ್ಬ ಯುವತಿ, ದು’ರಂ’ತ ಅಂ’ತ್ಯವನ್ನು ಕಂಡ ಘಟನೆ ಇದು. ಆಕೆ ಕೇರಳ ಮೂಲದವರು. ತಂದೆ ಪರಿಕ್ಕಲ್ ತಮ್ಮ ಮುದ್ದಿನ ಮಗಳಾದ ಅನ್ಲಿಯಾ ಜಸ್ಟಿನ್ ಅವಳನ್ನು ದೂರದ ದುಬೈನಲ್ಲಿ ನೆಲೆಸಿರುವ ಜಸ್ಟಿನ್ ಎನ್ನುವ ಹುಡುಗನಿಗೆ ಮದುವೆ ಮಾಡಿ ಕೊಡುತ್ತಾರೆ.
ಹೆಣ್ಣು ಮಗು ಹುಟ್ಟಿದಾಗಿನಿಂದ ತಂದೆ ತಾಯಿಯವರಿಗೆ ಇದೆ ಯೋಚನೆ ತನ್ನ ಮಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಅಂದ್ರೆ ಒಳ್ಳೆಯ ವರನೊಂದಿಗೆ ಆಕೆಯ ಮದುವೆಯಾಗಬೇಕು. ಹಣವಂತನು ಗುಣವಂತನು ಹಾಗೂ ವಿದೇಶದಲ್ಲಿಯೂ ನೆಲೆಸಿದ್ರೆ ಆತನ ಜೊತೆ ತನ್ನ ಮಗಳು ತುಂಬಾ ಚೆನ್ನಾಗಿ ಸಂಸಾರ ಮಾಡುತ್ತಾಳೆ ಎನ್ನುವ ಲೆಕ್ಕಾಚಾರ ತಂದೆ ತಾಯಿಯರದ್ದು. ಆದರೆ ಅದೆಷ್ಟು ಬಾರಿ ಇಂತಹ ವಿಷಯದಲ್ಲಿಯೇ ಎಡವುತ್ತಾರೆ ಪಾಲಕರು. ಅಲ್ಲಿಯ ಅವಳು ಬಿಎಸ್ಸಿ ಮುಗಿಸಿ ಎಂಎಸ್ಸಿ ಮಾಡಿ ನರ್ಸಿಂಗ್ ಉದ್ಯೋಗವನ್ನು ಮಾಡುವ ಆಸೆಯನ್ನು ಹೊಂದಿದವಳು.
ಆದರೆ ತಂದೆ ಬಿ ಎಸ್ ಸಿ ಮುಗಿಯುತ್ತಿದ್ದ ಹಾಗೆ ಆಕೆಯನ್ನು ಮದುವೆ ಮಾಡಿ ವಿದೇಶಕ್ಕೆ ಕಳುಹಿಸುತ್ತಾರೆ. ಅತ್ಯಂತ ಚೆನ್ನಾಗಿಯೇ ಪರಿಕಲ್ಲು ಮಗಳ ಮದುವೆಯನ್ನು ಮಾಡಿಕೊಡುತ್ತಾರೆ. ದೇಶದಲ್ಲಿ ಕುಳಿತು ವಿದೇಶದಲ್ಲಿ ತನ್ನ ಮಗಳು ಅದ್ಭುತವಾಗಿ ಸಂಸಾರ ನಡೆಸುತ್ತಾಳೆ ಅಂತ ಕನಸು ಕಂಡ ಪಾಲಕರಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಮಗಳ ಶ’ವ. ಅಲ್ಲಿಯ ಅವಳನ್ನು ಮದುವೆಯಾದ ಜಸ್ಟಿನ್ ದೊಡ್ಡ ಧನಬಾಕನಾಗಿದ್ದ. ತನ್ನ ಹೆಂಡತಿಯನ್ನು ಮುಂದಿಟ್ಟುಕೊಂಡು ಮಾವನಿಂದ ಸಾಕಷ್ಟು ಹಣವನ್ನು ಪೀಕಿಸಿದ್ದ.
ಮಗಳು ಚೆನ್ನಾಗಿರಬೇಕು ಅನ್ನುವ ಕಾರಣಕ್ಕೆ ಮಾವ ಕೂಡ ಆಗಾಗ ಅಳಿಯನಿಗೆ ಹಣ ಕಳಿಸುತ್ತಲೇ ಇದ್ದರು. ಇದರ ಜೊತೆಗೆ ವಿವಿ ಜಸ್ಟಿನ್ ದುಬೈನಲ್ಲಿ ಕಂಪನಿಯ ಕೆಲಸಕ್ಕೆ ಸೇರಿದ್ದು ಫೇಕ್ ಸರ್ಟಿಫಿಕೇಟ್ ಕೊಟ್ಟು ಹಾಗಾಗಿ ಸ್ವಲ್ಪ ದಿನದಲ್ಲಿ ಆತ ಕೆಲಸವನ್ನು ಕಳೆದುಕೊಂಡು ಗಂಡ ಹೆಂಡತಿ ಇಬ್ಬರೂ ವಿದೇಶದಿಂದ ಕೇರಳಕ್ಕೆ ವಾಪಸ್ ಆಗುತ್ತಾರೆ. ಈ ಸಂದರ್ಭದಲ್ಲಿ ಅನ್ಲಿಯಾ ಒಂದು ಮಗುವಿಗೂ ಜನ್ಮ ನೀಡುತ್ತಾಳೆ. ಆದರೆ ಅತ್ತೆ ಹಾಗೂ ಗಂಡನ ಹಿಂ’ಸೆಯನ್ನ ಅಲ್ಲಿಯ ಅವಳಿಗೆ ತಡೆದುಕೊಳ್ಳುವುದಕ್ಕೆ ಆಗಲ್ಲ.
ಒಮ್ಮೆ ತಂದೆಗೆ ಕರೆ ಮಾಡಿ ತಾನು ಮಗುವನ್ನ ಬಿಟ್ಟು ಬೆಂಗಳೂರಿಗೆ ಹೋಗಿ ಎಂ ಎಸ್ ಸಿ ಪದವಿಯನ್ನು ಮಾಡುವುದಾಗಿ ಹೇಳುತ್ತಾಳೆ ಆನ್ಲಿಯಾ. ಆದರೆ ಹೀಗೆ ಮನೆ ಬಿಟ್ಟು ಹೋದರು ಆಕೆಗೆ ನೆಮ್ಮದಿ ಇರುವುದಿಲ್ಲ ಯಾಕೆಂದರೆ ಮಗುವಿನ ಬಳಿ ಮಾತನಾಡುವುದಕ್ಕೂ ಮಗುವನ್ನು ನೋಡುವುದಕ್ಕೂ ಆಕೆಯ ಗಂಡ ಹಾಗೂ ಅತ್ತೆ ಬಿಡುವುದೇ ಇಲ್ಲ. ಹಾಗಾಗಿ ಮತ್ತೆ ಹಿಂತುರುಗಿ ಮನೆಗೆ ಬರುತ್ತಾಳೆ ಆನ್ಲಿಯಾ. ಅವಳಿಗೆ ಗಂಡ ಹಾಗೂ ಅತ್ತೆಯಿಂದ ಸಿಗುವ ನೋವು ಅಷ್ಟಿಷ್ಟಲ್ಲ. ಈ ಧನ ಪಿಶಾಚಿಗಳ ಕೈಗೆ ಸಿಕ್ಕು ಆನ್ಲಿಯಾ ಪಡಬಾರದ ಯಾತನೆಯನ್ನು ಅನುಭವಿಸುತ್ತಾಳೆ.
ಒಮ್ಮೆ ತನ್ನ ಸಹೋದರನಿಗೆ ಕರೆ ಮಾಡಿ ನನಗೆ ನನ್ನ ಗಂಡ ಹಾಗೂ ಅತ್ತೆಯ ಕಾಟವನ್ನು ತಡೆಯೋದಕ್ಕೆ ಆಗುತ್ತಿಲ್ಲ ಹಾಗಾಗಿ ನಾನು ಆ’ತ್ಮಹ’ತ್ಯೆ ಮಾಡಿಕೊಳ್ಳುತ್ತೇನೆ ಅಂತ ಆನ್ಲಿಯಾ ಹೇಳುತ್ತಾಳೆ. ಆಕೆ ಹೀಗೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಮನೆಯಿಂದ ನಾಪತ್ತೆಯಾಗಿರುವುದು ಪೊಲೀಸರಿಂದ ಗೊತ್ತಾಗುತ್ತೆ. ಕೊನೆಗೆ ಹುಡುಕಾಟದ ನಂತರ ನಾ’ಪತ್ತೆಯಾಗಿದ್ದ ಆನ್ಲಿಯಾ ಪತ್ತೆಯಾಗಿದ್ದು ಪೆರಿಯಾರ್ ನದಿಯಲ್ಲಿ ಶ’ವವಾಗಿ.
ತನ್ನ ಮಗಳ ಈ ಸ್ಥಿತಿಗೆ ಆಕೆಯ ಗಂಡ ಹಾಗೂ ಮನೆಯವರೆ ಕಾರಣ ಅಂತ ಪರಿಕ್ಕಲ್ ಪೊಲೀಸರಿಗೆ ದೂರು ನೀಡಿದರು ಅದೇ ರೀತಿ ಅವರಿಬ್ಬರನ್ನ ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬಹುದು ಆಗದೆಯೂ ಇರಬಹುದು. ಆದರೆ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತಿದ್ದ ಆನ್ಲಿಯಾಳಂತಹ ಬಡ ಜೀವ ಮಾತ್ರ ತಾವು ಮಾಡದೇ ಇರುವ ತಪ್ಪಿಗೆ ಬೆಲೆ ತೆರುತ್ತಾರೆ.