ಕನ್ನಡ ಕಿರುತೆರೆ ಲೋಕದಲ್ಲಿ ಅತ್ಯಂತ ಇಂಪ್ರೆಸ್ಸಿವ್ ಹಾಗೂ ಅಟ್ರ್ಯಾಕ್ಟಿವ್ ಮುಖ ಅಂದ್ರೆ ಅನುಪಮಾ ಗೌಡ ಅವರದ್ದು. ಕನ್ನಡ ಕಿರುತೆರೆ ಧಾರಾವಾಹಿಯಲ್ಲಿ ನಟಿಸುತ್ತಾ ಜನರ ಮನಸ್ಸನ್ನು ಗೆದ್ದ ಅನುಪಮಾ ಗೌಡ ನಂತರ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಿದ್ದು ನಿರೂಪಕಿಯಾಗಿ. ಸಿನಿಮಾಗಳಲ್ಲಿಯೂ ಕೂಡ ನಟಿ ಅನುಪಮಾ ಗೌಡ ನಟಿಸಿದ್ದಾರೆ ಆದರೆ ಅದೆಲ್ಲದಕ್ಕಿಂತಲೂ ಹೆಚ್ಚಾಗಿ ನಿರೂಪಣೆಯಿಂದಲೇ ಅನುಪಮಾ ಗೌಡ ಎಂದು ಫೇಮಸ್ ಆಗಿದ್ದಾರೆ.
ಅಕ್ಕ ಎನ್ನುವ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ ಖ್ಯಾತಿ ಅನುಪಮಾ ಗೌಡ ಅವರದ್ದು. ಈಗ ಇಂತಹ ಕಥೆಯ ಧಾರಾವಾಹಿಗಳು ಬರುವುದೇ ಇಲ್ಲ. ದ್ವಿಪಾತ್ರದಲ್ಲಿ ನಟಿಸುವುದು ಅಷ್ಟು ಸುಲಭವಲ್ಲ ಆದರೆ ಎರಡು ರೀತಿಯ ಸ್ವಭಾವದ ಪಾತ್ರವನ್ನ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ರು ಅನುಪಮಾ ಗೌಡ. ಇದಾದ ಬಳಿಕ ಬಿಗ್ ಬಾಸ್ ಸೀಸನ್ 5 ನಲ್ಲಿಯೂ ಕೂಡ ಅನುಪಮಾ ಗೌಡ ಸ್ಪರ್ಧಿಯಾಗಿದ್ರ್ಯ್. ಇಲ್ಲಿಯು ಜನರನ್ನು ಎಂತರ್ ಟೈನ್ ಮಾಡುವಲ್ಲಿ ಅನುಪಮಾ ಸಕ್ಸೆಸ್ ಆಗಿದ್ರು.
ನಟಿ ಅನುಪಮಾ ಗೌಡ ’ನಮ್ಮಮ್ಮ ಸೂಪರ್ ಸ್ಟಾರ್’, ’ರಾಜ ರಾಣಿ’ ಕಾಮೆಡಿ ಶೋ ಮೊದಲಾದ ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಅವರ ಹೋಸ್ಟಿಂಗ್ ಗೆ ಸಿಕ್ಕಾಪಟ್ಟೆ ಜನ ಮುನ್ನಣೆ ಸಿಕ್ಕಿದೆ. ಆದರೆ ಇತ್ತೀಚಿಗೆ ಯಾವ ಕಾರ್ಯಕ್ರಮದ ನಿರೂಪಣೆಯಲ್ಲಿಯೂ ಅನುಪಮಾ ಗೌಡ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅನುಪಮಾ ಗೌಡ ಅವರ ಹವಾ ಜೋರಾಗಿಯೇ ಇದೆ.
ಇಂದು ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಎಂದು ಕರೆಸಿಕೊಳ್ಳುವ ಅನುಪಮಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಏಳು ಲಕ್ಷಕ್ಕೂ ಅಧಿಕ ಫಾಲೋಗಳನ್ನು ಹೊಂದಿದ್ದಾರೆ. ಇನ್ನು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿರುವ ನಟಿ ಅನುಪಮಾ ಗೌಡ ಪ್ರಯಾಣ ಪ್ರಿಯೆ. ಇವರಿಗೆ ಸ್ನೇಹಿತರ ಜೊತೆಗೆ ಹಾಗೂ ಸೋಲೋ ಟ್ರಿಪ್ ಅಂತ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ. ತಮ್ಮ ಜರ್ನಿಯ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಾರೆ.
ಅನುಪಮಾ ಗೌಡ. ಯೂಟ್ಯೂಬ್ ನಲ್ಲಿಯೂ ಕೂಡ ಅನುಪಮಾ ಗೌಡ ಪೋಸ್ಟ್ ಗೆ ಬಹಳಷ್ಟು ವೀಕ್ಷಣೆಗಳು ಬರುತ್ತವೆ. ಅನುಪಮಾ ಗೌಡ ಅವರಿಗೆ ಟ್ರಾವೆಲಿಂಗ್ ಅಂದ್ರೆ ಕ್ರೇಜ್!, ಅವರ ಬಳಿ ಇದ್ದ ಕ್ರೆಟ ಕಾರಿನಲ್ಲಿ ಸಾಕಷ್ಟು ಪ್ರಯಾಣ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರ ಬಳಿ ಇದ್ದ ಈ ಕಾರಿನಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಗೆಳೆಯನಂತಿದ್ದ ತನ್ನ ಕಾರಿಗೆ ಇದೀಗ ಗುಡ್ ಬಾಯ್ ಹೇಳಿದ್ದಾರೆ ಅನುಪಮಾ.
ಹೌದು, ಅನುಪಮಾ ಗೌಡ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಬಳಿ ಇದ್ದ ಕಾರನ್ನು ಮಾರಿ ಹೊಸ ಕಾರ್ ಖರೀದಿಸಿದ್ದಾರೆ. ಕೆಂಪು ಕಪ್ಪು ಬಣ್ಣದ ಮಹೇಂದ್ರ ತಾರ್ ಕಾರನ್ನು ಅನುಪಮಾ ಗೌಡ ಖರೀದಿಸಿದ್ದು, ಹಳೆಯ ಕಾರಿಗೆ ಗುಡ್ ಬಾಯ್ ಹೇಳಿ, ಹೊಸ ಕಾರಿನೊಂದಿಗೆ ಇನ್ನು ತನ್ನ ಪ್ರಯಾಣ ಆರಂಭ ಅಂತ ಸಣ್ಣ ವಿಡಿಯೋ ಒಂದನ್ನ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಕಾರಿನ ಬೆಲೆ ಸುಮಾರು 17 ಲಕ್ಷಕ್ಕೂ ಅಧಿಕ. ತಮ್ಮ ಸ್ವಂತ ದುಡಿಮೆಯಿಂದ ಹಂತ ಹಂತವಾಗಿ ಮೇಲೆ ಬರುತ್ತಿರುವ ಅನುಪಮಾ ಗೌಡ ಅವರ ಬಗ್ಗೆ ಸಾಕಷ್ಟು ಜನರಿಗೆ ಅಭಿಮಾನವಿದೆ. ನಟಿಯಾಗಿ ನಿರೂಪಕರಾಗಿ ಹಾಗೂ ಜಾಹೀರಾತಿನಲ್ಲಿಯೂ ಕೂಡ ಕಾಣಿಸಿಕೊಳ್ಳುವ ನಟಿ ಅನುಪಮಾ ಗೌಡ ಕರ್ನಾಟಕದ ಪ್ರಖ್ಯಾತ ಫೇಸ್‌ಗಳಲ್ಲಿ ಒಬ್ಬರು.
View this post on Instagram