ರಾತ್ರೋರಾತ್ರಿ ವೈರಲ್ ಸ್ಟಾರ್ ಎಸಿಕೊಂಡಿರುವ ಕಾಫಿ ನಾಡು ಚಂದು ಅವರಿಗೆ ಇದೀಗ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ನಾನು ಪುನೀತ್ ಅಣ್ಣ ಶಿವಣ್ಣ ಅವರ ಅಭಿಮಾನಿ ಅಂತಲೇ ಮಾತು ಶುರು ಮಾಡುವ ಚಂದು ಇತ್ತೀಚಿಗೆ ಶಿವಣ್ಣ ಅವರನ್ನು ಭೇಟಿಯಾಗಿ ತನ್ನ ಬಹುದಿನದ ಕನಸನ ನನಸಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ನಾಡು ಚಂದು ಅವರ ಸಂದರ್ಶನವನ್ನು ಕೂಡ ಮಾಡಲಾಗಿದ್ದು ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಕಾಫಿ ನಾಡು ಚಂದು ಇಂದು ಫೇಮಸ್ ಆಗಿದ್ದಾರೆ ತಮ್ಮ ವಿಶಿಷ್ಟ ಹಾಡಿನ ಮೂಲಕವೇ ಕಾಫಿನಾಡು ಚಂದು ಸಾಕಷ್ಟು ಹಣವಂತರಿರಬೇಕು ಅವರಿಗೆ ಸೋಶಿಯಲ್ ಮೀಡಿಯಾದಿಂದ ಸಿಕ್ಕಾಪಟ್ಟೆ ದುಡ್ಡು ಬರ್ತಾ ಇರ್ಬೇಕು ಅಂತ ಹಲವರ ಊಹೆ. ಆದರೆ ಬಹಳ ಚಿಕ್ಕ ವಯಸ್ಸಿನಿಂದ ಇವತ್ತಿನವರೆಗೂ ಆರ್ಥಿಕವಾಗಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ ಕಾಫಿ ನಾಡ ಚಂದು. ಈಗಾಗಲೇ ಸಾಮಾಜಿಕ ಜಾಲತಾಣದಿಂದ ನನಗೆ ಒಂದು ರೂಪಾಯಿ ಕೂಡ ಬಂದಿಲ್ಲ ಅಂತ ಚಂದು ಹೇಳಿದ್ದಾರೆ.
ಇದೀಗ ಒಂದು ಮಟ್ಟಿಗೆನ ಒಳ್ಳೆಯ ಜೀವನ ನಡೆಸುತ್ತಿದ್ದರು ಅವರ ಹಿಂದಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ. ಕಾಫಿ ಮಾಡೋ ಚಂದು ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರ ಊರಿನ ಪಕ್ಕದ ಚಿಕ್ಕ ಹಳ್ಳಿಯವರು. ಚಿಕ್ಕಂದಿನಿಂದ ಅವರನ್ನ ಸಾಕಿ ಬೆಳೆಸಿದ್ದು ಅವರ ತಾಯಿ ಮಾತ್ರ ತಂದೆ ಎಲ್ಲಿದ್ದಾರೆ ಎಂಬುದು ಇಂದಿಗೂ ಚಂದುವಿಗೆ ಗೊತ್ತಿಲ್ಲ. ಇದು ಒಬ್ಬನೇ ಮಗನನ್ನು ಕೂಲಿ ನಾಲಿ ಮಾಡಿ ಚಂದು ತಾಯಿ ಸಾಕಿದ್ದರು.
ತನ್ನ ಮಗ ಡಾಕ್ಟರ್ ಪೋಲಿಸೋ ಆಗಬೇಕು ಅಂತ ಆಕೆಗೆ ಬಹುವಾಗಿ ಆಸೆ ಇತ್ತು ಹಾಗೆ 9ನೇ ತರಗತಿಯವರೆಗೂ ಚಂದು ಚೆನ್ನಾಗಿಯೇ ಓದಿದರು. ಚಂದು ಅವರಿಗೂ ತಾನು ಒಬ್ಬ ಪೊಲೀಸ್ ಆಫೀಸರ್ ಆಗಬೇಕು ಅನ್ನುವ ಆಸೆ ಇತ್ತು. ಅದೇ ದುರಾದೃಷ್ಟವಶಾತ್ ಯಾವ ಆಸೆಯೂ ಈಡೇರಲೇ ಇಲ್ಲ. ಯಾಕಂದ್ರೆ ಕಾಫಿ ನಾಡು ಚಂದು ಅವರ ಸಣ್ಣ ವಯಸ್ಸಿನಲ್ಲಿಯೇ ಅವರ ತಾಯಿ ಕ್ಯಾ-ನ್ಸರ್ ಕಾಯಿಲೆಯಿಂದ ತೀ-ರಿಕೊಳ್ಳುತ್ತಾರೆ.
ಚಂದು ಅವರು ಸುಮಾರು 17 ವರ್ಷ ವಯಸ್ಸಿನಲ್ಲಿ ಇರುವಾಗ ಅವರ ತಾಯಿ ತೀ-ರಿಕೊಳ್ಳುತ್ತಾರೆ ದೀಪಾವಳಿ ಹಬ್ಬದ ದಿನ ಎಲ್ಲರ ಮನೆಯಲ್ಲೂ ದೀಪ ಉರಿತಾ ಇದ್ರೆ ನಮ್ಮನೆಯ ದೀಪ ಆ ದಿನವೇ ಆರಿಹೋಗಿತ್ತು ಅಂತ ಬಹಳ ದುಃಖದಿಂದ ಹೇಳಿಕೊಂಡಿದ್ದಾರೆ ಕಾಫಿ ನಾಡು ಚಂದು. ಸುಮಾರು ಮೂರು ವರ್ಷಗಳವರೆಗೆ ತಾಯಿಯ ಸೇವೆಯನ್ನು ಮಾಡಿದ ಚಂದು ಕೊನೆಗೆ ತಾಯಿಯನ್ನು ಕಳೆದುಕೊಂಡು ಅನಾಥರಾದರು.
ಅವರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವವರು ಯಾರು ಇರಲಿಲ್ಲ ಹಾಗಾಗಿ ತಮ್ಮ ಜೀವನ ನಡೆಸುವುದಕ್ಕೆ ಅವರು ತೋಟದ ಕೆಲಸ ಮಾಡಲು ಮುಂದಾಗುತ್ತಾರೆ. ಇನ್ನು ಈಗಾಗಲೇ ಮದುವೆಯಾಗಿರುವ ಚಂದು ಅವರಿಗೆ ಎರಡು ಮಕ್ಕಳು ಇದ್ದಾರೆ ಆದರೆ ಮದುವೆಯಾದ ಹೊಸತರಲ್ಲಿ ದಿನ ಸರಿಯಾಗಿ ಊಟ ಮಾಡುವುದಕ್ಕೂ ಕಷ್ಟ ಪಡುವ ಪರಿಸ್ಥಿತಿ ಇತ್ತು.
ಅದರಲ್ಲೂ ಹೆಂಡತಿ ಮೊದಲ ಗರ್ಭಿಣಿ ಆಗಿದ್ದಾಗ ನೀರನ್ನು ಕುಡಿದು ಕೂಡ ಬದುಕಿದ್ದೇವೆ ಅಂತ ಚಂದು ಹೇಳಿದ್ದಾರೆ. ಮಗು ಜನಿಸಿದ ಬಳಿಕ ನಮ್ಮ ಅದೃಷ್ಟ ಬದಲಾಯಿತು ಎನ್ನುವ ಚಂದು ಒಂದು ಆಟೋವನ್ನು ಮೂಡಿಸುತ್ತಾ ತಮ್ಮದೇ ಆದ ಸ್ವಂತ ಪುಟ್ಟ ಮನೆ ಒಂದನ್ನು ಹೊಂದಿದ್ದು ಇದೀಗ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಸರು ಮಾಡಿರುವ ಚಂದು ಅವರ ಜೀವನವು ಹಸನಾಗಲಿ ಎನ್ನುವುದೇ ಹಲವರ ಹಾರೈಕೆ.