ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸ್ಟಾರ್ ನಟರ ನಡುವೆ ಜೂನಿಯರ್ ಎನ್ಟಿಆರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕಾರಣ ಅವರು ಕೇವಲ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುವುದು ಮಾತ್ರವಲ್ಲ ಜನರ ಸೇವೆಗಳನ್ನು ಮಾಡುತ್ತಾ ನಿಜ ಜೀವನದಲ್ಲಿಯೂ ಒಬ್ಬ ನಾಯಕ ಎನಿಸಿಕೊಂಡಿದ್ದಾರೆ. ಹಾಗಾಗಿ ಜೂನಿಯರ್ ಎನ್ಟಿಆರ್ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಇತ್ತೀಚಿಗೆ ರಾಜಮೌಳಿ ನಿರ್ದೇಶನದ ಆರ್ ಆರ್ ಸಿನಿಮಾದಲ್ಲಿ, ನಟ ರಾಮಚರಣ್ ಹಾಗೂ ಜೂನಿಯರ್ ಎನ್ಟಿಆರ್ ಒಂದಾಗಿದ್ದರು.
ಇವರಿಬ್ಬರ ಅದ್ಭುತ ನಟನೆಯಿಂದ ಸಾವಿರಾರು ಕೋಟಿ ಕಮಾಯಿ ಮಾಡಿತ್ತು ಆರ್ ಆರ್ ಆರ್ ಸಿನಿಮಾ. ಇನ್ನು ಜೂನಿಯರ್ ಎನ್ಟಿಆರ್ ಅವರು ಖ್ಯಾತ ನಟ, ನಿರ್ದೇಶಕ ಎನ್ ಟಿ ರಾಮರಾವ್ ಅವರ ಮಗ. ನಂದಮೂರಿ ರಾಹು ತಾರಕ್ ಕೂಡ ಜೂನಿಯರ್ ಎನ್ಟಿಆರ್ ಎಂದೆ ಗುರುತಿಸಿಕೊಂಡಿದ್ದಾರೆ. 1983 ಮೇ 30ರಂದು ಜೂನಿಯರ್ ಎನ್ಟಿಆರ್ ಜನಿಸಿದರು. 39 ವರ್ಷದ ಜೂನಿಯರ್ ಎನ್ಟಿಆರ್ ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಲಕ್ಷ್ಮಿ ಪ್ರಣತಿ ಎನ್ನುವವರನ್ನು 2011ರಲ್ಲಿ ವಿವಾಹವಾದರು. ಇನ್ನು ಇವರಿಬ್ಬರ ಮದುವೆಗೆ ಜೂನಿಯರ್ ಎನ್ಟಿಆರ್ ಬರೋಬ್ಬರಿ ನೂರು ಕೋಟಿ ವೆಚ್ಚ ಮಾಡಿ ವಿವಾಹವಾಗಿದ್ದರೂ ಎಂಬ ಸುದ್ದಿ ಇದೆ. ಒಬ್ಬ ಸ್ಟಾರ್ ನಟರ ಮದುವೆ ಅಂದರೆ ಅಲ್ಲಿ ಸೆಲೆಬ್ರೆಟಿಗಳು ವಿಐಪಿ ಗಳು ಇದ್ದೇ ಇರುತ್ತಾರೆ. ಹಾಗಾಗಿ ಅದಕ್ಕೆ ತಕ್ಕ ಹಾಗೆ ಅದ್ದೂರಿಯಾಗಿ ಮದುವೆಯನ್ನು ಕೂಡ ಮಾಡಿಕೊಳ್ಳುವುದು ಸ್ಟಾರ್ ನಟರಿಗೆ ಅನಿವಾರ್ಯವೂ ಹೌದು.
ಈ ಹಿನ್ನೆಲೆಯಲ್ಲಿ ಜೂನಿಯರ್ ಎನ್ಟಿಆರ್ ಬರೋಬ್ಬರಿ ದೂರು ಕೋಟಿ ಖರ್ಚು ಮಾಡಿ ಮದುವೆಯಾಗಿದ್ದಾರೆ. ಜೂನಿಯರ್ ಎನ್ಟಿಆರ್ ಅವರು ತೆಲುಗಿನ ಬಹು ಬೇಡಿಕೆಯ ನಟ. ಇವರು ಕೇವಲ ನಾಯಕ ನಟ ಮಾತ್ರವಲ್ಲ ಉತ್ತಮ ಸಿಂಗರ್ ಕೂಡ. ಕೆಲವು ಕೆಲವು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ ಜೂನಿಯರ್ ಎನ್ಟಿಆರ್.
ನಂದಮೂರಿ ಆರ್ ಆರ್ ಚಿತ್ರದ ಯಶಸ್ಸಿನ ನಂತರ ಇದೀಗ ತನ್ನ 30ನೇ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಹೌದು, ಕೊರಟಾಲ ಶಿವ ಅವರ ಜೊತೆ ತಮ್ಮ 30ನೇ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ ಟಿ ಆರ್. ಈ ಸಿನಿಮಾದ ಬಳಿಕ ಕೆಜಿಎಫ್ ಸಿನಿಮಾದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾದಲ್ಲು ಎನ್ ಟಿಆರ್ ನಟಿಸಲಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಮೊದಲೇ ಅತ್ಯುತ್ತಮ ನಟ ಎನಿಸಿಕೊಂಡವರಾಗಿದ್ದು ಇದೀಗ ಈ ಎರಡು ಚಿತ್ರಗಳೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿವೆ. ಸಿನಿಮಾ ರಂಗದಲ್ಲಿ ಬ್ಯುಸಿ ಇರುವ ಜೂನಿಯರ್ ಎನ್ಟಿಆರ್ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಅವರಂದಿಗೂ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದು, ಅವರ ಕ್ಯೂಟ್ ಜೋಡಿ ಫೋಟೋಗಳು ಇಲ್ಲಿವೆ ನೋಡಿ.