ಸ್ನೇಹಿತರೆ. ಇಷ್ಟು ದಿನ ಪರಭಾಷೆ ನಟಿಯರು ಕನ್ನಡಕ್ಕೆ ಬಂದು ಅಭಿನಯಿಸಿದ್ದು ನಮಗೆಲ್ಲ ಗೊತ್ತೇ ಇದೆ. ಈಗಲೂ ಕನ್ನಡದಲ್ಲಿ ಪರಭಾಷಾ ನಟಿಯರ ಮೇಲಿನ ಕ್ರೇಜ್ ಏನೂ ಕಡಿಮೆ ಆಗಿಲ್ಲ. ಆದರೆ ಈ ನಡುವೆ ಕನ್ನಡತಿ ಒಬ್ಬಳು ಬೇರೆ ಭಾಷೆಯಲ್ಲಿ ಬಹು ಬೇಡಿಕೆಯ ನಟಿ ಎನಿಸಿರುವುದು ನಿಜಕ್ಕೂ ಸಂತೋಷದ ವಿಷಯ. ಗೊಂಬೆಯಂತೆ ಕಾಣುವ ನಟಿ ಶ್ರೀಲೀಲಾ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುವ ಅವಕಾಶವನ್ನು ತನ್ನದಾಗಿಸಿಕೊಂಡಿದ್ದಾರೆ.
ಕೆಲವು ವೈಯಕ್ತಿಕ ಕಾರಣಗಳಿಗೂ ಸುದ್ದಿಯಾಗಿದ್ದ ನಟಿ ಶ್ರೀಲೀಲಾ ಇಂದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಹೆಸರು ಗಳಿಸಿಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಹೌದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಅವರಿಗೆ ಎಷ್ಟರಮಟ್ಟಿಗೆ ಬೇಡಿಕೆ ಇದೆ ಅಂತ ಊಹಿಸುವುದಕ್ಕೆ ಆಗಲ್ಲ.
ಯಾಕೆಂದರೆ ಸ್ಟಾರ್ ನಟಿಯರಾದ ಪೂಜಾ ಹೆಗ್ಡೆ ರಶ್ಮಿಕಾ ಮಂದಣ್ಣ ಮೊದಲಾದವರಿಗೆ ಸಡ್ಡು ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಶ್ರೀ ಲೀಲಾ. ಇತ್ತೀಚಿಗೆ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಅವರ ಹೊಸ ಪ್ರಾಜೆಕ್ಟ್ ಯಾವುದೂ ಅನೌನ್ಸ್ ಆಗುತ್ತಿಲ್ಲ. ಇನ್ನು ಸ್ಟಾರ್ ನಟಿ ಸಮಂತಾ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದು, ಸಿನಿಮಾ ಶೂಟಿಂಗ್ ನಲ್ಲಿ ಕಣಿಸಿಕೊಳ್ಳುತ್ತಿಲ್ಲ.
ಈ ನಡುವೆ ಶ್ರೀಲೀಲಾ ಮಾತ್ರ ತೆಲಗುವಿನಲ್ಲಿ ತಮ್ಮ ನೆಲೆಯನ್ನು ಗಟ್ಟಿಯಾಗಿಸಿಕೊಳ್ಳುತ್ತಿದ್ದಾರೆ. ಚಂದನವನದಲ್ಲಿ ಕಿಸ್ ಸಿನಿಮಾದ ಮೂಲಕ ನಟನಾರಂಗಕ್ಕೆ ಪ್ರವೇಶ ಮಾಡಿದ ಶ್ರೀಲೀಲಾ ಭರಾಟೆ ಬೈಟು ಲವ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ತೆಲುಗು ಸಿನಿಮಾದಲ್ಲಿ ಬಂದಿರುವ ಅವಕಾಶಗಳನ್ನು ನೋಡಿದರೆ ಅವರು ಇನ್ಮುಂದೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯೇ ಸೆಟಲ್ ಆಗುವ ಸೂಚನೆ ಇದೆ.
ಹೌದು, ಪೆಳ್ಳಿ ಸಂದಡಿ ಎನ್ನುವ ತೆಲುಗು ಚಿತ್ರದ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪರಿಚಯವಾದರೂ ಶ್ರೀಲೀಲ. ಹಲವು ಸಿನಿಮಾಗಳಲ್ಲಿ ನಟಿಸಲು ಶ್ರೀ ಲೀಲಾ ಕಾಲ್ ಶೀಟ್ ನೀಡಿದ್ದಾರೆ. ಸುಮಾರು ಏಳುಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅವರ ಪ್ರಾಜೆಕ್ಟ್ ಲಿಸ್ಟ್ ನೋಡಿದ್ರೆ ಸುಮಾರು ಎರಡರಿಂದ ಮೂರು ವರ್ಷಗಳಂತೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿರೋದು ಗ್ಯಾರಂಟಿ.
ಮಹೇಶ್ ಬಾಬು ಹಾಗೂ ತ್ರಿವಿಕ್ರಮ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಧಮಾಕಾ, ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇನಿ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ, ನಿತಿನ್ ಅಭಿನಯದ ಅವರ 32ನೇ ಚಿತ್ರ, ನಟ ವೈಷ್ಣವಿ ತೇಜ ಅವರ ನಾಲ್ಕನೆಯ ಸಿನಿಮಾ, ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾ ಆಗಿರುವ ಅನಗನಗಾ ಒಕ ರೋಜು, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ.
ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಭರಾಟೆ ಆರಂಭಿಸಿರುವ ಶ್ರೀಲೀಲಾ ಅವರ ಸಿನಿಮಾಗಳು, ಹಿಟ್ ಅದರಂತೂ ಉಳಿದ ಸ್ಟಾರ್ ನಟಿಯರು ಮೂಲೆಗುಂಪಾಗುವುದು ಖಂಡಿತ. ಈ ಸುದ್ದಿ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.