ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸಂಬಂಧ ಬಹಳ ಹಳೆಯದು. ತೆಲುಗು ನಿಂದ ಕನ್ನಡಕ್ಕೆ ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ಕಲಾವಿದರು ಹೋಗುವುದು ಸಹಜ. ಕನ್ನಡದ ನಟಿ ಪವಿತ್ರ ಲೋಕೇಶ್ ಕೂಡ ಇದಕ್ಕೆ ಹೊರತಾಗಿಲ್ಲ. ನಟಿ ಪವಿತ್ರಾ ಲೋಕೇಶ್ ಇದುವರೆಗೆ ಕನ್ನಡದಲ್ಲಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಮಿಂಚಿದ್ದಾರೆ. ಇಂದಿಗೂ ಪೋಷಕ ನಟಿಯಾಗಿ ಸಾಕಷ್ಟು ಬೇಡಿಕೆಯಿದೆ ನಟಿ ಪವಿತ್ರ ಲೋಕೇಶ್ ಅವರಿಗೆ.
ನಟಿ ಪವಿತ್ರ ಲೋಕೇಶ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಎಲ್ಲಾ ಭಾಷೆಗಳಲ್ಲಿಯೂ ಅಭಿನಯಿಸಿದ್ದಾರೆ ಅದರಲ್ಲೂ ತೆಲುಗುನಲ್ಲಿ ಈಗಲೂ ಸಕ್ರಿಯವಾಗಿರುವ ನಟಿ ಪವಿತ್ರ ಲೋಕೇಶ್. ಪವಿತ್ರ ಲೋಕೇಶ್ ಅವರು ತೆಲುಗುವಿನ ಫೇಮಸ್ ನಟ ಹಾಗೂ ಶ್ರೀಮಂತ ವ್ಯಕ್ತಿಯು ಆಗಿರುವ ನರೇಶ್ ಬಾಬು ಅವರ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟನೆಯಲ್ಲಿ ಜೊತೆಯಾದ ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ನಿಜ ಜೀವನದಲ್ಲಿಯೂ ಒಂದಾಗಿದ್ದು ಅವರ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣವೂ ಇದೆ. ಟಾಲಿವುಡ್ ನಲ್ಲಿ ಅತ್ಯಂತ ಫೇಮಸ್ ಆಗಿದ್ದ ಕೃಷ್ಣ ಅವರ ಎರಡನೇ ಪತ್ನಿ ವಿಜಯ ಅವರ ಮಗ ನರೇಶ್ ಬಾಬು. ಕೊಟ್ಯಧಿಪತಿ ಆಗಿರುವ ನರೇಶ್ ಬಾಬು ಈಗಾಗಲೇ ಮೂರು ಮದುವೆಯನ್ನು ಆಗಿದ್ದಾರೆ.
ಇದೀಗ ನಾಲ್ಕನೇ ವಿವಾಹಕ್ಕೆ ಯೋಚನೆ ಮಾಡುತ್ತಿರುವುದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅದರಲ್ಲೂ ನಟಿ ಪವಿತ್ರ ಲೋಕೇಶ್ ಅವರ ಜೊತೆಗೆ ತುಸು ಹೆಚ್ಚಾಗಿಯೇ ಸ್ನೇಹ ಭಾಂದವ್ಯವನ್ನು ಹೊಂದಿದ್ದಾರೆ ನೋಟ ನರೇಶ ಹಾಗಾಗಿ ಇವರಿಬ್ಬರೂ ನಿಜ ಜೀವನದಲ್ಲಿ ಇನ್ನೇನು ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತದೆ ಯಾಕೆಂದರೆ ಇವರಿಬ್ಬರೂ ಸದ್ಯ ಜೀವನ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ಅವರಿಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಮ್ಯಾ ತಮ್ಮ ಜೀವನದಲ್ಲಿ ಪವಿತ್ರ ಲೋಕೇಶ್ ಹುಳಿ ಹಿಂಡುತ್ತಿದ್ದಾರೆ ಅಂತ ಮಾಧ್ಯಮದ ಮುಂದೆ ಗೋಳಾಡಿದ್ದಾರೆ. ಆದರೆ ಪವಿತ್ರ ಲೋಕೇಶ್ ಹಾಗೂ ನರೇಶ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದುಕೊಂಡೆ ತಿರುಗಾಡುತ್ತಿದ್ದಾರೆ. ಇನ್ನು ರವಿತೇಜ ಅವರ ‘ರಾಮ್ ರಾವ್ ಆನ್ ಡ್ಯುಟಿ’ ಸದ್ಯ ರಿಲೀಸ್ ಆಗಿದೆ.
ಈ ಸಿನಿಮಾದಲ್ಲಿ ನಟ ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ಇಬ್ಬರು ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಸ್ವಂತ ಸಹೋದರ ಸಹೋದರಿಯಾಗಿ ಅಭಿನಯಿಸಿದ್ದಾರೆ ಪವಿತ್ರ ಲೋಕೇಶ್ ಹಾಗೂ ನರೇಶ್. ಇದು ಹಲವರ ನಗೆ ಪಾಟಲಿಗೆ ಕಾರಣವಾಗಿದೆ. ನಿಜ ಜೀವನದಲ್ಲಿ ಮೊದಲು ಸ್ನೇಹಿತರು ಎಂದರು ಈಗ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.
ಆದರೆ ಸಿನಿಮಾದಲ್ಲಿ ಮಾತ್ರ ಅಣ್ಣ-ತಂಗಿಯಾಗಿ ನಟಿಸುತ್ತಿದ್ದಾರೆ ಅಂತ ನೆಟ್ಟಿಗರು ಈ ವಿಷಯವನ್ನು ಇಟ್ಟುಕೊಂಡು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಇವರಿಬ್ಬರೂ ಒಟ್ಟಾಗಿ ಜೀವನ ನಡೆಸುತ್ತಿದ್ದರು ತಾವೇಬರು ಸ್ನೇಹಿತರು ಎಂದು ಹೇಳಿಕೊಂಡು ಈಗಾಗಲೇ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಕನ್ನಡ ನಾಡಿನಲ್ಲಿಯೂ ಪವಿತ್ರ ಲೋಕೇಶ್ ಅವರಿಗೆ ಅತ್ಯುತ್ತಮ ಹೆಸರು ಇತ್ತು ಈಗ ಅವರ ಬಗ್ಗೆ ಕೆಲವರಿಗೆ ಅಸಮಾಧಾನ ಆಗಿದೆ. ಒಟ್ಟಿನಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ಕೋಟ್ಯಾಧಿಪತಿ ಆಗಿರುವ ನಟ ನರೇಶ ಬಾಬು ಅವರ ನಡುವೆ ಏನೋ ವಿಷಯ ಇರೋದಂತೂ ಸತ್ಯ!