ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಪಂಚಾಯಿತಿ ಕಟ್ಟೆ ಮುಗಿದಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಎಪಿಸೋಡ್ ಬಹಳ ವರ್ಣ ರಂಜಿತವಾಗಿತ್ತು. ನಂಬರ್ ಅಂದ್ರೆ ನಾನು ಅಂದ್ರೆ ನಂಬರ್ ಎಂದು ಸಂಖ್ಯಾಶಾಸ್ತ್ರವನ್ನು ಅರಿತಿರುವ ಆರ್ಯವರ್ಧನ ಗುರೂಜಿ ಇದೀಗ ಸಂಖ್ಯೆ ಮಾತ್ರವಲ್ಲ ಅಲ್ಲಿರುವ ಸ್ಪರ್ಧಿಗಳ ತುಟಿ, ಮೂಗು, ಹಲ್ಲು ಎಲ್ಲವನ್ನು ನೋಡಿ ಭವಿಷ್ಯ ಹೇಳಲು ಶುರು ಮಾಡಿದ್ದಾರೆ.
ಹೌದು ಗುರೂಜಿ ಅಂದುಕೊಂಡಂತೆ ಅವರು ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದರ ಜೊತೆಗೆ ಇದನ್ನು ನಾನು ಮೊದಲೇ ಊಹಿಸಿದ್ದೆ ಎಂದು ಕೂಡ ಹೇಳಿದ್ದಾರೆ. ಇನ್ನು ಕಳೆದ ವಾರ ಟಾಸ್ಕ್ ಸಂದರ್ಭದಲ್ಲಿ ಅಮೂಲ್ಯ ಅವರ ತುಟಿ ನೋಡಿ ಭವಿಷ್ಯ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯಿತಿ ಸಮಯದಲ್ಲಿ ಯಾರದ್ದಲ್ಲ ತುಟಿ ನೋಡಿ ಭವಿಷ್ಯ ಹೇಳಿದ್ದೀರಿ ಎಂದು ಪ್ರಶ್ನೆ ಕೇಳುತ್ತಾರೆ. ತುಟಿಯ ಭವಿಷ್ಯ ಶುರುಹಚ್ಚಿಕೊಂಡ ಆರ್ಯವರ್ಧನ್ ಅವರು ತುಟಿ ಮುಂದೆ ಚೂಪಾಗಿದ್ದರೆ ಅವರ ಕ್ಯಾರೆಕ್ಟರ್ ಹೇಳಬಹುದು.
ಹಾಗೆಯೇ ತುಟಿ ಚಪ್ಪಟೆಯಾಗಿದ್ದರೆ ಅವರಿಗೆ ಆಸೆ ಹೆಚ್ಚು ಎಂದು ಅರ್ಥ. ರಾಕೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಅವರ ತುಟಿ ಒಂದೇ ರೀತಿ ಆಗಿದೆ ಅವರಿಬ್ಬರಿಗೂ ಆಸೆ ಹೆಚ್ಚು ಎಂದಿದ್ದಾರೆ. ಇವಿಷ್ಟು ತುಟಿ ನೋಡಿ ಭವಿಷ್ಯವಾದರೆ ನಂತರ ಹಲ್ಲನ್ನು ನೋಡಿ ಕೂಡ ಭವಿಷ್ಯ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಸಾನಿಯಾ ಅವರ ಹಲ್ಲುಗಳನ್ನು ನೋಡಿ ಭವಿಷ್ಯ ಹೇಳಿ ಅಂದ್ರೆ ಅವರ ಹಲ್ಲುಗಳು ಕೆಳಗಡೆ ಚಿಕ್ಕದಾಗಿದೆ ಹಾಗಾಗಿ ಅವರು ಎಲ್ಲರನ್ನೂ ಆಕರ್ಷಿಸುತ್ತಾರೆ.
ದೊಡ್ಡ ದೊಡ್ಡ ಅಧಿಕಾರಿಗಳು ಅವರಿಗೆ ಪರಿಚಯವಿರುತ್ತಾರೆ. ಅದೇ ರೀತಿ ಕೋರೆಹಲ್ಲು ಇರುವವರು ಜಗಳಗಂಡಿಯರು ಎಂದು ಕೂಡ ಹೇಳಿದ್ದಾರೆ. ಅಲ್ಲದೆ ನನಗೆ ತುಟಿ ಶಾಸ್ತ್ರ ಹೇಳುವುದು ಗೊತ್ತು ಈಗಾಗಲೇ ನನ್ನ ಬಳಿ 3000 ಶಿಷ್ಯಂದಿರು ಕಲಿತಿದ್ದಾರೆ ಎಂದು ಆರ್ಯವರ್ಧನ್ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಇವರ ಭವಿಷ್ಯದ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಿದಾಗ ಸರ್ ಇದು ನಾಲ್ಕು ಗೋಡೆ ನಡುವೆ ಹೇಳುವ ಭವಿಷ್ಯ ಹೀಗೆ ಪಬ್ಲಿಕ್ ನಲ್ಲಿ ಹೇಳೋದಕ್ಕೆ ಆಗಲ್ಲ .
ನೀವೇ ಅರ್ಥಮಾಡಿಕೊಳ್ಳಿ ಎಂದು ಗುರೂಜಿ ಭವಿಷ್ಯದ ಮಾತನ್ನು ಹಾರಿಸಿ ಬಿಟ್ಟಿದ್ದಾರೆ. ಇತ್ತೀಚಿಗೆ ಗುರೂಜಿ ಹೇಳುವ ಮಾತುಗಳು ಯಾರಿಗೂ ಅರ್ಥವೇ ಆಗುವುದಿಲ್ಲ ಈಗ ಒಂದು ಹೇಳಿದರೆ ಇನ್ನೊಂದು ನಿಮಿಷಕ್ಕೆ ಬೇರೆಯದೆ ಹೇಳುತ್ತಾರೆ. ಬರಿ ಸ್ಪರ್ಧಿಗಳಿಗೆ ಮಾತ್ರವಲ್ಲ ಕಿಚ್ಚ ಸುದೀಪ್ ಅವರಿಗೂ ಆರ್ಯವರ್ಧನ್ ಗುರೂಜಿ ಹೇಳುತ್ತಿರುವ ಮಾತು ಅರ್ಥವಾಗುತ್ತಿಲ್ಲ. ಸ್ವತಃ ಕಿಚ್ಚ ಸುದೀಪ್ ಅವರೇ ನೀವು ಏನು ಹೇಳುತ್ತಿದ್ದೀರಿ ಎಂದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ.
ಎಲ್ಲದಕ್ಕೂ ಸರ್ ನೀವೇ ಅರ್ಥಮಾಡಿಕೊಳ್ಳಿ ಎಂದು ಗುರೂಜಿ ಹೇಳಿದರೆ ಸರ್ ಸೀಸನ್ ಸ್ಟಾರ್ಟ್ ಆದಾಗಿಂದ ನಾನು ಇದೇ ಪ್ರಯತ್ನದಲ್ಲಿದ್ದೇನೆ ಎಂದು ಕಿಚ್ಚ ಸುದೀಪ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನು ಆರ್ಯವರ್ಧನ್ ಗುರೂಜಿ ಅವರು ಸಾಮಾನ್ಯವಾಗಿ ಎಲ್ಲಾ ಘಟನೆಗಳು ನಡೆದ ನಂತರ ಇದು ನನಗೆ ಮೊದಲೇ ಗೊತ್ತಿತ್ತು ಎಂದು ಹೇಳುತ್ತಾರೆ. ಹಾಗಾಗಿ ಸರ್ ಈ ಸೀಸನ್ ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಹೇಳಿಬಿಡಿ ಎಂದು ಕಿಚ್ಚ ಸುದೀಪ್ ಗುರೂಜಿಯವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲರೂ ಸ್ವ ಪ್ರಯತ್ನದಿಂದ ಆಡುತ್ತಿದ್ದಾರೆ ಭವಿಷ್ಯ ಹೇಳಿ ಗೆಲ್ಲುವ ಹಾಗಿದ್ದರೆ ಉಳಿದವರ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತೆ. ಹಾಗಾಗಿ ಇಂತಹ ಮಾತುಗಳನ್ನು ಮತ್ತೆ ಆಡಬೇಡಿ ಎಂದಿದ್ದಾರೆ. ಕೊಟ್ಟಿನಲ್ಲಿ ಆರ್ಯವರ್ಧನ್ ಗುರೂಜಿ ತಾವು ಅಂದುಕೊಂಡಂತೆ ಹತ್ತನೇ ವಾರಕ್ಕೆ ಕಾಲಿಟ್ಟಿದ್ದು ಕ್ಯಾಪ್ಟನ್ ಕೂಡ ಆಗಿದ್ದಾರೆ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.