ಸದ್ಯ, ನಟ ಆಕ್ಷನ್ ಪ್ರಿನ್ಸ್ ಧ್ರುವ ಅವರ ಬಗ್ಗೆ ಹೆಚ್ಚಿನ ಮಾತು ಕೇಳಿ ಬರುತ್ತಿದೆ. ಯಾಕಂದ್ರೆ ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾದಲ್ಲಿ ಬ್ಯುಸಿ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೈಯಕ್ತಿಕ ಜೀವನದಲ್ಲಿಯೂ ಕೂಡ ಬಹಳ ಸಂತಸದ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಅವರಿಗೆ ಕನ್ನಡಿಗರ ಶುಭ ಹಾರೈಕೆ ಕೂಡ ಸಿಕ್ಕಿದೆ. ಹೌದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣ ಇದೀಗ ತಮ್ಮ ಪುಟ್ಟ ಕಂದಮ್ಮನ ಎದುರು ನೋಡುತ್ತಿದ್ದಾರೆ.
ಧ್ರುವ ಸರ್ಜಾ ಅವರು ಮನೆಯಲ್ಲಿ ಕೆಲವು ಸಾವು ನೋವುಗಳನ್ನು ನೋಡಿ ಬಹಳ ದುಃಖದಲ್ಲಿದ್ದರು ಅದರಿಂದ ಆಚೆ ಬಂದು ಇತ್ತೀಚಿಗಷ್ಟೇ ಸಿನಿಮಾದಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ ಇದರ ಜೊತೆಗೆ ಮನೆಯಲ್ಲಿ ಮನಸ್ಸಿಗೆ ಶಾಂತಿ ನೀಡುವಂತಹ ಹಾಗೂ ಎಲ್ಲರಿಗೂ ಖುಷಿಯಾಗುವಂತಹ ಘಟನೆಒಂದು ನಡೆಯಲಿದೆ. ಹೌದು ಪ್ರೇರಣ ಅವರು ತುಂಬು ಗರ್ಭಿಣಿ.
ಈಗಾಗಲೇ ಪ್ರೇರಣಾ ಹಾಗೂ ಧ್ರುವ ಸರ್ಜಾ ಇಬ್ಬರು ವಿಶೇಷವಾದ ಫೋಟೋ ಶೂಟ್ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪ್ರೇರಣ ಕೂಡ ಆಗಾಗ ಬೇಬಿ ಫೋಟೋ ಶೂಟ್ ಗಳನ್ನ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಳ್ಳುತ್ತಿದ್ದಾರೆ. ಪ್ರೇರಣ ಅವರ ಸೀಮಂತ ಶಾಸ್ತ್ರವನ್ನು ಕೂಡ ಬಹಳ ವಿಜೃಂಭಣೆಯಿಂದ ಧ್ರುವ ಸರ್ಜಾ ನೆರವೇರಿಸಿದ್ದಾರೆ ಇದಕ್ಕೆ ಸಾಕಷ್ಟು ಚಂದನವನದ ಕಲಾವಿದರು ಕೂಡ ಸಾಕ್ಷಿಯಾಗಿದ್ರು.
ಅಂದಹಾಗೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ರು ಕೂಡ ಧ್ರುವ ಸರ್ಜಾ ತಮ್ಮ ಗರ್ಭಿಣಿ ಪತ್ನಿಯ ಆಸೆಯನ್ನು ಈಡೇರಿಸುವಲ್ಲಿ ಹಿಂದೇಟು ಹಾಕುತ್ತಿಲ್ಲ. ಪ್ರೇರಣ ಅವರ ಎಲ್ಲೋ ಆಸೆಗಳನ್ನ ಈಡೇರಿಸುತ್ತಿದ್ದಾರೆ ಅಂದ ಹಾಗೆ ಇತ್ತೀಚಿಗೆ ಪ್ರೇರಣಾ ಅವರಿಗೆ ಹೊರಗಿನ ಫ್ರೆಶ್ ಗಾಳಿ ಸಿಗಬೇಕು ಹಾಗೂ ಪ್ರಾಣಿ ಪಕ್ಷಿಗಳ ಕಲರವ ಕೇಳಿದ್ರೆ ಮನಸ್ಸಿಗೂ ಖುಷಿಯಾಗುತ್ತೆ ಜೊತೆಗೆ ಹೊಟ್ಟೆಯಲ್ಲಿನ ಮಗುವಿನ ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಕಾರಣಕ್ಕೆ ತೋಟಕ್ಕೆ ಕರೆದುಕೊಂಡು ಹೋಗಿದ್ದರು ಧ್ರುವ ಸರ್ಜಾ.
ಹೌದು ಇದು ಗರ್ಭಿಣಿ ಮಹಿಳೆಯರಿಗೆ ಅತ್ಯಂತ ಅಗತ್ಯವಾದ ವಿಷಯ ಹಾಗಾಗಿ ತಾವು ತೋಟಕ್ಕೆ ಹೋದ ಫೋಟೋಗಳನ್ನ ಪ್ರೇರಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜೊತೆಗೆ ‘ಗರ್ಭಾವಸ್ಥೆ ಅನ್ನೋದು ಎಲ್ಲರಿಗೂ ಎಲ್ಲ ದಿನವೂ ಒಂದೇ ರೀತಿ ಇರುವುದಿಲ್ಲ ಅದು ದಿನ ಕಳೆದಂತೆ ನಿಮ್ಮನ್ನು ಹತ್ತಿರಕ್ಕೆ ಕರೆದುಕೊಂಡು ಹೋಗುತ್ತದೆ’ ಅಂತ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಪ್ರೇರಣ ಅವರ ಈ ಪೋಸ್ಟ್ ಗೆ ಸಾಕಷ್ಟು ಲೈಕ್ ಹಾಗೂ ಶುಭಾಶಯಗಳ ಕಮೆಂಟ್ ಗಳು ಬಂದಿವೆ. ಅಲ್ಲದೆ ಒಳ್ಳೆಯ ಹುಡುಗ ಪ್ರಥಮ್ ಕೂಡ ವಿಶೇಷವಾಗಿ ಪ್ರೇರಣ ಅವರಿಗೆ ವಿಶ್ ಮಾಡಿದ್ದಾರೆ ಕನ್ನಡಿಗರ ಹಾಗೂ ಶಿವನ ಆಶೀರ್ವಾದ ನಿಮ್ಮ ಮೇಲಿದೆ. ನಿಮಗೆ ಗಂಡು ಮಗು ಆದರೆ ಮನೆಯಲ್ಲಿ ಜಿಮ್ ಓಪನ್ ಮಾಡಿ ಅಂತ ಕಮೆಂಟ್ ಮಾಡಿದ್ದಾರೆ. ಹುಟ್ಟಿನಲ್ಲಿ ಪುಟ್ಟ ಕಂದಮ್ಮನನ್ನು ಎದುರು ನೋಡುತ್ತಿರುವ ಪ್ರೇರಣ ಹಾಗೂ ಧ್ರುವ ಸರ್ಜಾ ದಂಪತಿಗಳಿಗೆ ಸಾಕಷ್ಟು ಜನ ಶುಭ ಹಾರೈಸಿದ್ದಾರೆ. ನೀವು ಕೂಡ ತಪ್ಪದೇ ಪ್ರೇರಣಾ ಹಾಗೂ ಧ್ರುವ ಸರ್ಜಾ ಅವರಿಗೆ ವಿಶ್ ಮಾಡಿ ಕಮೆಂಟ್ ಮಾಡಿ.