ಇತ್ತೀಚಿಗೆ ಪೆಟ್ರೋಲ್ ಡೀಸೆಲ್ ಹಾಗೂ ಇತರ ಇಂಧನದ ಬೆಲೆ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಾಕಷ್ಟು ಚಿಂತೆಗೀಡಾಗಿದ್ದಾರೆ. ದಿನದಿಂದ ದಿನಕ್ಕೆ ಎಲ್ಲದರ ಬೆಲೆಯೂ ಗಗನಕ್ಕೆ ಏರುತ್ತಿದೆ. ಆದರೆ ಈ ನಡುವೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಇದರಿಂದಾಗಿ ಅಡುಗೆ ಮಾಡುವ ಹೆಂಗಳೆಯರಿಂದ ಹಿಡಿದು ಫುಡ್ ಇಂಡಸ್ಟ್ರಿಯವರೆಗೆ ಎಲ್ಲರಿಗೂ ತುಸು ನೆಮ್ಮದಿ ಎನಿಸಿದೆ.
ಹೌದು, ಈ ತಿಂಗಳ ಆರಂಭದಲ್ಲಿಯೇ ಸರ್ಕಾರ ಗುಡ್ ನ್ಯೂಸ್ ನೀಡಿದೆ ಅದುವೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಿಸಲಾಗಿದ್ದು ಬೆಲೆ ಇಳಿಕೆಯಾಗಿದೆ. ಹಾಗಾಗಿ ಜನರಿಗೆ ಸಿಕ್ಕಂತಾಗಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲಿಗೆ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಪರಿಷ್ಕರಿಸಿತ್ತವೆ. ಸದಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡೆ ಪರಿಶೀಲನೆ ಮಾಡಲಾಗುತ್ತದೆ.
ಅದೇ ರೀತಿ ೆಪ್ಟೆಂಬರ್ ಒಂದರಂದು ತೈಲ ಕಂಪನಿಗಳು ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದ್ದು ಮಾಡಲಾಗಿದೆ ಎಂದು ವರದಿಯಾಗಿದೆ. ಹೌದು, ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಇಳಿಕೆ ಮಾಡಿವೆ. ಇಂಡಿಯನ್ ಆಯಿಲ್ ಸೆಪ್ಟೆಂಬರ್ ಒಂದರಂದು ಅಂದರೆ ಇಂದು ಬೆಲೆಯನ್ನು ಬಿಡುಗಡೆ ಮಾಡಿದ್ದು ಇದರ ಪ್ರಕಾರ 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರ 91.5 ರೂಪಾಯಿಗಳಷ್ಟು ಕಡಿಮೆಯಾಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ವಾಣಿಜ್ಯ ಸಿಲಿಂಡರ್ ನ ಬೆಲೆ 1885 ರೂಪಾಯಿಗಳಷ್ಟಿದೆ. ಇತ್ತೀಚಿಗೆ ಇದರ ಬೆಲೆ 1976.50 ರೂಪಾಯಿಗಳಾಗಿತ್ತು. ಐದು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಮೇ ತಿಂಗಳಲ್ಲಿ 2354ರೂಪಾಯಿ ಗರಿಷ್ಠ ದಾಖಲೆ ಮೊತ್ತವನ್ನು ತಲುಪಿತ್ತು. ಅದರ ಬಳಿಕ ಕ್ರಮೇಣ ಹಂತ ಹಂತವಾಗಿ ಇಳಿಕೆಯಾಗುತ್ತಾ ಬರುತ್ತಿದೆ.
ದೆಹಲಿಯಲ್ಲಿ ಕಳೆದ ವಾರ 1976.50 ಆಗಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಇಂದು ಅಂದರೆ ಸೆಪ್ಟೆಂಬರ್ ಒಂದರಂದು 1885 ರೂಪಾಯಿಗಳಷ್ಟಾಗಿದೆ. ಕೊಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ನ ಬೆಲೆ 1995.50 ರೂಪಾಯಿಗೆ ಇಳಿದಿದೆ. ಇದು ಈ ಹಿಂದೆ 2095.50 ಗಳಷ್ಟಾಗಿತ್ತು. ಇನ್ನು ಚೆನ್ನೈನಲ್ಲಿ 20041 ರೂಪಾಯಿ ಇದ್ದ ಸಿಲಿಂಡರ್ ನ ಬೆಲೆ 2045 ಗೆ ಇಳಿಕೆಯಾಗಿದೆ.
ಅಂದಹಾಗೆ ಈ ಬಾರಿ ವಾಣಿಜ್ಯ ಸಿಲಿಂಡರ್‌ನ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದ್ದು ಗ್ರಹಬಳಕೆ ಸಿಲಿಂಡರ್ ನಲ್ಲಿ ಯಾವುದೇ ಬದಲಾವಣೆಯು ಇಲ್ಲ. 14.2 ಕೆಜಿ ಗ್ರಹ ಬಳಕೆಯ ಸಿಲಿಂಡರ್ ನ ಬೆಲೆ ಎಂದಿನಂತೆ ಇದೆ. ದೇಶಿಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆ ಸ್ಥಿರವಾಗಿದ್ದು, ಇವರಿಗೆ ಕೇವಲ ರೂ.50 ಮಾತ್ರ ಹೆಚ್ಚಳ ಕಂಡಿದೆ. ಈಗಿನ ಬೆಲೆಯನ್ನ ನೋಡುವುದಾದರೆ ಬೆಂಗಳೂರಿನಲ್ಲಿ ಗ್ರಹ ಬಳಕೆ ಎಲ್‌ಪಿಜಿ ಸಿಲಿಂಡರ್ ನ ಬೆಲೆ 1055 ರೂಪಾಯಿಗಳು.
ಇದೇ ಸಿಲಿಂಡರ್ ನ ಬೆಲೆ ದೆಹಲಿಯಲ್ಲಿ 1053 ರೂಪಾಯಿಗಳಾಗಿದ್ದರೆ ಮುಂಬೈನಲ್ಲಿ 1052.50 ರೂಪಾಯಿಗಳು ಮಾತ್ರ. ಚೆನ್ನೈ ನಲ್ಲಿ 1068.50 ಆಗಿದ್ದು ಕೆಲವು ಸಮಯದಿಂದ ಇದೇ ಬೆಲೆ ಮುಂದುವರೆದಿದೆ. ಇನ್ನು ಎಲ್ಪಿಜಿ ಸಿಲಿಂಡರ್ ನ ಬೆಲೆ ಕೊಲ್ಕತ್ತಾದಲ್ಲಿ 1079 ರೂಪಾಯಿ ಆಗಿದೆ. ಒಟ್ಟಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು ಗ್ರಾಹಕರಲ್ಲಿ ತುಸು ಸಮಾಧಾನ ತಂದಿದೆ ಎಂದು ಹೇಳಬಹುದು ಸ್ನೇಹಿತರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡಿ ಹಂಚಿಕೊಳ್ಳಿ.