Bollywood Actress : ಸಿನಿಮಾ ಸೆಲಿಬ್ರೆಟಿಗಳು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಬಾಲಿವುಡ್ (Bollywood) ನಟಿಯರು ಹೆಚ್ಚಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಗಾಸಿಪ್ (Gossip) ಗಳಿಗೆ ಗುರಿಯಾಗುತ್ತಾರೆ. ಇದೀಗ ನಟಿ ಇಲಿಯಾನಾ ಅವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಟಿ ಇಲಿಯಾನ ಡಿಕ್ರೂಸ್ ಬಹುಭಾಷಾ ನಟಿ ಈಗಾಗಲೇ ಸಾಕಷ್ಟು ಸಿನಿಮಾ (Film) ಗಳಲ್ಲಿ ಅಭಿನಯಿಸಿದ್ದಾರೆ ಸಾಕಷ್ಟು ಫಿಟ್ (Fit) ಆಗಿರುವ ಇಲಿಯಾನ ಯಾವಾಗಲೂ ಫಿಟ್ನೆಸ್ (Fittness) ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಇಲಿಯಾನ ಇತ್ತೀಚೆಗೆ ಜಿಮ್ (Gym) ಟ್ರೈನಿಂಗ್ ಮುಗಿಸಿ ರಸ್ತೆ ಬದಿಯಲ್ಲಿ ಚೌಕಾಸಿ ಮಾಡುತ್ತಾ ತರಕಾರಿ ತೆಗೆದುಕೊಳ್ಳಲು ನಿಂತಿರುವ ದೃಶ್ಯ ಪಾಪಾರಾಜಿಗಳ ಕ್ಯಾಮರಾ ಕಣ್ಣುಗಳಲ್ಲಿ ಸೆರಿಯಾಗಿತ್ತು.
ನಟಿ ಇಲಿಯಾನ ಡಿ ಕ್ರೂಸ್ ಅವರು ಮುಂಬೈ (Mubai)ನಲ್ಲಿ ಜನಿಸಿದವರು ತನ್ನ ಬಾಲ್ಯವನ್ನು ಗೋವಾ (Goa) ದಲ್ಲಿ ಕಳೆದರು 2006ರಲ್ಲಿ ತೆಲುಗು ಭಾಷೆಯಲ್ಲಿ ತೆರೆಕಂಡ ದೇವದಾಸು ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ನಂತರ ಪೋಕಿರಿ, ರಾಕಿ, ಮುನ್ನ, ಜಲ್ಸ, ಕಿಕ್, ಜುಲಾಯಿ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿ ಇಲಿಯಾನ ಡಿ ಕ್ರೂಸ್ ತಮಿಳು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಹೌದು 2006ರಲ್ಲಿ ಕೇಡಿ ಎಂಪ ಎನ್ನುವ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಹೀಗೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಜನಪ್ರಿಯತೆಯನ್ನು ಪಡೆದ ಇಲಿಯಾನ 2012ರಲ್ಲಿ ಅನುರಾಗ ಬಸ್ಸು ನಿರ್ದೇಶನದ ಬರ್ಫಿ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಈ ಮೂಲಕ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಬರ್ಫಿ ಸಿಕ್ಕಾಪಟ್ಟೆ ಹಿಟ್ ಕಂಡಿತ್ತು ಹಾಗಾಗಿ ಈ ಸಿನಿಮಾದ ನಂತರ ಇಲಿಯಾನಾಗೆ ಬೇಡಿಕೆಯೂ ಕೂಡ ಹೆಚ್ಚಾಯ್ತು ಹಾಗಾಗಿ ಬಾಲಿವುಡ್ ನಲ್ಲಿಯೇ ಸಾಕಷ್ಟು ಸಿನಿಮಾಗಳನ್ನ ಇಲಿಯಾನ ಮಾಡಿದ್ದಾರೆ.
ಇಂದು ತಮಿಳು ತೆಲುಗು ಚಿತ್ರರಂಗ ಮಾತ್ರವಲ್ಲದೆ ಹಿಂದಿ ಸಿನಿಮಾಗಳಲ್ಲಿಯೂ ಕೂಡ ಮಿಂಚುತ್ತಿರುವ ನಟಿ ಇಲಿಯಾನ ಇತ್ತೀಚಿಗೆ ತಾವು ಮುಗಿಸಿಕೊಂಡು ತರಕಾರಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ವಿಡಿಯೋ. ಇಲಿಯಾನಾಗೆ ಇದೀಗ 36 ವರ್ಷ ವಯಸ್ಸು ಅವರು ತಮ್ಮ ಆರೋಗ್ಯದ ಬಗ್ಗೆ ಹಾಗೂ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಮಾಡುತ್ತಾರೆ. ಹೀಗಾಗಿ ತಪ್ಪದೆ ವರ್ಕೌಟ್ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವಿಸುವುದು ಇಲಿಯಾನ ಅವರ ದಿನದ ರುಟೀನ್ ಅಂತೆ.
ಇಲಿಯಾನ ಬಿ ಕ್ರೋಸ್ ಜಿಮ್ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು ವೈರಲ್ ಆಗಿರುವ ಈ ವಿಡಿಯೋದಲ್ಲಿ ಚೆನ್ನಾಗಿ ಚೌಕಾಸಿ ಮಾಡುತ್ತಾರೆ ಎಂದು ವಿಡಿಯೋ ನೋಡಿದವರು ಕಮೆಂಟ್ ಮಾಡಿದ್ದಾರೆ. ಅಂದಹಾಗೆ ಜಿಮ್ ಸೂಟ್ ನಲ್ಲಿಯೇ ಇದ್ದ ಇಲಿಯಾನ ನೋಡುವುದಕಂತ ಕಾಣಿಸುತ್ತಿದ್ದರು. ನೀವು ಇಲಿಯಾನ ಅಭಿನಯದ ಸಿನಿಮಾಗಳನ್ನು ನೊಡಿದ್ದೀರಾ? ಹಾಗಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಮಾಡಿ ತಿಳಿಸಿ.