ಈ ಹಿಂದೆ ಹಚ್ಚೆ ಹಾಕಿಸಿಕೊಳ್ಳುವ ಪರಿಪಾಠವಿತ್ತು. ಸಣ್ಣ ಸೂಜಿಯಲ್ಲಿ ಕೆಲವು ಹೆಂಗಸರು ಮೈಮೇಲೆ ಹಣೆಯ ಮೇಲೆ ಕೈ ಮೇಲೆ ಚುಚ್ಚಿ ಹಚ್ಚೆ ಹಾಕುತ್ತಿದ್ದರು. ಹಸಿರು ಬಣ್ಣದಲ್ಲಿ ಈ ಟ್ಯಾಟು ಶಾಶ್ವತವಾಗಿ ಉಳಿಯುತ್ತಿತ್ತು. ಆದರೆ ಹೈಜಿನ್ ದೃಷ್ಟಿಯಿಂದ, ಹಾಗೂ ಇನ್ನಷ್ಟು ಫ್ಯಾಷನ್ ಲೇಬಲ್ ಆಗಿರುವ ಕಾರಣ ಟ್ಯಾಟು ಇಂದು ಬಹಳ ಫೇಮಸ್ ಆಗಿದೆ. ಅಲ್ಲದೆ ದೊಡ್ಡ ದೊಡ್ಡ ಶಾಪ್ ಗಳಲ್ಲಿ ಟ್ಯಾಟೂ ಹಾಕಿಸಲಾಗುತ್ತೆ ಜೊತೆಗೆ ಆಧುನಿಕ ತಂತ್ರಜ್ಞಾನದ ಕೂಡ ಇದರಲ್ಲಿ ಬಳಸಲಾಗುತ್ತದೆ.
ಹೆಚ್ಚು ನೋವಾಗದೆ ಇರುವ ಹಾಗೆ ಟ್ಯಾಟೂ ಹಾಕಿಸಲಾಗುತ್ತಿದೆ ಹಾಗಾಗಿ ಜನರಿಗೆ ಇಂದು ಟ್ಯಾಟೂ ಕ್ರೇಜ್ ಹೆಚ್ಚಾಗಿದೆ. ಸಿನಿಮಾ ದಾರಿಯರಿಂದ ಹಿಡಿದು ಸಾಮಾನ್ಯರ ವರೆಗೂ ಎಲ್ಲರೂ ತಮಗೆ ಬೇಕಾದ ಜಾಗದಲ್ಲಿ ಬೇಕಾದ ಡಿಸೈನ್ ನಲ್ಲಿ ಟ್ಯಾಟು ಹಾಕಿಸಿಕೊಳ್ಳುತ್ತಾರೆ. ತಮಗೆ ಇಷ್ಟವಾದ ಸ್ಟಾರ್ ನಟ ನಟಿಯರ ಫೋಟೋವನ್ನು ಅಥವಾ ಹೆಸರನ್ನು ಕೈ ಮೇಲೋ ಅಥವಾ ದೇಹದ ಇನ್ಯಾವುದೋ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಕ್ರೇಜಿ ಅಭಿಮಾನಿಗಳು ಇದ್ದಾರೆ.
ಇನ್ನು ಸಿನಿಮಾ ದಾರಿಯಲ್ಲಿ ಸಾಕಷ್ಟು ಜನ ತರಾವರಿ ಟ್ಯಾಟೂ ಹಾಕಿಸಿಕೊಂಡಿರುವುದನ್ನ ನೋಡಬಹುದು. ಕೈ ಮೇಲೆ, ಕಾಲಿನ ಮೇಲೆ, ಎದೆಯ ಮೇಲೆ ಹೀಗೆ ದೇಹದ ಬೇರೆ ಬೇರೆ ಭಾಗಗಳ ಮೇಲೆ ತಮಗಿಷ್ಟವಾದ ಟ್ಯಾಟು ಹಾಕಿಸಿಕೊಳ್ಳುವ ಅಭ್ಯಾಸ ಇಂದು ಜಾಸ್ತಿಯಾಗುತ್ತಿದೆ. ಆದರೆ ಕೆಲವರು ಹಾಕಿಸಿಕೊಂಡ ಟ್ಯಾಟೂ ಮಾತ್ರ ತುಂಬಾನೇ ಸುದ್ದಿ ಆಗುತ್ತೆ. ಸ್ಟಾರ್ ನಟಿ ಸಮಂತಾ ಅವರು ಎರಡು ಟ್ಯಾಟುಗಳನ್ನು ಹಾಕಿಸಿಕೊಂಡಿದ್ದಾರೆ ಅವರ ಟ್ಯಾಟೂ ಬಗ್ಗೆ ಸಾಕಷ್ಟು ಸುದ್ದಿ ಹಬ್ಬಿತ್ತು.
ಸಮಂತಾ ಅವರು ಹಾಕಿಸಿಕೊಂಡ ಟ್ಯಾಟೂ ಬಗ್ಗೆ ಹೇಳುವುದಾದರೆ ಅವರು ಕುತ್ತಿಗೆಯ ಹಿಂಭಾಗದಲ್ಲಿ ವೈ ಎಂ ಸಿ ಎಂದು ಬರೆಸಿಕೊಂಡಿದ್ದಾರೆ. ಇದು ಸಮಂತ ಅವರ ಮೊದಲ ತೆಲುಗು ಚಿತ್ರದ ಶಾರ್ಟ್ ಫಾರ್ಮ್. ಸಮಂತಾ ಅವರು ತೆಲುಗು ಭಾಷೆಯಲ್ಲಿ ಏ ಮಾಯೆ ಚೆಸಾವೆ ಎನ್ನುವ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಟ ನಾಗಚೈತನ್ಯ ಅವರ ಜೊತೆಗೆ ಮೊದಲ ಸಿನಿಮಾದಲ್ಲಿ ಅಭಿನಯಿಸಿದರು.
ಒಂದು ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ ಬಳಿಕ ಇವರಿಬ್ಬರ ನಡುವೆ ಸ್ನೇಹ, ಪ್ರೀತಿ ಬಾಂಧವ್ಯ ಬೆಳೆಯಿತು. ನಂತರ ಇವರಿಬ್ಬರೂ ಮದುವೆಯಾಗಿದ್ದು ಹಾಗೂ ಕೇವಲ ಎರಡು ವರ್ಷಗಳಲ್ಲಿ ವಿ-ಚ್ಛೇದನ ಪಡೆದುಕೊಂಡಿದ್ದು ನಿಮಗೆ ಗೊತ್ತೇ ಇದೆ. ಸಮಂತಾ ನಾಗಚೈತನ್ಯ ಅವರ ಪ್ರೀತಿಯಲ್ಲಿ ಬಿದ್ದ ಮೇಲೆ ತಮ್ಮ ಎದೆಯ ಕೆಳಭಾಗದಲ್ಲಿ ಅಂದರೆ ಸೊಂಟಕ್ಕಿಂತ ಸ್ವಲ್ಪ ಮೇಲೆ ಪಕ್ಕಲುಬಿನ ಮೇಲೆ ಚಾಯ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.
ತಮ್ಮ ಪ್ರೀತಿಗೆ ಸಾಕ್ಷಿಯಾಗಿ ಸಮಂತಾ ಈ ರೀತಿ ಟ್ಯಾಟು ಹಾಕಿಸಿಕೊಂಡಿದ್ದರು. ಸಮಂತಾ ತಮ್ಮ ವಿಚ್ಛೇದನದ ನಂತರ ಈ ಟ್ಯಾಟು ಎಲ್ಲವನ್ನು ತೆಗೆಸಿ ಬಿಡುತ್ತಾರೆ ಎನ್ನುವ ವದಂತಿ ಹರಡಿತು. ಆದರೆ ಸಮಂತಾ ಇಂದಿಗೂ ಟ್ಯಾಟುವನ್ನು ಹಾಗೆ ಇಟ್ಟುಕೊಂಡಿದ್ದಾರೆ. ಇದರಿಂದ ಚಾಯ್ ಹಾಗೂ ಸ್ಯಾಮ್ ಮತ್ತೆ ಒಂದಾಗುತ್ತಾರಾ? ಇವರಿಬ್ಬರ ನಡುವೆ ಪ್ರೀತಿ ಇನ್ನು ಕೊನೆಗೊಂಡಿಲ್ವ ಅನ್ನೋದು ಆಸೆ ಮತ್ತು ಕೂತೂಹಲ.
ಸಾಮಾನ್ಯವಾಗಿ ನಟಿಯರು ಮದುವೆಯಾದ ನಂತರ ಅವರ ಕೆರಿಯರ್ ಗೆ ಫುಲ್ ಸ್ಟಾಪ್ ಇಡುತ್ತಾರೆ ಆದರೆ ಸಮಂತ ವಿಷಯದಲ್ಲಿ ಇದು ವಿರುದ್ಧವಾಗಿತ್ತು ಅವರು ಮದುವೆಯಾದ ನಂತರವೂ ಅಭಿನಯದಲ್ಲಿ ಮುಂದುವರೆದರು. ಈಗಂತೂ ವಿ-ಚ್ಛೇದನವೇ ಆಗಿದೆ. ತನ್ನ ವೈಯಕ್ತಿಕ ಜೀವನ ಹೀಗಾಯ್ತು ಅಂತ ಸಮಂತಾ ತಲೆಕೆಡಿಸಿಕೊಂಡಿಲ್ಲ ಅವರು ಇತ್ತೀಚಿಗೆ ಇನ್ನಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಮೂಲಕ ಬಹು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸೌತ್ ಸ್ಟಾರ್ ಎನಿಸಿದ್ದಾರೆ. ಇಂದು ಬಾಲಿವುಡ್ ನಲ್ಲಿಯೂ ಕೂಡ ಸಮಂತಾ ಅವರ ಹವಾ ಜೋರಾಗಿದೆ.