ಒಂದು ಮದುವೆ ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತೆ ಎನ್ನುವ ಮಾತಿದೆ ಒಬ್ಬ ಗಂಡು ಹಾಗೂ ಹೆಣ್ಣು ಪರಸ್ಪರ ಒಪ್ಪಿ ಪ್ರೀತಿಸಿ ಮದುವೆಯಾಗುತ್ತಾರೆ ಆದರೆ ಇಂತಹ ಸಂಬಂಧಗಳು ಕೂಡ ದೇವರಿಂದಲೇ ಇರುವುದು ಅಂತ ಹೇಳಲ್ಪಡುತ್ತದೆ ಎಂದು ಪಾಲಕರೇ ನೋಡಿ ಇಷ್ಟಪಟ್ಟು ವಧುವಿಗೆ ವರನನ್ನು ತಂದು ಮದುವೆ ಮಾಡುತ್ತಾರೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಒಂದು ಗಂಡು ಹಾಗೂ ಹೆಣ್ಣು ಪರಸ್ಪರ ಒಪ್ಪಿ, ತಾಳಿ ಕಟ್ಟಿ ಮದುವೆಯಾದ ನಂತರ ಜೀವನಪರ್ಯಂತ ಒಟ್ಟಾಗಿಯೇ ಜೀವನ ನಡೆಸಬೇಕು.
ಹೌದು, ಸಂಸಾರ ಅಂದರೆ ಹಾಗೇನೆ ಪರಸ್ಪರ ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದು ಒಮ್ಮೆ ಮದುವೆಯಾದರೆ ಮುಗೀತು ನಂತರ ಜೀವನ ಪರ್ಯಂತ ಒಟ್ಟಾಗಿ ಗಂಡ ಹೆಂಡತಿ ಜೀವನ ಮಾಡಬೇಕು ಜೀವನದಲ್ಲಿ ಬರುವ ಕಷ್ಟ ಸುಖ ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಬದುಕು ನಡೆಸಬೇಕು. ಇದೇ ಸಂಸಾರದ ಸಾರ. ಒಂದು ಪಕ್ಷ ಅರೆಂಜ್ಡ್ ಮ್ಯಾರೇಜ್ ನಲ್ಲಿ ಜಗಳ, ಕಲಹ ಸಾಮಾನ್ಯ ಅಂತ ಹೇಳಬಹುದು ಹಾಗಾಗಿ ಇಬ್ಬರ ಆಸಕ್ತಿಗಳ ನಡುವೆ ಆಸೆಗಳ ನಡುವೆ ವ್ಯತ್ಯಾಸವಿರುತ್ತದೆ ಅಷ್ಟು ಸುಲಭವಲ್ಲ.
ಆದರೆ ವಿಶೇಷ ಅಂದರೆ ಇಬ್ಬರು ಪ್ರೀತಿಸಿ ಮದುವೆಯಾದ ದಂಪತಿಗಳೇ ವಿ-ಚ್ಛೇಧನದ ಮೊರೆ ಹೋಗುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಇನ್ನು ಕೆಲವು ಹೆಣ್ಣು ಮಕ್ಕಳು ಸುಲಭವಾಗಿ ಸಂಬಂಧವನ್ನು ಕಡಿದುಕೊಂಡು ಬಿಡುತ್ತಾರೆ. ನನಗೆ ಆತ ಇಷ್ಟ ಇಲ್ಲ ಅಂತ ವಿ-ಚ್ಛೇದನದ ಮೊರೆ ಹೋಗುತ್ತಾರೆ. ಇನ್ನು ಸೆಲೆಬ್ರಿಟಿಗಳ ಜೀವನ ನೋಡಿದರಂತೂ ಯಾವಾಗಲೂ ವಿ-ಚ್ಛೇಧನದ ಮಾತು ಕೇಳಿ ಬರುತ್ತೆ ಮದುವೆಯಾಗಿ ಕೆಲವೇ ಸಮಯವು ಕೂಡ ಜೊತೆಗೆ ಇರಲಾರದಷ್ಟು ನಡುವಿನ ಸಂಬಂಧ ಕೆಟ್ಟು ಹೋಗುತ್ತೆ.
ಹಾಗಾಗಿ ಸಿಲ್ಲಿ ಕಾರಣಗಳಿಗೆಲ್ಲ ವಿ-ಚ್ಛೇದನ ಪಡೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ವಿ-ಚ್ಛೇದನಕ್ಕೆ ನಿಜವಾದ ಕಾರಣ ಇರುತ್ತೆ ಉದಾಹರಣೆಗೆ ಗಂಡ ಅಥವಾ ಹೆಂಡತಿ ಅನೈತಿಕ ಸಂಬಂಧದಲ್ಲಿ ಇರುವುದು ಅಥವಾ ವರದಕ್ಷಿಣೆಯ ಕಿರುಕುಳ ನೀಡುವುದು. ಹೀಗೆ ವರದಕ್ಷಿಣೆಯ ಕಿರುಕುಳದಿಂದ ವಿ-ಚ್ಛೇದನಕ್ಕೆ ಒಳಗಾದವರು ಸಾಕಷ್ಟು ಜನರಿದ್ದಾರೆ ಯಾಕೆಂದರೆ ಅದು ಸಹಿಸಲಾಗದಷ್ಟು ದೊಡ್ಡ ಹಿಂಸೆ ಹೆಣ್ಣು ಮಕ್ಕಳು ಎಷ್ಟೇ ಕಷ್ಟಪಟ್ಟು ಒಟ್ಟಿಗೆ ಸಂಸಾರ ಸರಿ ತೂಗಿಸಿಕೊಂಡು ಹೋಗಬೇಕು ಎಂದು ಭಾವಿಸಿದರು ವ’ರದಕ್ಷಿಣೆಯ ಕಾ’ಟ ಸಹಿಸಿಕೊಳ್ಳುವುದು ಮಾತ್ರ ಬಹಳ ಕಷ್ಟ ಹಾಗಾಗಿ ಇಂಥವರು ಡಿ-ವೋರ್ಸ್ ನ ಮೊರೆ ಹೋಗುವುದು ಸಾಮಾನ್ಯ.
ಸ್ನೇಹಿತರೆ ವಿಚ್ಛೇಧಿತ ಮಹಿಳೆಗೆ ಜೀವನ ನೀಡುವುದು ಬಹಳ ಅಮೂಲ್ಯವಾದ ವಿಚಾರ. ಎಷ್ಟೋ ಬಾರಿ ವಿ-ಚ್ಛೇದಿತ ಮಹಿಳೆ ಮತ್ತೆ ಮದುವೆಯಾದರೆ ಜನ ಆಡಿಕೊಳ್ಳುತ್ತಾರೆ ಆಕೆಗೆ ಎರಡನೆ ಮದುವೆ ಎಂದು ನಿಂದಿಸುತ್ತಾರೆ ಆದರೆ ಒಂದು ವೇಳೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಿ-ಚ್ಛೇದನ ಪಡೆದು ಒಂಟಿಯಾಗಿ ಬದುಕುತ್ತಿರುವ ಮಹಿಳೆಗೆ ಜೀವನ ಕೊಟ್ಟರೆ ಅಂತ ವ್ಯಕ್ತಿಯ ಜೀವನ ನಿಜಕ್ಕೂ ಹಾಲು ಜೇನಿನಂತೆ ಇರುತ್ತೆ.
ಯಾಕಂದ್ರೆ ಈಗಾಗಲೇ ಒಂದು ಸಂಸಾರ ನಡೆಸಿರುವ ಮಹಿಳೆಗೆ ಗಂಡನ ಮನೆ ಹೇಗಿರುತ್ತೆ ಅಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಗಂಡನ ಮನೆಯವರ ಜೊತೆ ಹೇಗೆ ವರ್ತಿಸಬೇಕು ಜೀವನದ ಬಂಡಿಯನ್ನು ಹೇಗೆ ಸರಿದೂಗಿಸಬೇಕು ಎನ್ನುವ ಪರಿಕಲ್ಪನೆ ಇರುತ್ತೆ. ಅಲ್ಲದೆ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವ ಅರಿವು ಅವರಲ್ಲಿ ಇರುತ್ತೆ. ಹಾಗಾಗಿ ಮೊದಲನೆಯ ಮದುವೆಯಲ್ಲಿ ನಡೆದ ಯಾವ ತಪ್ಪು ಎರಡನೇ ಮದುವೆಯಲ್ಲಿ ಆಗದಂತೆ ನಿಗಾವಸುತ್ತಾರೆ. ಗಂಡನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಹಾಗಾಗಿ ವಿಚ್ಛೇದಿತ ಮಹಿಳೆ ನಿಮ್ಮ ಜೀವನದಲ್ಲಿ ಬರುವ ಹಾಗಿದ್ದರೆ ಖಂಡಿತ ಅದಕ್ಕೆ ಅಸ್ತು ಅನ್ನಿ!