ಕನ್ನಡ ಚಿತ್ರರಂಗದಲ್ಲಿ ಎಲ್ಲಿ ನೋಡಿದರೂ ಕ್ರಾಂತಿ ಹಾಗೂ ಡಿ ಬಾಸ್ ನಅಬ್ಬರ ಜೋರಾಗಿದೆ. ಕ್ರಾಂತಿ ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ ಸೆಪ್ಟೆಂಬರ್ ನಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ದೂರದ ಪೋಲೆಂಡ್ ನಲ್ಲಿಯೂ ಚಿತ್ರದ ಹಾಡುಗಳನ್ನು ಹಾಗೂ ಕೆಲವು ಸನ್ನಿವೇಶಗಳನ್ನು ಶೂಟ್ ಮಾಡಲಾಗಿತ್ತು. ಈ ಬಗ್ಗೆ ಡಿ ಬಾಸ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇನ್ನು ಈ ಸಿನಿಮಾ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ.
ಆದರೆ ಚಿತ್ರದ ಬಿಡುಗಡೆಗೂ ಮೊದಲೇ ಚಿತ್ರದ ಪ್ರಮೋಷನ್ ನ್ ನೋಡಿದ್ರೆ ಇತರ ಭಾಷೆಯ ಸಿನಿ ಪ್ರಿಯರು ಕೂಡ ಅಟ್ರಾಕ್ಟ್ ಆಗೋದ್ರಲ್ಲಿ ನೋ ಡೌಟ್. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೆ ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಲ್ಲಾ ಚಿತ್ರಗಳು ಇದುವರೆಗೆ ಬಹಳ ಯಶಸ್ಸನ್ನು ಕಂಡಿವೆ. ಇದಕ್ಕೆ ಅವರ ನಟನ ಕೌಶಲ್ಯವೇ ಮುಖ್ಯ ಕಾರಣ.
ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವ ನಟ ದರ್ಶನ್ ನಿಜಕ್ಕೂ ನಿಜ ಜೀವನದಲ್ಲಿಯೂ ಕೂಡ ಒಬ್ಬ ಹೀರೋವೇ ಹಾಗಾಗಿ ಅವರ ಅಭಿಮಾನಿಗಳು ದಿನದಿಂದ ದಿನಕ್ಕೆ, ಸಾವಿರದಿಂದ ಲಕ್ಷಕ್ಕೆ, ಲಕ್ಷದಿಂದ ಕೋಟಿಗೆ ಏರುತಲೆ ಇದ್ದಾರೆ. ಕೇವಲ ಕರುನಾಡಿನಲ್ಲಿ ಮಾತ್ರವಲ್ಲ ಡಿ ಬಾಸ್ ಕ್ರೇಜ್ ವಿದೇಶದವರೆಗೂ ಮುಟ್ಟಿದೆ. ಇನ್ನು ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನದಲ್ಲಿ ಇರುವವರು ಕುಳಿತು ದರ್ಶನ್ ಅವರ ಸಿನಿಮಾನ ನೋಡಿ ಮೆಚ್ಚಿಕೊಳ್ಳುತ್ತಾರೆ.
ಅಂದ್ರೆ ನೀವು ದರ್ಶನ್ ಅವರ ಕೀರ್ತಿ ಎಷ್ಟರಮಟ್ಟಿಗೆ ಹಬ್ಬಿದೆ ಅನ್ನೋದನ್ನ ಊಹಿಸಿಕೊಳ್ಳಬಹುದು. ನಟ ದರ್ಶನ್ ಕೊಡುಗೈ ದಾನಿ ಕೂಡ. ಒಂದು ರೀತಿಯಲ್ಲಿ ನೋಡುವುದಾದರೆ ನಮ್ಮನ್ನಗಲಿದ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಬಹುತೇಕ ಒಂದೇ ರೀತಿ ಅಂತ ಹೇಳಬಹುದು ಯಾಕೆಂದರೆ ಅವರು ಇದುವರೆಗೆ ಮಾಡಿರುವ ಯಾವ ಸಹಾಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಆದರೆ ಮೌನವಾಗಿ ತೆರೆಯ ಹಿಂದೆ ನಾವು ಮಾಡುವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ.
ಹೀಗಾಗಿ ಕರುನಾಡಿನಲ್ಲಿ ಡಿ ಬಾಸ್ ಎಂದರೆ ಜನಗಳಿಗೆ ಹುಚ್ಚು ಪ್ರೀತಿ ಹೆಚ್ಚು ಪ್ರೀತಿ! ಡಿ ಬಾಸ್ ಅವರನ್ನು ಮಾಧ್ಯಮಗಳು ಬ್ಯಾನ್ ಮಾಡಿವೆ ಎನ್ನುವ ಸುದ್ದಿ ರಾಜ್ಯದ್ಯಂತ ಹಬ್ಬಿದೆ. ಈ ಹಿಂದೆ ಕೆಲವು ಕಾರಣಗಳಿಗೆ ಮಾಧ್ಯಮಗಳ ನಡುವೆ ಹಾಗೂ ದರ್ಶನ್ ನಡುವೆ ಸಣ್ಣ ಕಸಿವಿಸಿ ಆಗಿತ್ತು. ಈ ಕಾರಣಕ್ಕಾಗಿ ದರ್ಶನ್ ಅವರ ಸಿನಿಮಾವನ್ನ ನಾವು ಪ್ರಮೋಟ್ ಮಾಡೋದಿಲ್ಲ ಅಂತ ಮಾಧ್ಯಮಗಳು ಹೇಳಿದ್ದವು.
ಆದರೆ ಅಭಿಮಾನಿ ದೇವರುಗಳು ತನ್ನ ಜೊತೆ ಇರುವಾಗ ತಾನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಅಂತ ಡಿ ಬಾಸ್ ಮಾತ್ರ ಸುಮ್ಮನಾಗಿದ್ದಾರೆ. ಇತ್ತ ಅವರ ಅಭಿಮಾನಿಗಳು, ಮಾಧ್ಯಮಗಳು ಪ್ರಚಾರ ಮಾಡದೆ ಇದ್ರೆ ಏನು, ನಾವೇ ಇಲ್ವಾ ಪ್ರಮೋಷನ್ ಮಾಡೋಕೆ ಅಂತ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಶುರು ಮಾಡಿದ್ದಾರೆ.ಇತ್ತೀಚಿಗೆ ಮಾಲೂರಿನಲ್ಲಿ ಡಿ ಬಾಸ್ ಅಭಿಮಾನಿಗಳು ಅತಿ ಎತ್ತರದಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರ ಮೂಲಕ ವಿಶಿಷ್ಟವಾಗಿ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮಾಡಿದ್ದಾರೆ.
ಜಾನಪದ ಶೈಲಿಯ ನೃತ್ಯ ಹಾಡು ಮೊದಲಾದವುಗಳ ಜೊತೆಗೆ ಡಿ ಬಾಸ್ ಸಿನಿಮಾ ಪ್ರಮೋಷನ್ ನಡೆಸಿದ್ದಾರೆ. ಅಲ್ಲದೆ ಇದು ಕೇವಲ ಆರಂಭ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ ಎಂದಿರುವ ದಾಸನ ಅಭಿಮಾನಿಗಳು ಇನ್ನಷ್ಟು ವಿಶೇಷವಾಗಿ, ವಿಶಿಷ್ಠವಾಗಿ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡಲು ಮುಂದಾಗಿದ್ದು ಖಂಡಿತ ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಕ್ರಾಂತಿಯನ್ನೇ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ.