ಸೋಶಿಯಲ್ ಮಿಡಿಯಾ ಸ್ಟಾರ್ ಅಂಜಲಿ ಅರೋರಾ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು. ಎರಡು ವರ್ಷಗಳ ಹಿಂದೆ ಒಂದು ಶಾರ್ಟ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದೇ ತಡ ರಾತ್ರಿ ಅಂಜಲಿ ಅರೋರ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಬಿಟ್ರು. ಮಾಡೆಲ್ ಹಾಗೂ ನಟಿ ಆಗಿರುವ ಅಂಜಲಿ ಅವರ ಕೇವಲ ಪಂಜಾಬಿ ಹುಡುಗರನ್ನ ಅಷ್ಟೇ ಅಲ್ಲ ಇತರ ಎಲ್ಲಾ ಭಾಷೆಯ ಹುಡುಗರ ನಿದ್ದೆ ಕೆಡಿಸಿದ ಸುಂದರಿ. ಇಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ರೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಫೇಮಸ್ ಆಗಬಹುದು. ಪರಿಚಯ ಆಗಬಹುದು.
ಅಂಜಲಿ ಅರೋರ ಚಿಕ್ಕ ವಯಸ್ಸಿನಿಂದಲೇ ಮಾಡಲಿಂಗ್ ನಟನೆ ಇವುಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಆದರೆ ಇವರಿಗೆ ಸರಿಯಾದ ವೇದಿಕೆ ಸಿಕ್ಕಿದೆ ಸೋಶಿಯಲ್ ಮೀಡಿಯಾದ ಮೂಲಕ. 22 ವರ್ಷದ ಪಂಜಾಬಿ ಬೆಡಗಿ ಅಂಜಲಿ ಅರೋರ ಇಷ್ಟು ಫೇಮಸ್ ಆಗಿದ್ದು ಅವರ ಡ್ಯಾನ್ಸ್ ವಿಡಿಯೋಗಳಿಂದ. ಈ ಹಿಂದೆ, ಅತ್ಯಂತ ಫೇಮಸ್ ಆಗಿದ್ದ ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿದ್ದ, ಕಚ್ಚಾ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿ ಅಂಜಲಿ ಅವರ ಸಾಕಷ್ಟು ಫೇಮಸ್ ಆದರು. ಅಂಜಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಅಂಜಲಿಯವರ ನೃತ್ಯಕ್ಕೆ, ಭಾವ ಭಂಗಿಗೆ ಫಿದಾ ಆಗದವರೇ ಇಲ್ಲ. ಅಂಜಲಿ ಅರೋರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 11 ಮಿಲಿಯನ್ ಗೂ ಹೆಚ್ಚು ಪೋಲೋವರ್ ಗಳನ್ನ ಹೊಂದಿದ್ದಾರೆ. ಈ ಹಿಂದೆ ಟಿಕ್ ಟಾಕ್ ಆಪ್ ನಲ್ಲಿ ಅಂಜಲಿ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆಗಲೇ ಅವರಿಗೆ ಅಭಿಮಾನಿಗಳ ಸಂಖ್ಯೆ ಬಹಳಷ್ಟಿತ್ತು. ಆನಂತರ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ವಿಡಿಯೋಗಳನ್ನು ಮಾಡುವುದಕ್ಕೆ ಶುರು ಮಾಡಿದ್ರು.
ಇತ್ತೀಚಿಗೆ ಕಂಗನಾ ರನೌವತ್ ಹೋಸ್ಟ್ ಮಾಡಿದ ’ಲಾಕ್ ಅಪ್’ ರಿಯಾಲಿಟಿ ಶೋ ದಲ್ಲಿಯೂ ಕೂಡ ಅಂಜಲಿ ಅರೋರ ಭಾಗವಹಿಸಿದ್ದರು. ಟಿಕ್ ಟಾಕ್ ನಿಂದ ಲಾಕ್ ಅಪ್ ವರಗೆ ತಮ್ಮ ಜರ್ನಿಯ ಬಗ್ಗೆ ಅಂಜಲಿ ಅರೋರ ಹೇಳಿಕೊಂಡಿದ್ದಾರೆ. ತಾನು ವಿಡಿಯೋ ಮಾಡೋದನ್ನ ನೋಡಿ ನಮ್ಮ ಸಂಬಂಧಿಗಳು ತಂದೆ ತಾಯಿಗೆ ಹೇಳಿದ್ರು. ಆದರೆ ನನ್ನ ತಂದೆ ತಾಯಿ ಯಾವಾಗಲೂ ನನಗೆ ಸಪೋರ್ಟೀವ್ಆಗಿ ಇರುತ್ತಾರೆ. ಹಾಗಾಗಿ ಇದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ ಅಂತ ಅಂಜಲಿ ಅರೋರ ಹೇಳಿದ್ದಾರೆ.
1951ರ ಕ್ಲಾಸಿಕ್ ಸಾಂಗ್ ಆಗಿದ್ದ ’ಸಯ್ಯಾ ದಿಲ್ ಮೆ ಆನಾರೆ’ ಹಾಡು ಈಗಲೂ ಹಲವರು ಗುನುಗುನಿಸುತ್ತಾರೆ. ಈ ಹಾಡಿನ ಅಪ್ ಟೆಂಪೋ ಆವೃತ್ತಿಗೆ ಅಂಜಲಿ ಅರೋರ ಸ್ಟೆಪ್ ಹಾಕಿದ್ದಾರೆ. ಮೂಲತಃ ಎಸ್ ಟಿ ಬರ್ಮನ್ ಮತ್ತು ಶಂಶಾದ್ ಬೇಗಂ ಹಾಡಿರುವ ಈ ಟ್ರ್ಯಾಕ್ ಅನ್ನು ಗೌರವ್ ಗುಪ್ತ ಹೊಸದಾಗಿ ಸಂಯೋಜನೆ ಮಾಡಿ ಶ್ರುತಿ ರಾಣೆ ಈ ಹಾಡನ್ನು ಹಾಡಿದ್ದಾರೆ. ಇನ್ನು ಪ್ರಿನ್ಸ್ ಗುಪ್ತ ಅವರ ಸುಂದರ ನೃತ್ಯ ಸಂಯೋಜನೆಯಲ್ಲಿ ಅಂಜಲಿ ಅರೋರ ಸ್ಟೆಪ್ ನೋಡಿದ್ರೆ ನಿಜಕ್ಕೂ ವಾವ್ ಅಂತೀರಿ.
ಅಂಜಲಿ ಅರೋರಾ ಇದುವರೆಗೆ ಸಾಕಷ್ಟು ಅಲ್ಬಂ ಸಾಂಗ್ ಗಳಲ್ಲಿ ನೃತ್ಯ ಮಾಡಿ ಸೈ ಎನಿಸಿಕೊಂಡವರು. ಅತ್ಯುತ್ತಮ ನೃತ್ಯ ಕಲೆ ಹೊಂದಿರುವ ಅಂಜಲಿ ಅರೋರಾ ಹಲವು ಫೇಮಸ್ ಗಾಯಕರೊಂದಿಗೆ ಅಲ್ಬಂ ಸಾಂಗ್ ಮಾಡಿದ್ದಾರೆ. ನಟನೆ, ಮಾಡೆಲಿಂಗ್ ಮಾತ್ರವಲ್ಲದೇ ಟ್ರಾವೆಲಿಂಗ್ ನ್ನೂ ಇಷ್ಟಪಡುವ ಅಂಜಲಿ ಅರೋರಾ ನಮ್ಮ ಪ್ರಯಾಣದ ಸಾಕಷ್ಟು ಪೋಟೋ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
View this post on Instagram