ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಅಮ್ಮನಂತೆ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದವರು. ಕನ್ನಡದಲ್ಲಿ ಹಲವಾರು ಉತ್ತಮ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ವಿನೋದ್ ರಾಜ್ ಅವರದ್ದು. ಇನ್ನು ವಿನೋದ್ ರಾಜ್ ಅವರ ವಿಶೇಷತೆ ಅಂದ್ರೆ ಅವರ ಡ್ಯಾನ್ಸ್. ಹೌದು. ಕನ್ನಡದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾದ ಅತ್ಯುತ್ತಮ ನೃತ್ಯಗಾರ ವಿನೋದ್ ರಾಜ್ ಅವರು.
ನಟ ವಿನೋದ್ ರಾಜ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಕಾಲದಲ್ಲಿ ಅವರನ್ನು ಮೀರಿಸುವ ನೃತ್ಯಗಾರರು ಬೇರೆ ಯಾರು ಇರಲಿಲ್ಲ. ಕನ್ನಡದ ಡ್ಯಾನ್ಸ್ ರಾಜ ಎಂದೇ ವಿನೋದ್ ರಾಜ್ ಅವರನ್ನು ಕರೆಯಲಾಗುತ್ತಿತ್ತು. ಆದರೆ ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಿಂದ ಇದ್ದಕ್ಕಿದ್ದ ಹಾಗೆ ದೂರ ಸರಿದರು. ಇವರ ಅನಾರೋಗ್ಯವೇ ಇವರು ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಮಾಡಿ ಕೊಡಲಿಲ್ಲ ಎಂದು ಹೇಳಲಾಗುತ್ತೆ.
ಹೌದು ವಿನೋದ್ ರಾಜ್ ಅವರು ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ಕೂಡ ಎದುರಿಸಿದ್ದಾರೆ. ಈ ಕಾರಣಕ್ಕಾಗಿ ಅವರು ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತೆ ಇನ್ನು ಕೆಲವು ಮೂಲಗಳ ಪ್ರಕಾರ ವಿನೋದ್ ರಾಜ್ ಅವರಿಗೆ ಬೇಕಂತಲೇ ಅವಕಾಶಗಳನ್ನು ನೀಡಲಿಲ್ಲ ಎಂಬ ಮಾತು ಕೂಡ ಇದೆ.
ನಟ ವಿನೋದ್ ರಾಜ್ ಅವರು ಇದೀಗ ತಾಯಿಯ ಜೊತೆ ಕೃಷಿ ಮಾಡಿಕೊಂಡು ತಮ್ಮ ಹಳ್ಳಿ ಮನೆಯಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ಲೀಲಾವತಿಯಮ್ಮ ಅವರ ಆರೋಗ್ಯವು ಕೂಡ ಜವಾಬ್ದಾರಿ ವಿನೋದ್ ರಾಜ್ ಅವರದೇ. ಇನ್ನು ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಲೀಲಾವತಿಯಮ್ಮ ಹಾಗೂ ವಿನೋದ್ ರಾಜ್ ಇಬ್ಬರು ಎತ್ತಿದ ಕೈ ಹಾಗಾಗಿ.
ಚೆನ್ನೈನಲ್ಲಿ ಲೀಲಾವತಿ ಅಮ್ಮ ತಮ್ಮ ಹೆಸರಿನಲ್ಲಿರುವ ಪ್ರಾಪರ್ಟಿಯನ್ನು ಮಾರಿ ಸೋಲದೇವನ ಹಳ್ಳಿಯಲ್ಲಿ ಬಡವರಿಗಾಗಿ ಒಂದು ಆಸ್ಪತ್ರೆಯನ್ನು ಕೂಡ ಕಟ್ಟಿಸಿದ್ದಾರೆ. ಇನ್ನು ವಿನೋದ್ ರಾಜ್ ಅವರು ಅಷ್ಟು ಉತ್ತಮ ಡ್ಯಾನ್ಸ್ ಬಲ್ಲವರಾಗಿದ್ದರು ಕೂಡ ಅವರನ್ನು ಯಾವ ಕನ್ನಡ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ತೀರ್ಪುಗಾರರಾಗಿ ಕರೆಯುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ.
ವಿನೋದ್ ರಾಜ್ ಅವರು ಬೆಂಗಳೂರನ್ನೇ ಬಿಟ್ಟು ಹಳ್ಳಿಯಲ್ಲಿ ಕೃಷಿಯಲ್ಲಿ ನಿರತರಾಗಿರುವುದಕ್ಕೂ ಒಂದು ಕಾರಣವಿದೆ. ಮುಖ್ಯವಾಗಿ ಲೀಲಾವತಿ ಎಂಬ ಅವರಿಗೆ ಕೃಷಿಯ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗಾಗಿ ಅಮ್ಮನಂತೆ ತಾವು ಕೂಡ ತಮ್ಮ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುವ ಮನಸ್ಸಿಗೆ ವಿನೋದ್ ರಾಜ್ ಕೃಷಿಯಲ್ಲಿ ತೊಡಗಿದರು. ಆದರೆ ದುರದೃಷ್ಟವಶಾತ್ ವಿನೋದ್ ರಾಜ್ ಅವರ ಕಾರ್ ಮೇಲೆ ಒಮ್ಮೆ ಅಟ್ಯಾಕ್ ಮಾಡಲಾಗಿತ್ತು ಅಲ್ಲದೆ ಅವರ ತೋಟಕ್ಕೆ ಬೆಂಕಿ ಹಚ್ಚಲಾಗಿತ್ತು.
ಆದರೂ ಛಲ ಬಿಡದ ವಿನೋದ್ ರಾಜ್ ಹಾಗೂ ಲೀಲಾವತಿ ಮತ್ತೆ ತಮ್ಮ ಕೃಷಿ ಭೂಮಿಯನ್ನು ಸಿದ್ಧಪಡಿಸಿದರು. 2012ರಲ್ಲಿ ವಿನೋದ್ ರಾಜ್ ಅವರ ಜಮೀನಿಗೆ ಮತ್ತೆ ಬೆಂಕಿ ಬಿತ್ತು. 2020 ರಲ್ಲಿ ವಿನೋದ್ ರಾಜ್ ಹೃದಯಘಾತ ಸಮಸ್ಯೆಯನ್ನು ಕೂಡ ಅನುಭವಿಸಿದ್ದರು. ಕಾಣದ ಕೈಗಳು ವಿನೋದ್ ರಾಜ್ ಹಾಗೂ ಲೀಲಾವತಿ ಅವರಿಗೆ ಸಾಕಷ್ಟು ಬಾರಿ ತೊಂದರೆ ಕೊಟ್ಟಿವೆ. ಆದರೂ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಇಬ್ಬರು ಜನರೇ ನಮಗೆ ಬೆಂಬಲ ಎಂದು ಹೇಳುತ್ತಾ ಈಗಲೂ ಕೃಷಿ ಭೂಮಿಯನ್ನು ನೋಡಿಕೊಂಡು ಜನ ಸೇವೆಯಲ್ಲಿ ನಿರತರಾಗಿದ್ದಾರೆ.