ಕನ್ನಡ ಚಿತ್ರರಂಗ ಸಾಕಷ್ಟು ತಾರೆಯರಿಗೆ ಅವಕಾಶಗಳನ್ನ ಒದಗಿಸಿದೆ ಆಳವಾಗಿ ಬೇರೂರುವುದಕ್ಕೂ ಸಹಾಯ ಮಾಡಿದೆ. ಆದರೆ ಕೆಲವು ನಾಯಕ ನಟಿಯರು ತಮ್ಮ ವೈಯಕ್ತಿಕ ಜೀವನದ ಕೆಲವು ಮುಖ್ಯ ಸಮಯದಲ್ಲಿ ಚಿತ್ರರಂಗವನ್ನು ತೊರೆದು ಹೆಚ್ಚು ಮಹತ್ವ ಕೊಡುತ್ತಾರೆ. ಸ್ಟಾರ್ ನಟಿ ಎನಿಸಿಕೊಂಡಿರುವ ಸಾಕಷ್ಟು ನಟಿಯರು ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅನುಭವಿಸುವುದಕ್ಕಾಗಿ ಚಿತ್ರರಂಗದಿಂದ ದೊಡ್ಡ ಬ್ರೇಕ್ ಪಡೆದುಕೊಂಡಿದ್ದ ನಟಿ ಶ್ವೇತಾ ಶ್ರೀವಾತ್ಸವ್.
ನಟಿ ಶ್ವೇತಾ ಶ್ರೀವಾತ್ಸವ ಕನ್ನಡಿಗರಿಗೆ ಚಿರಪರಿಚಿತ ನಟಿ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನೋಡುವುದಕ್ಕೂ ರಫ್ ಅಂಡ್ ರಫ್ ಆಗಿರುವ ಶ್ವೇತಾ ಶ್ರೀವಾತ್ಸವ್ ಸಾಕಷ್ಟು ಬೋಲ್ಡ್ ಆಗಿದ್ದಾರೆ. ಶ್ವೇತಾ ಶ್ರೀವಾತ್ಸವ್ ಬೆಂಗಳೂರಿನಲ್ಲಿಯೇ ಜನಿಸಿ ಇಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ರು.
ಮೀಡಿಯಾ ಸ್ಟಡಿ ಮಾಡಿರುವ ಶ್ವೇತಾ ಶ್ರೀವಾತ್ಸವ್ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಕನ್ನಡ, ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ ಹೆಗ್ಗಳಿಕೆ ಶ್ವೇತಾ ಶ್ರೀವಾತ್ಸವ ಅವರದ್ದು. 2013ರಲ್ಲಿ ತೆರೆಕಂಡ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಶ್ವೇತ ಶ್ರೀವಾತ್ಸವ ಅವರ ಬೇಡಿಕೆಯು ಹೆಚ್ಚಿತು.
ಇನ್ನು ಕನ್ನಡದಲ್ಲಿ ಟಾಪ್ ನಲ್ಲಿ ಇರುವಾಗಲೇ ಶ್ವೇತಾ ಶ್ರೀವಾತ್ಸವ್ ದೊಡ್ಡ ಬ್ರೇಕ್ ತೆಗೆದುಕೊಂಡ್ರು. ತಮ್ಮ ಪುಟ್ಟ ಮಗಳ ಜೊತೆ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ ಶ್ವೇತ. ಹೌದು ಶ್ವೇತಾ ಶ್ರೀವಾತ್ಸವ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಗೆ ಸಾಕಷ್ಟು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಆಧುನಿಕ ಉಡುಗೆಯಲ್ಲೂ ಮಿಂಚುವ ಶ್ವೇತ ಶ್ರೀವಾತ್ಸವ್ ತಮ್ಮ ಮಗಳ ಜೊತೆಗೆ ವಿವಿಧ ರೀತಿಯ ಡ್ರೆಸ್ ಮಾಡಿ ವಿಡಿಯೋಗಳನ್ನು ಮಾಡುತ್ತಾರೆ. ಇತ್ತೀಚಿಗೆ ಫಿಟ್ನೆಸ್ ಬಗ್ಗೆ ಶ್ವೇತ ಅವರು ಹೆಚ್ಚು ಗಮನಹರಿಸಿದಂತೆ ಕಾಣುತ್ತಿದೆ. ಹಾಗಾಗಿ ತಾವು ವರ್ಕ್ ಔಟ್ ಮಾಡುತ್ತಿರುವ ಸಾಕಷ್ಟು ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವಯಸ್ಸು 36 ದಾಟಿದ್ರು ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ ಶ್ವೇತ ಅವರು.
ಇತ್ತೀಚಿಗೆ ಟ್ರ್ಯಾಕ್ ಪ್ಯಾಂಟ್ ಹಾಗೂ ಲೂಸ್ ಆಗಿರುವ ಟೀ ಶರ್ಟ್ ಒಂದನ್ನು ಧರಿಸಿ, ಮ್ಯೂಸಿಕ್ ಒಂದಕ್ಕೆ ತಮ್ಮದೇ ಆದ ಸ್ಟೆಪ್ ಹಾಕಿದ್ರು ಶ್ವೇತ. ನಾನು ಇದರಲ್ಲಿ ಹಾಟ್ ಮಾಮ್ ಅಥವಾ ಕೂಲ್ ಮಾಮ್ ಯಾರು ಅಂತ ನಿಮಗೆ ಅನಿಸುತ್ತೆ ಅಂತ ಪೋಸ್ಟ್ ಹಾಕಿದ್ದರು. ಅಂದ ಹಾಗೆ ರಾಕ್ ಡ್ಯಾನ್ಸ್ ಮಾಡುತ್ತಾ ಕೊನೆಯಲ್ಲಿ ಟಿ-ಶರ್ಟ್ ತೆಗೆದು ತಮ್ಮ ಫಿಟ್ನೆಸ್ ಪ್ರದರ್ಶನ ಮಾಡಿದ್ದಾರೆ ಶ್ವೇತಾ ಶ್ರೀವಾತ್ಸವ್ ಅವರು.
ಇನ್ನು ಶ್ವೇತ ಅವರ ಈ ಡ್ಯಾನ್ಸ್ ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬಂದಿದ್ದು ಅಭಿಮಾನಿಗಳು ಶ್ವೇತಾ ಅವರ ದೇಹ ಸೌಂದರ್ಯ ನೋಡಿ ಹೌಹಾರಿದ್ದಾರೆ. ಈಗಲೂ ಎಷ್ಟು ಫಿಟ್ ಆಗಿದ್ದಾರೆ ನೋಡಿ ಅಂತ ಶ್ವೇತಾ ಅವರ ಪೋಸ್ಟ್ ಅನ್ನ ಸಾಕಷ್ಟು ಜನ ಶೇರ್ ಮಾಡಿದ್ದಾರೆ. ಇದೀಗ ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಟ್ಟಿರುವ ಶ್ವೇತ ಹೋಪ್ ಸಿನಿಮಾದ ನಂತರ ಇನ್ನೂ ಕೆಲವು ಸಿನಿಮಾಗಳ ಆಫರ್ ಗಳನ್ನು ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಿಂಪಲ್ ಸುಂದರಿಯ ಇನ್ನಷ್ಟು ಸಿನಿಮಾಗಳು ತೆರೆಗೆ ಬರಲಿವೆ.
View this post on Instagram