ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಮುಖಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನೆಪೋಟಿಸಂ ತುಸು ಹೆಚ್ಚಾಗಿಯೇ ಇರುವ ಬಾಲಿವುಡ್ ಇಂಡಸ್ಟ್ರಿಯಲ್ಲಿ ಖ್ಯಾತ ನಟ ನಟಿಯರ ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಬಹಳ ಕಾಮನ್. ಹೀಗೆ ಕಲೆಯ ಬ್ಯಾಗ್ರೌಂಡ್ ಇರುವ ಸಾಕಷ್ಟು ಯುವ ನಟ ನಟರನ್ನ ನಾವಿಂದು ಬಾಲಿವುಡ್ ನಲ್ಲಿ ಕಾಣಬಹುದು. ಅಂಥವರಲ್ಲಿ ಜಾಹ್ನವಿ ಕಪೂರ್ ಕೂಡ ಒಬ್ರು.
ಹೌದು ಜಾಹ್ನವಿ ಕಪೂರ್ ಇದೀಗ ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ ಬೋನಿ ಕಪೂರ್ ಹಾಗೂ ಖ್ಯಾತ ನಟಿ ದಿವಂಗತ ಶ್ರೀದೇವಿ ಅವರ ಹಿರಿಯ ಮಗಳು ಜಾಹ್ನವಿ ಕಪೂರ್. ರಾಜಕುಮಾರ್ ರಾವ್ ಹಾಗೂ ವರುಣ್ ಶರ್ಮಾ ಅವರ ಜೊತೆಗೆ ರೂಹಿ ಏನು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಅದರ ಯಶಸ್ಸು ಜಾನವಿ ಕಪೂರ್ ಅವರಿಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಜಾಹ್ನವಿ ಕಪೂರ್ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಜಾಹ್ನವಿ ಕಪೂರ್ ತೆಲುಗು ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾರ್ತಿಕ ಆರ್ಯನ್ ಅವರ ಜೊತೆ ‘ದೋಸ್ತಾನ 2’ ಎಂಬ ಸಿನಿಮಾದಲ್ಲಿ ಕೂಡ ಜಾಹ್ನವಿ ಕಪೂರ್ ಬಣ್ಣ ಹಚ್ಚಿದ್ದಾರೆ. ನಟಿ ಜಾಹ್ನವಿ ಕಪೂರ್ ಅಭಿನಯದ ‘ಗುಡ್ ಲಕ್ ಜೆರ್ರಿ’ ಸಿನಿಮಾ ಇತ್ತೀಚಿಗಷ್ಟೇ ತೆರೆಕಂಡು ಉತ್ತಮ ಪ್ರತಿಕ್ರಿಯೆ ಗಳಿಸಿದೆ.
ಇನ್ನು ಜಾಹ್ನವಿ ಕಪೂರ್ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ, ನೋಡುವುದಕ್ಕೂ ಮಾತನಾಡುವುದರಲ್ಲಿಯೂ ಬೋಲ್ಡ್ ಆಗಿದ್ದಾರೆ. ಜಾನ್ವಿ ಕಪೂರ್ ಇತರ ಸೆಲೆಬ್ರೇಟಿಗಳಂತೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ತಮ ಸಿನಿಮಾ ಪ್ರಮೋಶನ್ ಹೊರತುಪಡಿಸಿ ಸಾಕಷ್ಟು ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವುದಕ್ಕಾಗಿಯೇ ಮಾಡಿಸಿಕೊಳ್ಳುತ್ತಾರೆ ಜಾಹ್ನವಿ ಕಪೂರ್.
ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿರುವ ಜಾಹ್ನವಿ ಕಪೂರ್ ಇತ್ತೀಚಿಗೆ ತಾವು ಕ್ರಿಕೆಟ್ ನೆಟ್ ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೌದು, ಜಾಹ್ನವಿ ಕಪೂರ್, ಕ್ರಿಕೆಟ್ ನೆಟ್ ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಇದಾಗಿದ್ದು ಇದರಲ್ಲಿ ಕವರ್ ಡ್ರೈವ್ ಶಾಟ್ ಹೊಡೆಯುವ ರೀತಿಯನ್ನು ನೋಡಿ ನೆಟ್ಟಿಗರು ಜಾಹ್ನವಿ ಕಪೂರ್ ಅವರಿಗೆ ಫಿದಾ ಆಗಿದ್ದಾರೆ.
ಮುಂದಿನ ಟಿ20 ಕಪ್ ಗೆಲ್ಲಿಸುವವರು ಇವರೇ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟಿ ಜಾಹ್ನವಿ ಕಪೂರ್ ಸಿನಿಮಾ ಬಿಟ್ಟು ಕ್ರಿಕೆಟ್ ನಲ್ಲಿಯೇ ಮುಂದುವರಿಯಬಹುದು ಎನ್ನುವ ಕಮೆಂಟ್ ಗಳು ಕೂಡ ಬರುತ್ತವೆ. ಜಾನವಿ ಕಪೂರ್ ಅವರ ಸಖತ್ ಹಾಟ್ ಫೋಟೋಗಳನ್ನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು. ಇನ್ನು ತಮ್ಮ ವಿಶೇಷ, ವಿಚಿತ್ರ ಫೋಟೋಗಳಿಂದ ಜಾಹ್ನವಿ ಕಪೂರ್ ಕೆಲವೊಮ್ಮೆ ಟ್ರೋಲ್ ಗೂ ಕೂಡ ಗುರಿಯಾಗುತ್ತಾರೆ.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ಜಾಹ್ನವಿ ಕಪೂರ್ ತಮಗೆ ಹೇಗೆ ಬೇಕೋ ಹಾಗೆಯೇ ಡ್ರೆಸ್ ಮಾಡುತ್ತಾರೆ. ಜಾಹ್ನವಿ ಕಪೂರ್ ಅವರ ಇನ್ನಷ್ಟು ಹಾಟ್ ಫೋಟೋಗಳನ್ನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ನೋಡಬಹುದು. ಜಾಹ್ನವಿ ಕಪೂರ್ ಅವರು ಕ್ರಿಕೆಟ್ ಆಡುತ್ತಿರುವ ವೈರಲ್ ವಿಡಿಯೋ ವನ್ನು ನೀವು ನೋಡಬಹುದು.
View this post on Instagram