ಕನ್ನಡದ ಬಿಗ್ ಬಾಸ್ ಸೀಸನ್ 9 ಈಗಾಗಲೇ ಆರಂಭವಾಗಿದ್ದು ಟಾಸ್ಕ್ ಗಳು ಕೂಡ ಬಹಳ ವಿಭಿನ್ನವಾಗಿ ನಡೆಯುತ್ತಿದೆ. ಬಿಗ್ ಬಾಸ್ ಆರಂಭವಾದ ದಿನದಿಂದ ಟಾಸ್ಕ್ ಮೇಲೆ ಟಾಸ್ಕ್ ಮಾಡುತ್ತಿರುವ ಸ್ಪರ್ಧಿಗಳು ಈಗಾಗಲೇ ಗೆಲ್ಲುವ ಹಠ ತೊಟ್ಟಿದ್ದಾರೆ. ಯಾಕೆಂದರೆ ಎಲಿಮಿನೇಷನ್ ಬಿಸಿ ಮೊದಲ ವಾರವೇ ಎಲ್ಲರಿಗೂ ತಟ್ಟಲಿದೆ. ಹಾಗಾಗಿ ತಮ್ಮನು ತಾವು ಪ್ರೂಫ್ ಮಾಡಿಕೊಳ್ಳಲು ಹಳೆಯ ಹಾಗೂ ಹೊಸ ಬಿಗ್ ಬಾಸ್ ಸ್ಪರ್ಧಿಗಳು ಹೆಚ್ಚು ಎಫರ್ಟ್ ಹಾಕಿ ಬಿಗ್ ಬಾಸ್ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡುತ್ತಿದ್ದಾರೆ.
ಈಗಾಗಲೇ ಬಿಗ್ ಬಾಸ್ ನಲ್ಲಿ ಕೆಲವು ದಿನಗಳ ಕಾಲ ಇತರ ಸೀಸನ್ ಗಳಲ್ಲಿ ಇದ್ದ ಸ್ಪರ್ಧಿಗಳು ಕೂಡ ಈ ಬಾರಿ ಬಿಗ್ ಬಾಸ್ ನಲ್ಲಿ ಇರೋದು ಸ್ವಲ್ಪ ಮಟ್ಟಿಗೆ ಅವರಿಗೆ ಪ್ಲಸ್ ಕೂಡ ಆಗಬಹುದು. ಯಾಕಂದ್ರೆ ಯಾವುದೇ ಟಾಸ್ಕ್ ಮಾಡುವಾಗ ಅವರಿಗೆ ಹಿಂಜರಿಕೆ ಇರುವುದಿಲ್ಲ. ಹಾಗೆಯೇ ಅನುಪಮಾ ಗೌಡ ಕೂಡ ಬಹಳ ಕಾನ್ಫಿಡೆಂಟ್ ಆಗಿ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡುವಂತ ಹೆಚ್ಚಿನ ಗಮನಹರಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 5ನಲ್ಲಿದ್ದ ಅನುಪಮಾ ಗೌಡ ಇದೀಗ ಸೀಸನ್ 9ರಲ್ಲಿಯೂ ಕೂಡ ಭಾಗವಹಿಸುತ್ತಿದ್ದಾರೆ. ನಿನ್ನೆ ಜೋಡಿಗಳಾದ ಅರುಣ್ ಸಾಗರ್ ಹಾಗೂ ನವಾಜ್ ಮತ್ತು ನೇಹಾ ಗೌಡ ಹಾಗೂ ಅನುಪಮಾ ಗೌಡ ಅವರು ಹಗ್ಗದ ಗಂಟು ಬಿಡಿಸುವ ಟಾಸ್ಕ್ ಮಾಡಿದ್ರು. ಮೊದಲ ಟಾಸ್ಕ್ ನಲ್ಲಿ ಅನುಪಮಾ ಗೌಡ ಹಾಗೂ ನೇಹಾ ಸೋತಿದ್ದಾರೆ. ಇನ್ನು ಯಾರು ಸರಿಯಾಗಿ ಟಾಸ್ಕ್ ಕಂಪ್ಲೀಟ್ ಮಾಡುತ್ತಾರೆ ಎಂದು ಊಹಿಸುವ ಜೋಡಿ ಆರ್ಯವರ್ಧನ್ ಗುರೂಜಿ ಹಾಗೂ ದೃಶ್ ಚಂದ್ರಪ್ಪ ಅವರಿಗಾಗಿತ್ತು.
ಅವರ ಪ್ರಕಾರ ಅನುಪಮಾ ಗೌಡ ಹಾಗೂ ನೇಹಾ ಗೌಡ ಗೆಲ್ಲುತ್ತಾರೆ ಎಂಬುದಾಗಿತ್ತು ಆದರೆ ಮಾತ್ರ ಅರುಣ್ ಸಾಗರ್ ಹಾಗೂ ನವಾಜ್. ತಾನು ಟಾಸ್ಕ್ ಕಂಪ್ಲೀಟ್ ಮಾಡಲು ಸಾಧ್ಯವಾಗಲಿಲ್ಲ ಅಂತ ಅನುಪಮಾ ಗೌಡ ಅವರಿಗೆ ಬಹಳ ಬೇಸರವಾಗುತ್ತೆ ಎರಡನೇ ಬಾರಿ ಮತ್ತೊಂದು ಚಾನ್ಸ್ ಕೇಳುತ್ತಾರೆ ನಂತರ ಎರಡನೇ ಬಾರಿ ಗಂಟು ಬಿಡಿಸುವ ಟಾಸ್ಕ್ ಆರಂಭವಾಗುತ್ತೆ.
ಇದರಲ್ಲಿಯೂ ಅನುಪಮಾ ಗೌಡ ಹಾಗೂ ನೇಹಾ ಗೌಡ ಅವರು ಗಂಟು ಬಿಡಿಸುವ ಟಾಸ್ಕ್ ಮಾಡುತ್ತಾರೆ. ಈ ಬಾರಿ ಊಹಿಸುವ ಜವಾಬ್ದಾರಿ ಐಶ್ವರ್ಯ ಹಾಗೂ ದಿವ್ಯ ಉರುಡುಗ ಅವರದ್ದಾಗಿತ್ತು. ಅವರ ಪ್ರಕಾರ ನೇಹಾ ಗೌಡ ಹಾಗೂ ಅನುಪಮಾ ಗೌಡ ಗೆಲ್ಲುತ್ತಾರೆ ಎಂಬುದಾಗಿತ್ತು. ಅವರ ಊಹೆಯಂತೆ ಅನುಪಮಾ ಗೌಡ ಹಾಗೂ ನೇಹ ಅವರ ಜೋಡಿ ಎರಡನೇ ಬಾರಿ ಟಾಸ್ಕ್ ಗೆದ್ದಿದೆ.
ಇದರಿಂದ ದಿವ್ಯ ಉರುಡುಗ ಹಾಗೂ ಐಶ್ವರ್ಯ ಅವರಿಗೆ ಒಂದು ಪಾಯಿಂಟ್ ಕೂಡ ಲಭಿಸಿದೆ. ಅನುಪಮಾ ಗೌಡ 2ನೇ ಬಾರಿ ಗೆದ್ದಿದ್ದಕ್ಕೆ ಖುಷಿಯಿಂದ ಕಣ್ಣೀರು ಹಾಕುತ್ತಾರೆ. ಮೊದಲ ಬಾರಿಗೆ ಸೋತಿದ್ದಕ್ಕೆ ಅವರಿಗೆ ಬಹಳ ಬೇಸರವಾಗಿತ್ತು. ಇನ್ನು ಈ ರಾತ್ರಿ ವಿಷಯವಾಗಿ ಮಾತನಾಡಿದ ರೂಪೇಶ್ ರಾಜಣ್ಣ ಅನುಪಮಾ ಅವರ ಬಳಿ ನೀವು ಕಣ್ಣೀರು ಹಾಕುವ ಅಗತ್ಯ ಇರಲಿಲ್ಲ ಅಂತ ಮಾತನಾಡುತ್ತಾರೆ.
ಆಗ ಯಾರು ಎಮೋಷನ್ ಅನ್ನು ಅದುಮಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ನಾನು ನಗು ಬಂದಾಗ ನಗುತ್ತೇನೆ, ಅಳು ಬಂದಾಗ ಅಳುತ್ತೇನೆ. ಕೋಪ ಬಂದಾಗ ಅದನ್ನು ತೋರಿಸುತ್ತೇನೆ. ಇದು ನನ್ನ ಸ್ವಭಾವ ಅಂತ ರೂಪೇಶ್ ರಾಜಣ್ಣ ಅವರಿಗೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆಯಂತೂ ಜೋರಾಗಿದೆ.