ಕಿರುತೆರೆಯ ಅತ್ಯುತ್ತಮ ನಟಿ ಈಕೆ. ಗುಳಿಕೆನ್ನೆಯ ಈ ಚೆಲುವೆಯನ್ನು ನೋಡಿದರೆ ಎಲ್ಲರಿಗೂ ಒಮ್ಮೆ ಹಾಯ್ ಅನಿಸುತ್ತೆ, ಅಷ್ಟು ಅದ್ಭುತವಾಗಿರುವ ಈಕೆ ಸಕಲ ಕಲಾವಲ್ಲಭೆ. ನಾವು ಯಾರ ಬಗ್ಗೆ ಹೇಳ್ತಾ ಇದ್ದೀವಿ ಅನ್ನೋದು ನಿಮಗೆ ಈಗಾಗಲೇ ಅರಿವಾಗಿರಬಹುದು. ಹೌದು ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ. ಸಾಕಷ್ಟು ಜನರಿಗೆ ವೈಷ್ಣವಿ ಗೌಡ ಅನ್ನುವುದಕ್ಕಿಂತ ಅಗ್ನಿಸಾಕ್ಷಿಯ ಸನ್ನಿಧಿ ಅಂದರೆ ಬೇಗ ತಿಳಿಯುತ್ತೆ.
ಸನ್ನಿಧಿ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಬೇರೂರು ಇರುವ ಚಂದುಳ್ಳಿ ಚೆಲುವೆ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೆ ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಜನರಿಗೆ ಕುತೂಹಲ ಇತ್ತು. ಆ ಸಂದರ್ಭದಲ್ಲಿ ವೈಷ್ಣವಿ ಗೌಡ ಅವರಿಗೆ ಬಿಗ್ ಬಾಸ್ ಮನೆಗೆ ಕರೆ ಬಂತು.
ಬಿಗೋ ಸೀಸನ್ 8ರ ಸ್ಪರ್ಧಿಯಾಗಿ ಆಯ್ಕೆಗೊಂಡ ವೈಷ್ಣವಿ ಗೌಡ ಕೊನೆಯ ಹಂತದವರೆಗೂ ಬಿಗ್ ಬಾಸ್ ನಲ್ಲಿ ಇದ್ದರು ಅವರ ಆಟ ಆಡುವ ಪರಿ, ಅವರ ಸಿಂಪ್ಲಿಸಿಟಿ ಜನರಿಗೆ ಇನ್ನಷ್ಟು ಇಷ್ಟವಾಗಿತ್ತು. ಸನ್ನಿಧಿ ಪಾತ್ರದಲ್ಲಿ ಎಷ್ಟು ಸಿಂಪಲ್ ಆಗಿ ಇದ್ರೂ ನಿಜ ಜೀವನದಲ್ಲಿಯೂ ಕೂಡ ವ್ಯಕ್ತಿತ್ವದಲ್ಲಿ ಅಷ್ಟೇ ಸಿಂಪಲ್ ಸುಂದರಿ ವೈಷ್ಣವಿ ಗೌಡ.
ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಎಂದು ಲಕ್ಷಾಂತರ ಜನ ವೈಷ್ಣವಿ ಗೌಡ ಅವರನ್ನ ಫಾಲೋ ಮಾಡುತ್ತಾರೆ ಸಾಕಷ್ಟು ವಿಡಿಯೋಗಳನ್ನು ಫೋಟೋಗಳನ್ನು ವೈಷ್ಣವಿ ಗೌಡ ಪೋಸ್ಟ್ ಮಾಡುತ್ತಾರೆ. ಅವರ ಯಾವುದೇ ಪೋಸ್ಟ್ ಗೆ ಮೆಚ್ಚುಗೆಯ ಸುರಿಮಳೆ ಸುರಿಸುತ್ತಾರೆ ನೆಟ್ಟಿಗರು.
ಹೌದು ನೋಡೋದಕ್ಕೆ ಅತ್ಯಂತ ಸುಂದರವಾದ ನಟಿ ವೈಷ್ಣವಿ. ಅವರ ಪ್ರತಿಯೊಂದು ಫೋಟೋಗಳು ವಿಡಿಯೋಗಳು ಸಿಕ್ಕಾಪಟ್ಟೆ ಲೈಕ್, ಕಮೆಂಟ್ ಪಡೆದುಕೊಳ್ಳುತ್ತವೆ. ಅಷ್ಟೇ ಅಲ್ಲ ವೈಷ್ಣವಿ ಗೌಡ ಅವರು ಪ್ರಮೋಷನಲ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ .ಇತ್ತೀಚಿಗೆ ಅವರು ಅಮ್ಮನ ಜೊತೆ ಮಾಡಿರುವ ಬಿಸ್ಕೆಟ್ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.
ಇನ್ನು ನಟಿ ವೈಷ್ಣವಿ ಗೌಡ ನಟನೆ ಮಾತ್ರವಲ್ಲದೇ ಡ್ಯಾನ್ಸ್ ನಲ್ಲಿಯೂ ಕೂಡ ಎತ್ತಿದ ಕೈ. ಇವರು ಏರೋಬಿಕ್ಸ್ ನೃತ್ಯ ಮಾಡುವಲ್ಲಿಯೂ ಕೂಡ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ವೈಷ್ಣವಿ ಗೌಡ ಇತ್ತೀಚಿಗೆ ಕನ್ನಡದ ಹೊಸ ಹಾಡೊಂದಕ್ಕೆ ಪಾಪ್ ಸ್ಟೆಪ್ ಹಾಕಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿಗೆ ತಮ್ಮ ಹೊಸ ನೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ವೈಷ್ಣವಿ ಗೌಡ.
ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈಗಾಗಲೇ ವೈಷ್ಣವಿ ಗೌಡ ಅವರ ಈ ವಿಡಿಯೋ ಪೋಸ್ಟ್ ಗೆ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಳು ಬಂದಿವೆ. ನೀವು ಕೂಡ ಅವರ ಈ ವಿಡಿಯೋವನ್ನು ಇಲ್ಲಿ ನೋಡಬಹುದು. ಈ ಸುದ್ದಿ ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.
View this post on Instagram