ಇಂದು ಯುವಕ ಯುವತಿಯರು ಹೆಚ್ಚು ಸಮಯ ಕಳೆಯುವುದು ಸೋಶಿಯಲ್ ಮೀಡಿಯಾದಲ್ಲಿ ಮೊಬೈಲ್ ನಲ್ಲಿ ನೆಟ್ ಒಂದು ಇದ್ರೆ ಸಾಕು ಇನ್ಸ್ಟಾಗ್ರಾಮ್ ಫೇಸ್ಬುಕ್ ಅಷ್ಟೇ ಯಾಕೆ ಇಡೀ ಪ್ರಪಂಚವೇ ಕೈಯಲ್ಲಿ ಇರುತ್ತೆ. ಸೋಶಿಯಲ್ ಮೀಡಿಯಾ ಅನ್ನೋದು ಎಲ್ಲರನ್ನೂ ಬಹುವಾಗಿ ಆಕರ್ಷಿಸುತ್ತೆ ಅದಕ್ಕೆ ಸಿನಿಮಾ ತಾರೆಯರು ಹೊರತಾಗಿಲ್ಲ. ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿ ಸೋತವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುತ್ತಾರೆ.
ಇನ್ನು ಸಾಕಷ್ಟು ಯುವತಿಯರು ತಮ್ಮ ಪ್ರತಿಭೆಯನ್ನು ಇನ್ಸ್ಟಾಗ್ರಾಮ್ ಮೂಲಕ ಜಗತ್ತಿಗೆ ತೋರಿಸಿದ್ದಾರೆ ಯಾವುದೇ ಸಿನಿಮಾ ಹಾಡನ್ನು ಬೇಕಾದರೂ ಟ್ರೆಂಡ್ ಮಾಡುವ ಪ್ರತಿಭೆ ಅವರಲ್ಲಿದೆ. ಇಂದು ಹಲವರು ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ದೇಶದ ಯಾವುದೋ ಮೂಲೆಯಲ್ಲಿ ಕುಳಿತು ವಿಡಿಯೋ ಮಾಡಿ ಪೋಸ್ಟ್ ಮಾಡಿದರೆ.
ಇನ್ಯಾವುದೋ ಪ್ರದೇಶದಲ್ಲಿ ಕುಳಿತ ವ್ಯಕ್ತಿ ಅದನ್ನ ನೋಡಿ ಇಷ್ಟಪಡುವಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ಜನರಿಗೆ ಕನೆಕ್ಟ್ ಆಗಿದೆ. ಸಾಕಷ್ಟು ಜನರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವಕಾಶಗಳು ಕೂಡ ಸಿಗುತ್ತಿರುವುದು ಸೋಶಿಯಲ್ ಮೀಡಿಯಾದ ಮೂಲಕ ಅಂದ್ರೆ ತಪ್ಪಾಗಲ್ಲ. ಸೋಶಿಯಲ್ ಮೀಡಿಯಾ ಮೂಲಕ ಪ್ರಮೋಷನ್ ವಿಡಿಯೋಗಳನ್ನು ಮಾಡಿಯೂ ಹಣ ಗಳಿಸುತ್ತಾರೆ.
ಇನ್ನು ಸಾಮಾಜಿಕ ಜಾಲತಾಣದ ಮೂಲಕ ಕೆಲವು ಯುವತಿಯರು ಸಿಕ್ಕಾಪಟ್ಟೆ ಫೇಮಸ್ ಆಗ್ತಾ ಇದ್ದಾರೆ. ಸಿನಿಮಾ ತಾರೆಯರು ಕೂಡ ನಾಚುವ ರೀತಿಯಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಅಂತಹ ಯುವತಿಯರಲ್ಲಿ ಬಿಂದು ಗೌಡ ಹಾಗೂ ಭೂಮಿಕ ಬಸವರಾಜ್ ಕೂಡ ಸೇರಿಕೊಳ್ಳುತ್ತಾರೆ. ಹೌದು ಬೆಂಗಳೂರಿನ ಬಿಂದುಗೌಡ ಹಾಗೂ ಚಿಕ್ಕಮಂಗಳೂರಿನ ಚೆಲುವೆ ಭೂಮಿಕಾ ಬಸವರಾಜ್ ಸೇರಿಕೊಂಡು ಸಾಕಷ್ಟು ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಾರೆ.
ಯುವಕರಂತೂ ಮತ್ತೆ ಮತ್ತೆ ಅದೇ ಹಾಡುಗಳನ್ನ ರಿಪೀಟ್ ಮಾಡಿಕೊಂಡು ನೋಡುವಷ್ಟು ಸಕ್ಕತ್ತಾಗಿ ಸ್ಟೆಪ್ಸ್ ಹಾಕುತ್ತಾರೆ. ಅಷ್ಟರಮಟ್ಟಿಗೆ ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋಸ್ ಹೊಂದಿದ್ದಾರೆ. ಅವರು ಹಾಕುವ ಪ್ರತಿಯೊಂದು ಪೋಸ್ಟ್ ಗಳಿಗೂ ಸಾವಿರಾರು ಲೈಕ್ ಹಾಗೂ ಕಮೆಂಟ್ ಗಳು ಬರುವುದು ಕಾಮನ್.
ಇನ್ನು ತಮಗೆ ಬರುವ ನೆಗೆಟಿವ್ ಕಮೆಂಟ್ ಇರಲಿ, ಪಾಸಿಟಿವ್ ಕಮೆಂಟ್ ಇರಲಿ ಎಲ್ಲವನ್ನು ಒಂದೇ ತೆರನಾಗಿ ಸ್ವೀಕರಿಸುವ ಈ ಸುಂದರಿಯರು ಇತ್ತೀಚಿಗೆ ಟ್ರಾವೆಲ್ ಕೂಡ ಒಟ್ಟಾಗಿ ಮಾಡುತ್ತಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಭೂಮಿಕ ಬಸವರಾಜ್ ಸಿನಿಮಾದಲ್ಲಿ ಅಭಿನಯಿಸುವ ಬಹುದೊಡ್ಡ ಕನಸನ್ನು ಹೊಂದಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಭೂಮಿಕಾ ಬಸವರಾಜ್ ಅವರನ್ನು ನಿರೀಕ್ಷೆ ಮಾಡಲಾಗಿತ್ತು.
ಆದರೆ ಇದು ಗಾಸಿಪ್ ಆಗಿ ಉಳಿದುಕೊಂಡಿದೆ. ಭೂಮಿಕಾ ಬಸವರಾಜ್ ಹಾಗೂ ಬಿಂದುಗೌಡ ಇಬ್ಬರು ಒಟ್ಟಾಗಿ ಸಾಕಷ್ಟು ಟ್ರಾವೆಲ್ ಕೂಡ ಮಾಡುತ್ತಾರೆ. ಟ್ರಾವೆಲಿಂಗ್ ಸಮಯದಲ್ಲಿ ತಪ್ಪದೇ ಇನ್ಸ್ಟಾಗ್ರಾಮ್ ರೀಲ್ಸ್ ಕೂಡ ಮಾಡಿ ಅಪ್ಲೋಡ್ ಮಾಡುತ್ತಾರೆ. ಇತ್ತೀಚಿಗೆ ಬಿಂದು ಹಾಗೂ ಭೂಮಿಕಾ ಇಬ್ಬರು ಸುದೀಪ್ ಅವರ ಜುಮ್ ಜುಂ ಮಾಯ ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ್ದಾರೆ. ಇಬ್ಬರು ಸೀರೆ ಉಟ್ಟು ಮಿಂಚಿದ್ದಾರೆ. ಸ್ಟಾರ್ ನಟಿಯರೂ ನಾಚುವ ರೀತಿಯಲ್ಲಿದೆ ಭೂಮಿಕಾ ಬಸವರಾಜ್ ಹಾಗೂ ಬಿಂದು ಗೌಡ ಅವರ ನೃತ್ಯ.
View this post on Instagram